ಮುಂಡರಗಿ: ಪಟ್ಟಣದ ಶ್ರೀ ಜ.ಅ.ವಿದ್ಯಾ ಸಮಿತಿಯ ಕ.ರಾ.ಬೆಲ್ಲದ ಮಹಾವಿದ್ಯಾಲಯದ ಸಭಾಭವನದಲ್ಲಿ NCC ದಿನಾಚರಣೆಯನ್ನ ಆಚರಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ವಹಿಸಿದ್ದರು. ಈ ವೇಳೆ ಆಶಿರ್ವಚನ ನೀಡಿದ ಶ್ರೀಗಳು, NCC ದೇಶದ ಮುಖ್ಯವಾದ ಅಂಗವಾಗಿದ್ದು, ಇಂದಿನ ಮಕ್ಕಳಲ್ಲಿ ಶಿಸ್ತು, ಸಂಯಮ, ದೇಶಭಕ್ತಿ ಬೆಳೆಸಲು ಒಳ್ಳೆಯ ತರಬೇತಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ 38 ಬೆಟಾಲಿಯನ್ NCC ಗದಗ ವಿಭಾಗದ AO ಕರ್ನಲ್ ರೂಪವಿಂದರ್ ಸಿಂಗ್ ಮಾತನಾಡಿ, NCC ಸೈನ್ಯದ 2 ನೇ ಭಾಗವಾಗಿದ್ದು, ಮಕ್ಕಳು ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ವಿದ್ಯಾವಂತರಾಗಿ ದೇಶದ ಕೀರ್ತಿಯನ್ನು ಬೆಳಗಿಸಿ.ಇದಕ್ಕೆಲ್ಲ NCC ತರಬೇತಿ ನಿಮಗೆ ಸಹಕಾರಿಯಾಗಲಿದೆ ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಜಿ.ಜವಳಿ ಅವರು ಮಾತನಾಡಿ, ಅನ್ನದಾನೀಶ್ವರ ಸಂಸ್ಥೆಯು ಶತಮಾನೋತ್ಸವವನ್ನುಆಚರಿಸುತ್ತಿದ್ದು, ಇಂಥಹ ಸಂಭ್ರಮದಲ್ಲಿ ಮುಂದಿನ ವರ್ಷಕ್ಕೆ ನಮ್ಮ ಸಂಸ್ಥೆಗೆ NCC ಸೇರ್ಪಡೆಗೊಂಡು 25 ವರ್ಷ ತುಂಬಲಿದೆ ಎಂದು ಹೇಳಿದರು.
ಎಂ.ಎಸ್.ಡಂಬಳ ಹೆಣ್ಣುಮಕ್ಕಳ ಪ್ರೌಢಶಾಲೆಯ ಚೇರ್ಮನ್ನರಾದ ಎಂ.ಎಸ್.ಶಿವಶೆಟ್ಟಿ ಮಕ್ಕಳಲ್ಲಿ ಶಿಸ್ತು, ಹಾಗೂ NCC ಗೆ ಸೇರುವದರಿಂದ ಏನೆಲ್ಲ ಪ್ರಯೋಜನಗಳಿವೆ ಎಂದು ವಿವರಿಸಿದರು.
ಎಂ.ಎಸ್.ಡಂಬಳ ಹೆಣ್ಣುಮಕ್ಕಳ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಎಸ್.ಆರ್.ರಿತ್ತಿ ಉಪನ್ಯಾಸ ನೀಡುತ್ತಾ, ಭಾರತೀಯ ಸೇನಾ ಧ್ವಜ ದಿನಾಚರಣೆ ಮತ್ತು ದೇಶಕ್ಕಾಗಿ ಸೈನ್ಯದ ಕಾರ್ಯದ ಬಗ್ಗೆ ಮಾತನಾಡಿದರು.
ಬಾಲಕರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಸ್. ಸಿ. ಚಕ್ಕಡಿಮಠ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ಶ್ರೀ ಕೆ.ವಿ.ಹಂಚಿನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಕರ್ನಲ್ ರೂಪವಿಂದರ್ ಸಿಂಗ್ ಅವರನ್ನ ಪೂಜ್ಯ ಶ್ರೀಗಳು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ NCC ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯ್ತು. ನಂತರ NCC ವಿದ್ಯಾರ್ಥಿಗಳು ಹಾಗೂ ಪಾಲಕರ ಜೊತೆ ರೂಪವಿಂದರಸಿಂಗ್ ಸಂವಾದ ಕಾರ್ಯಕ್ರಮ ನಡೆಸಿದರು.
ಕೆಡೆಟ್ಸಗಳಿಂದ ಪ್ರಾರ್ಥನೆ ಜರುಗಿತು. ಸಮೃದ್ಧ ಹಿರೇಮಠ ಹಾಗೂ ಸಿಂಚನಾ ಕಾರ್ಯಕ್ರಮ ನಿರೂಪಿಸಿದರು.ಶೃತಿ ಪಾಟೀಲ ವಂದಿಸಿದರು .
ಕಾರ್ಯಕ್ರಮದಲ್ಲಿ NCC ಅಧಿಕಾರಿ ನಾಗಭೂಷಣ. ಹಿರೇಮಠ, ಪ್ರೊ. ಸಿ.ಎಸ್.ಅರಸನಾಳ, ಶಿಕ್ಷಕರಾದ ಉಳ್ಳಾಗಡ್ಡಿ, ಪಿಐ ಸಿಬ್ಬಂದಿ ಷಹಾಜಿ… ಮತ್ತು NCC ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.