Home » News » ಗದಗ ಚಿಕ್ಕಟ್ಟಿ ಶಾಲಾ ಕಾಲೇಜುಗಳಲ್ಲಿ ಅಭಿಪ್ರೇರಣಾ ಕಾರ್ಯಕ್ರಮ – ೦೧: ವಿಶೇಷವಾದ ಜ್ಞಾನ, ಕೌಶಲ್ಯ ಮತ್ತು ವರ್ತನೆ ಉಳ್ಳವರು ಸಾಧಕರಾಗುತ್ತಾರೆ-ಡಾ. ಆನಂದ ಎ. ಕುಲಕರ್ಣಿ..

ಗದಗ ಚಿಕ್ಕಟ್ಟಿ ಶಾಲಾ ಕಾಲೇಜುಗಳಲ್ಲಿ ಅಭಿಪ್ರೇರಣಾ ಕಾರ್ಯಕ್ರಮ – ೦೧: ವಿಶೇಷವಾದ ಜ್ಞಾನ, ಕೌಶಲ್ಯ ಮತ್ತು ವರ್ತನೆ ಉಳ್ಳವರು ಸಾಧಕರಾಗುತ್ತಾರೆ-ಡಾ. ಆನಂದ ಎ. ಕುಲಕರ್ಣಿ..

by CityXPress
0 comments

ಗದಗ: ನಿಮ್ಮ ತಂದೆ-ತಾಯಿಯರನ್ನು ಹಾಗೂ ಗುರು-ಹಿರಿಯರನ್ನು ಗೌರವಿಸುತ್ತಾ ಮುನ್ನಡೆದರೆ ತಾವು ಖಂಡಿತವಾಗಿ ಸಾಧಕರಾಗುತ್ತೀರಿ, ಜೊತೆಗೆ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗುತ್ತೀರಿ ಎಂದು ಹುಬ್ಬಳ್ಳಿಯ ಹೋಮಿಯೊಪಥಿಕ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಮತ್ತು ವೈದ್ಯಕೀಯ ಅಧೀಕ್ಷಕರಾದ ಡಾ. ಆನಂದ ಎ. ಕುಲಕರ್ಣಿಯವರು ಹೇಳಿದರು.

ನಗರದ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ಅಭಿಪ್ರೇರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಚಿಕ್ಕಟ್ಟಿ ಕ್ಯಾಂಪಸ್ನಲ್ಲಿರುವ ಪರಿಸರ ಶಿಕ್ಷಣಕ್ಕೆ ಪೂರಕವಾದ ಪರಿಸರ, ಶಾಂತತೆಯ ವಾತಾವರಣವನ್ನು ಗಮನಿಸಿದಾಗ ನನಗೆ ಜಲಸಿಯಾಗುತ್ತದೆ. ನಾನು ವಿದ್ಯಾಭ್ಯಾಸ ಮಾಡುವ  ಸಂದರ್ಭದಲ್ಲಿ ಇಂತಹ ಶಿಕ್ಷಣ ಸಂಸ್ಥೆ ನನಗೆ ದೊರೆಯುದಿರುವುದು. ಇಲ್ಲಿ ಓದುವ ಎಲ್ಲ ವಿದ್ಯಾರ್ಥಿಗಳು ತಾವು ಭಾಗ್ಯವಂತರು ಎಂದರು.

