ಮೈಸೂರು: ನಿಮಗೆ ಕಾಮನ್ ಸೆನ್ಸ್ ಇದೆಯಾ? ಮಾಧ್ಯಮಗಳನ್ನ ಕಂಡು ಗರಂ ಆಗಿದ್ದಾರೆ ಡಿ.ಬಿ.ನಟೇಶ್. ಅಂದಹಾಗೆ ಈ ನಟೇಶ್ ಯಾರು ಅಂತೀರಾ,ಸದ್ಯ ಸಿಎಂ ಸಿದ್ಧರಾಮಯ್ಯ ವಿರುದ್ಧ ಭುಗಿಲೆದ್ದಿರೋ ಮುಡಾದ ಹಿಂದಿನ ಅಧ್ಯಕ್ಷ. ಡಿ.ಬಿ.ನಟೇಶ್. ನಟೇಶ್ ಇಂದು ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಆಗಮಿಸಿದ್ದಾರೆ.
ಈ ವೇಳೆ ಮಾಧ್ಯಮಗಳ ಕ್ಯಾಮರಾ ಕಂಡು ಗರಂ ಆಗಿದ್ದಾರೆ. ನಾನೇನು ಡ್ಯಾನ್ಸ್ ಮಾಡ್ತಾ ಇದ್ದೀನಾ ? ನನ್ನ ವಿಡಿಯೋ ಏಕೆ ತೆಗೆಯುತ್ತಿದ್ದೀರಾ ಅಂತಾ ಗರಂ ಆದ್ರು. ಆಟೋದಲ್ಲಿ ಲೋಕಾಯುಕ್ತ ಕಚೇರಿಗೆ ಆಗಮಿಸಿದ ನಟೇಶ್ ಮುಖದಲ್ಲಿ ಗಾಬರಿ, ಆತಂಕ ಸಹಜವಾಗಿ ಮನೆಮಾಡಿತ್ತು. ಈ ನಡುವೆ ಮಾಧ್ಯಮಗಳ ಕಣ್ತಪ್ಪಿಸಿ ಹೋಗಲು ಯತ್ನಿಸಿದ್ರು. ವಿಡಿಯೋ ತೆಗೆದುಕೊಳ್ಳಲು ಮುಂದಾಗಿದ್ದಕ್ಕೆ ಮಾಧ್ಯಮದವರ ವಿರುದ್ಧ ಸಿಡಿಮಿಡಿಗೊಂಡ್ರು.
ಮುಡಾ 50:50 ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ, ನಟೇಶ್ ಅವರು ಮುಡಾದ ಆಯುಕ್ತರಾಗಿದ್ದಾರೆ. ಸಿಎಂ ಪತ್ನಿ ಪಾರ್ವತಿ ಅವರಿಗೆ 14 ಸೈಟು ನೀಡಿರುವ ನಟೇಶ್
ಕಾನೂನು ಬಾಹಿರವಾಗಿ ನಿಯಮ ಉಲ್ಲಂಘನೆ ಮಾಡಿ ಸೈಟು ಹಂಚಿಕೆ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನಲೆ ಲೋಕ ಎಸ್ಪಿ ನೋಟಿಸ್ ನೀಡಿದ್ದು, ಇಂದು ವಿಚಾರಣೆ ಎದುರಿಸಲು ಆಗಮಿಸಿದ್ದಾರೆ.
ಸದ್ಯ ಈ ಪ್ರಕರಣದಲ್ಲಿ ಇವರ ವಿಚಾರಣೆ ತೀವ್ರ ಕುತೂಹಲ ಮೂಡಿಸಿದ್ದು, ಸಿದ್ದರಾಮಯ್ಯ ಕುಟುಂಬದ ಸೈಟು ಹಂಚಿಕೆ ವಿಚಾರದಲ್ಲಿ ನಟೇಶ್, ಪ್ರಮುಖ ಆರೋಪಿಯಾಗಿದ್ದಾರೆ.