ಲಕ್ಷ್ಮೇಶ್ವರ: ಇಂದಿನ ಮಕ್ಕಳೇ ನಾಳಿನ ನಾಗರಿಕರು ಮಾತ್ರವಲ್ಲ, ಮಕ್ಕಳೇ ದೇಶದ ಸಂಪತ್ತು, ಮಕ್ಕಳ ಸರ್ವಾಂಗೀಣ ವಿಕಾಸ ಪ್ರತಿಯೊಬ್ಬರ ಹೊಣೆಯಾಗಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು.
ತಾಲೂಕಿನ ಬಾಲೆಹೊಸೂರ ಗ್ರಾಮದ ಶ್ರೀ ದಿಂಗಾಲೇಶ್ವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೪ ಲಕ್ಷ ರೂ ಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ವರದಿ : ಪರಮೇಶ ಎಸ್ ಲಮಾಣಿ
ಸುಮಾರು ವರ್ಷಗಳಿಂದ ಕ್ಷೇತ್ರದಲ್ಲಿ ನನೆಗುದಿಗೆ ಬಿದ್ದಿದ್ದ ಶಾಲೆ ಕಟ್ಟಡದ ಕೊರತೆ ನೀಗಿಸುವ ಭಾಗ್ಯ ನನಗೆ ಬಂದಿದೆ. ಗ್ರಾಮದ ಜನತೆಯ ಕನಸು ನನಸಾದಂತಾಗಿದೆ ಎಂದರು.
ಕ್ಷೇತ್ರದ ಹಳ್ಳಿಗಳಲ್ಲಿ ಶಾಲೆಗಳು ವ್ಯವಸ್ಥಿತವಾಗಬೇಕು. ಗ್ರಾಮೀಣ ಭಾಗದ ಮಕ್ಕಳು ವಿದ್ಯಾವಂತರಾಗಬೇಕು ಎಂಬ ಅಭಿಲಾಷೆ ನಮ್ಮದಾಗಿದೆ. ನನ್ನ ಮೊದಲ ಆದ್ಯತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮತ್ತು ಶಿಕ್ಷಣಕ್ಕೆ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಭೀಮಣ್ಣ ಒಂಟಿ, ನಿಂಗಪ್ಪ ಪ್ಯಾಟಿ, ಚೆನ್ನಮ್ಮ ಮೈಲಾರಿ, ನಾಗಯ್ಯ ಮಠಪತಿ, ಸಿದ್ದಪ್ಪ ನೆಗೆನಹಳ್ಳಿ, ವಿರೂಪಾಕ್ಷಪ್ಪ ಮರಳಿಹಳ್ಳಿ, ನಾಗಪ್ಪ ಸಣ್ಣತೋಟಿಗೇರ, ಶರಣಪ್ಪ ಮರಳಿಹಳ್ಳಿ, ಪರಶುರಾಮ ಮೈಲಾರಿ, ಹೂವಪ್ಪ ದೀಪಾವಳಿ, ಶಿವಣ್ಣ ಲಮಾಣಿ, ಸೋಮರೆಡ್ಡಿ ಲಮಾಣಿ, ಹನುಮಂತಪ್ಪ ನಾವಿ, ಶೇಖರಗೌಡರ ವಡಕನಗೌಡ್ರ, ಸುರೇಶ್ ಹಾವನೂರ್, ಕರಬಸಪ್ಪ ಮೂಲಿಮನಿ, ರಮೇಶ ಜೋಗೆರ, ಸಂಜೀವ ಸಾಲಿ, ಪ್ರಶಾಂತ ಹೊಸಬಾವಿ ಇತರರು ಉಪಸ್ಥಿತರಿದ್ದರು..
