ಮುಂಡರಗಿ:ಗದಗ ಜಿಲ್ಲೆಯ ಮುಂಡರಗಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ 4.10 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು ಮತ್ತು 90 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.
ಫೆಬ್ರವರಿ 8, 2025 ರಂದು ಪಟ್ಟಣದ ಎಸ್.ಎಸ್. ಪಾಟೀಲ ನಗರದಲ್ಲಿರುವ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳ್ಳತನದ ಪತ್ತೆಗೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಯಿತು.

ಹೆಚ್ಚುವರಿ ಎಸ್.ಪಿ. ಎಂ.ಬಿ. ಸಂಕದ, ಡಿಎಸ್.ಪಿ. ಪ್ರಭುಗೌಡ ಕಿರೇದಳ್ಳಿ (ನರಗುಂದ ಉಪ ವಿಭಾಗ) ಅವರ ನೇತೃತ್ವದಲ್ಲಿ, ಪೋಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ ಕುಸುಗಲ್, ಸಬ್ ಇನ್ಸ್‌ಪೆಕ್ಟರ್‌ಗಳಾದ ವಿ.ಜಿ. ಪವಾರ ಮತ್ತು ಬಿ.ಎನ್. ಯಳವತ್ತಿ ಸೇರಿದಂತೆ ನುರಿತ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತು.
ಆರೋಪಿ ಬಂಧನ
ಮಾರ್ಚ್ 19, 2025 ರಂದು ಕೂಲಿ ಕಾರ್ಮಿಕ ಕಾರ್ತಿಕ್ ಅಪ್ಪಣ್ಣ ಕೊಂಪಿ (24) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮುಂಡರಗಿ ಮತ್ತು ಅಣ್ಣಿಗೇರಿ ಪ್ರದೇಶಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ವಶಪಡಿಸಿಕೊಂಡ ವಸ್ತುಗಳು
ಮುಂಡರಗಿ ಪೊಲೀಸ್ ಠಾಣೆ ಪ್ರಕರಣ
ಒಂದು ಹ್ಯಾಂಗಿಂಗ್ಸ್ – 4.010 ಗ್ರಾಂ
ಕಿವಿ ಚೈನ್ (ಮಾಟೀಲ) – 3.940 ಗ್ರಾಂ
ಮೂಗನತ್ತುಗಳು – 0.440 ಗ್ರಾಂ
ನಗದು – ₹90,000
ಅಣ್ಣಿಗೇರಿ ಪೊಲೀಸ್ ಠಾಣೆ ಪ್ರಕರಣ:
ನಾಲ್ಕು ಬಂಗಾರದ ಬಳೆಗಳು – 46.490 ಗ್ರಾಂ
ಒಟ್ಟು ಮೌಲ್ಯ: ₹5 ಲಕ್ಷ
ಕಾನೂನು ಕ್ರಮ ಮತ್ತು ಪ್ರಶಂಸೆ
ಆರೋಪಿ ವಿರುದ್ಧ ಮುಂಡರಗಿ ಮತ್ತು ಅಣ್ಣಿಗೇರಿ ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಗೆ ಪೋಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ ಕುಸುಗಲ್, ಸಬ್ ಇನ್ಸ್‌ಪೆಕ್ಟರ್‌ಗಳು ವಿ.ಜಿ. ಪವಾರ ಮತ್ತು ಬಿ.ಎನ್. ಯಳವತ್ತಿ ಅವರ ನೇತೃತ್ವದಲ್ಲಿ ಎ.ಎಸ್.ಐ. ಎಸ್.ಎಮ್. ಹಡಪದ, ಗುರು ಬೂದಿಹಾಳ, ಜೆ.ಐ. ಬಚ್ಚೇರಿ, ವಿ.ಬಿ. ಬಿಸನಹಳ್ಳಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳು ಶ್ರಮಿಸಿದ್ದರು.
ಇವರ ಸಾಧನೆಗೆ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಬಿ.ಎಸ್. ನೇಮಗೌಡ ಹಾಗೂ ಹೆಚ್ಚುವರಿ ಎಸ್.ಪಿ. ಎಂ.ಬಿ. ಸಂಕದ ಅವರು ತಂಡದ ಕಾರ್ಯವನ್ನು ಪ್ರಶಂಸಿಸಿದ್ದಾರೆ. ಶೀಘ್ರದಲ್ಲೇ ಸೂಕ್ತ ಬಹುಮಾನ ಘೋಷಿಸಲು ನಿರ್ಧರಿಸಲಾಗಿದೆ.