ಸಾಮಾನ್ಯವಾಗಿ ಕುಟುಂಬದಲ್ಲಿ ನಾಯಿ, ಬೆಕ್ಕು,ಗಿಳಿ, ಪಾರಿವಾಳ ಸಾಕೋದನ್ನ ನೋಡಿದ್ದೇವೆ. ಅಷ್ಟೇ ಪ್ರೀತಿಯಿಂದ ಅವುಗಳನ್ನ ಮನೆಯಲ್ಲಿ ಯಾರಾದ್ರೂ ಅದಕ್ಕೆ ಜಾಸ್ತಿ ಅಟ್ಯಾಚ್ ಆಗಿರೋದನ್ನ ಸಹ ನೋಡಿದ್ದೇವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಅದೇ ಸಾಕುಪ್ರಾಣಿಯ ಪ್ರೀತಿ ಗಂಡ ಹೆಂಡತಿ ನಡುವೆ ಬಿರುಕು ಮೂಡಿಸಿದೆ.
ಹೌದು, ಮನೆಯಲ್ಲಿ ಸಾಕಿರುವ ಬೆಕ್ಕಿನ ಬಗ್ಗೆ ತನಗಿಂತ ಹೆಚ್ಚು ಪ್ರೀತಿ, ಕಾಳಜಿ ವಹಿಸುತ್ತಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಕರ್ನಾಟಕ ಹೈಕೋರ್ಟ್‌ಲ್ಲಿ ತನ್ನ ಪತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆದರೆ ಇಂತಹ ಪ್ರಕರಣವನ್ನು ವಜಾಗೊಳಿಸಿದ ಹೈಕೋರ್ಟ್, “ಸಾಕು ಬೆಕ್ಕಿನ ಕುರಿತು ಉಂಟಾದ ಜಗಳದ ಮೇಲೆ ಮಾಡಿರುವ ಆರೋಪ ಆಧಾರರಹಿತವಾಗಿದೆ. ಇದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದೆ. ಇಂತಹ ಕ್ಷುಲ್ಲಕ ಪ್ರಕರಣಗಳು ಇಂದು ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನೇ ಮುಚ್ಚಿಹಾಕಿವೆ” ಪ್ರಕರಣದಲ್ಲಿ ಶಿಕ್ಷಾರ್ಹ ವಿಚಾರವೇ ಇಲ್ಲ ಎಂದು ಹೇಳಿ ಕಳಿಸಿದೆ.