ಗದಗ:ಜಿಮ್ ಸೆಂಟರ್ ಗೆ ಕೋತಿಯೊಂದು ಎಂಟ್ರಿ ಕೊಟ್ಟಿದ್ದಕ್ಕೆ ಜಿಮ್ ಮಾಡುವ ಯುವಕರು ಎದ್ನೋ ಬಿದ್ನೋ ಅಂತ ಸ್ಥಳದಿಂದ ಓಡಿಹೋಗಿರೋ ಘಟನೆ ಧಾರವಾಡದ ಸೈದಾಪುರ್ ಜಿಮ್ ನಲ್ಲಿ ನಡೆದಿದೆ.
ಇಂದು ಬೆಳಗ್ಗೆ ಕಿಂಗಡಂ ಅನ್ನೋ ಜಿಮ್ ನಲ್ಲಿ ಯುವಕರು ಜಿಮ್ ಮಾಡುವ ವೇಳೆ, ಏಕಾಏಕಿ ಕಪ್ಪು ಕೋತಿಯೊಂದು ಹಲ್ಲು ಕಿರಿಯುತ್ತಾ ಒಳಗಡೆ ಬಂದಿದೆ. ಕೋತಿ ನೋಡಿದ ಯುವಕರು ಜಿಮ್ ಮಾಡೋದನ್ನ ಬಿಟ್ಟು ಕೋತಿಗೆ ಭಯಪಟ್ಟು ನಿಂತಿದ್ದಾರೆ. ಯುವಕರನ್ನ ಹೆದರಿಸುತ್ತಲೇ ಜಿಮ್ ತುಂಬೆಲ್ಲಾ ಕೋತಿ ತಿರುಗಾಡಿದೆ.
ನಂತರ ಒಂದಿಷ್ಟು ಯುವಕರು ಜಿಮ್ ನಿಂದ ಹೊರಗಡೆ ಓಡಿ ಹೋಗಿದ್ದಾರೆ. ಕೋತಿಯೂ ಸಹ ಅವರನ್ನ ಅಟ್ಟಿಸಿಕೊಂಡು ಹೊರಗಡೆ ಹೋಗಿದೆ. ಆನಂತರ ಜಿಮ್ ಒಳಗಡೆ ಇದ್ದ ಯುವಕರು, ಕೈಯಲ್ಲಿ ಸ್ಟಿಕ್ ಹಿಡಿದು ಕೋತಿ ಬೆನ್ನಟ್ಟಿದ್ದಾರೆ. ಈ ಎಲ್ಲ ದೃಶ್ಯಗಳು ಜಿಮ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನೀವೂ ಸಹ ನೋಡಬಹುದು.