ತಮ್ಮ ಜೀವನದಲ್ಲಿ ಮುಂದೆ ಯಾವ ಹುದ್ದೆಯನ್ನಾದರು ಅಲಂಕರಿಸಿರಿ. ಆ ಹುದ್ದೆಯಲ್ಲಿ ತಾವು ಶ್ರೇಷ್ಠ ಅಧಿಕಾರಿಯಾಗಬೇಕಾದರೆ ಮೊದಲು ಸಮಯಕ್ಕೆ ಸರಿಯಾಗಿ ನಡೆದುಕೊಳ್ಳಬೇಕು. ನಂತರ ಹೇಳಿದನ್ನೆ ಮಾಡಬೇಕು – ಮಾಡುವುದನ್ನೆ ಹೇಳಬೇಕು. ಈ ಎರಡು  ಅಂಶಗಳನ್ನು ಪಾಲಿಸುತ್ತಾ ಹೇಗೆ ನೀವು ನಿಮ್ಮ ಮೆದುಳಿನ ನಾನಾ ಭಾಗಗಳಿಗೆ ವಿವಿಧ ಕೆಲಸ ಕಾರ್ಯಗಳನ್ನು ಮಾಡಲು ತಿಳಿಸುತ್ತಿರೋ ಅದೇ ಜ್ಞಾನ. ಹೀಗೆ ಜ್ಞಾನ, ಕೌಶಲ್ಯ ಮತ್ತು ವರ್ತನೆ ಇವುಗಳನ್ನ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಬಹುಮುಖ್ಯವಾದ ಅಂಶಗಳಾಗಿವೆ ಎಂದರು.

banner

ಸಮಾರಂಭದಲ್ಲಿ ಡಾ. ಆನಂದ ಎ. ಕುಲಕರ್ಣಿಯವರನ್ನು ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ಇನ್ನೋರ್ವ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ, ಗದಗ ಜಿಲ್ಲಾ ಅಗ್ನಿಶಾಮಕ ಇಲಾಖೆ ಅಧಿಕಾರಿಗಳಾದ ಶ್ರೀ ವಿ. ಎಸ್ ಟಕ್ಕೇಕರ್, ಮಾತನಾಡಿ, ವಿದ್ಯಾರ್ಥಿಗಳಿಗೆ ‘ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು’ಜೀವನದಲ್ಲಿ ಗುರಿ ಮತ್ತು ಛಲ ಇಲ್ಲದಿದ್ದರೆ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ತಾವು ಮುಂದೆ ಎನಾಗಬೇಕೆನ್ನುವ ಗುರಿಯನ್ನಿಟ್ಟುಕೊಂಡು ಸಾಗಿದರೇ ಮಾತ್ರ ಸಾಧಕರಾಗಲು ಸಾಧ್ಯ.ಸುಮ್ಮನೇ ಓದುತ್ತ ಹೋದರೆ ಸಾಲದು, ಬದಲಿಗೆ ಒಂದು ನಿರ್ದಿಷ್ಟ ಗುರಿಯೊಂದಿಗೆ ಓದಬೇಕು. ಎಲ್ಲರೂ ಎನನ್ನೋ ಸಾಧಿಸುತ್ತಾರೆ. ನಮ್ಮಿಂದೇಕೆ ಸಾಧನೆ ಮಾಡಲು ಸಾಧ್ಯವಿಲ್ಲ. ಎಲ್ಲರೂ ಹೆಚ್ಚಿನ ಆಸಕ್ತಿ ಮತ್ತು ಶ್ರದ್ಧೆಯಿಂದ ಓದಬೇಕೆಂದು ಕಿವಿಮಾತನ್ನು ಹೇಳಿದರು.

ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್. ವಾಯ್ ಚಿಕ್ಕಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಶೈಕ್ಷಣಿಕ ವರ್ಷದ ಪ್ರಥಮ ಪ್ರೇರಣಾ ಕಾರ್ಯಕ್ರಮದ ಕುರಿತು ಮಾತನಾಡುತ್ತ, ಡಾ. ಆನಂದ ಎ. ಕುಲಕರ್ಣಿಯವರು ಪ್ರಾಂಶುಪಾಲರಾಗಿ, ವೈದ್ಯರಾಗಿ ಅಷ್ಟೇ ಅಲ್ಲದೆ ಸಾಮಾಜಿಕವಾಗಿಯೂ ಸಹ ಸೇವೆ ಸಲ್ಲಿಸುತ್ತಿದ್ದಾರೆ.ಉಳಿದವರೆಲ್ಲ ಪುಸ್ತಕದಲ್ಲಿರುವುದನ್ನು ಮಾತ್ರ ಹೇಳಿದರೆ ವೈದ್ಯರು ತಮ್ಮ ಅನುಭವದಿಂದ ಹೇಳುತ್ತಾರೆ. ಅವರು ತಿಳಿಸುವ ವಿಷಯವನ್ನು ಕೇವಲ 10 ನೇ ತರಗತಿ, ಪಿಯುಸಿಗೆ ಅಷ್ಟೇ ಉಪಯೋಗಿಸುವುದಲ್ಲ, ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬೇಕು. ಅವರ ಈ ಮಾರ್ಗದರ್ಶನ ಕೇವಲ ಮಕ್ಕಳಿಗೆಷ್ಟೇ ಅಲ್ಲದೇ ಪಾಲಕರು ಹಾಗೂ ನಮ್ಮ ಶಿಕ್ಷಕ ವೃಂದದವರಿಗೂ ಅ ವಶ್ಯಕತೆಯಿದೆ. ಸಾಧಕರನ್ನು ಹುಡುಕಿಕೊಂಡು ಹೋಗದೇ ನಮ್ಮ ಮಧ್ಯದಲ್ಲಿಯೇ ಇರುವಂತ ಸಾಧಕರಾದ ಡಾ. ಆನಂದ ಕುಲಕರ್ಣಿಯವರನ್ನು ನೋಡಿ ಅವರ ತತ್ವ ಆದರ್ಶಗಳನ್ನು ಪಾಲಿಸೋಣ ಎಂದುರು.

 ಅಭಿಪ್ರೇರಣಾ ಕಾರ್ಯಾಕ್ರಮದಲ್ಲಿ ಗದಗ ನಿವೃತ್ತ ಎ. ಎಸ್ ಐ, ಅಧಿಕಾರಿಗಳಾದ ಶ್ರೀ. ಜಿ. ಕೆ. ನಾಗರಹಳ್ಳಿ ಸರ್, ಬಿಸಿಎ ಪದವಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಬಿಪಿನ್ ಎಸ್ ಚಿಕ್ಕಟ್ಟಿಯವರು ಉಪಸ್ಥಿತರಿದ್ದರು.

 ಕಾರ್ಯಕ್ರಮದ ನಿರೂಪಣೆಯನ್ನು ಕಾಲೇಜು ವಿದ್ಯಾರ್ಥಿನಿಯರಾದ ವೈದೃತಿ ಕೋರಿಶೆಟ್ಟರ,ರಕ್ಷಾ. ವಿ. ಸೂಪ್ಪಿನ ಹಾಗೂ ಮಂಜುಳಾ ಹ ಬುಳ್ಳೆಪ್ಪನವರ್ ನಿರ್ವಹಿಸಿದರು. ಬಸ್ ಚಾಲಕರಾದ ಶ್ರೀ ಶೇಖರಪ್ಪ ಅಣ್ಣಿಗೇರಿಯವರ ಪ್ರಾರ್ಥನಾ ಗೀತೆ ಸಾದರಪಡಿಸಿದರೆ,ವಿದ್ಯಾರ್ಥಿನಿಯರಾದ ಈರ್ಷಾದಬಾನು ಎನ್ ಮಜೀದ ಹಾಗೂ ಪ್ರತೀಭಾ ಮುಳಗುಂದ ಸ್ವಗತಿಸಿದರು. ಪ್ರೀತಿ ಯಳವತ್ತಿ ಹಾಗೂ ದಿವ್ಯ ಮುರಗೋಡ, ಪ್ರತೀಭಾ ಮುಳಗುಂದ ಹಾಗೂ ಈರ್ಷಾದಬಾನು ಎನ್ ಮಜೀದ ಅತಿಥಿಗಳ ಪರಿಚಯ ಮಾಡಿಕೊಟ್ಟರು. ವಿದ್ಯಾರ್ಥಿನಿಯಾದ ಸಾನ್ವಿ ಆರ್ ಕಲಾರ್ ವಂದನಾರ್ಪಣೆಗೈದಳು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb