ಗದಗ: ಉಪಚುನಾವಣೆ ಫಲಿತಾಂಶ ಕಾಂಗ್ರೆಸ್ ಪಾಲಾದ ಬೆನ್ನಲ್ಲೇ, ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ, ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಗೆ ರಾಜ್ಯದ ಜನ ಮಂಗಳಾರತಿ ಮಾಡಿದ್ದಾರೆ.ಈ ಉಪಚುನಾವಣೆ ಬಹಳ ಮಹತ್ವದ್ದಾಗಿತ್ತು.ರಾಜ್ಯದ ಹಲವಾರು ಬೆಳೆವಣಿಗೆಗಳಿಗೆ ಸಮರ್ಪಕ ಉತ್ತರ ನೀಡಿ ಮಂಗಳಾರತಿ ಮಾಡಿದ್ದು, ವಿರೋಧ ಪಕ್ಷದವರು,ಸಮಾಜ ಒಡೆಯುವ ದೊಡ್ಡ ಹುನ್ನಾರ ಮಾಡಿದ್ದರು.ವಕ್ಫ್ ಹೆಸರಲ್ಲಿ ಸಮಾಜ ಒಡೆಯುವ ಕೆಲಸ ಮಾಡಿದ್ದರು.ಗ್ಯಾರಂಟಿ ನಿಲ್ಲಿಸುತ್ತೇವೆ ಅಂತ ಪ್ರಧಾನಿವರಿಗೂ ಸುಳ್ಳು ಹೇಳಿ ಗೊಂದಲ ಸೃಷ್ಟಿಸಿದರು. ಮುಖ್ಯಮಂತ್ರಿ ತೇಜೋವಧೆ ಮಾಡಿ ಸರ್ಕಾರ ಉಳಿಯೋದಿಲ್ಲ ಅಂತ ಹೇಳಿದ್ರು. ಆದರೆ ಜಾಗೃತ ಮತದಾರ ಬಿಜೆಪಿಗೆ ಕಪಾಳಮೋಕ್ಷ ಮಾಡಿದ್ದು,ಬಿಜೆಪಿ ಸುಳ್ಳು ನಡೆಯಲ್ಲ ಅಂತ ಅರಿತುಕೊಳ್ಳಬೇಕು ಎಂದು ಕಿಡಿ ಕಾರಿದ್ದಾರ.
ಸಮಾಜ ಒಡೆಯುವ ಕೆಟ್ಟ ಮನಸ್ಥಿತಿಗಳಿಗೆ ತಕ್ಕ ಶಾಸ್ತಿ ಆಗಿದೆ,ಏನಾದರೂ ಮಾಡಿ ಗೆಲುವು ಪಡೆಯುವ ಪ್ರಯತ್ನಕ್ಕೆ ಅಪಜಯ ಆಗಿದೆ, ವೈ ನಾಡಿನಲ್ಲಿ ದೊಡ್ಡ ಮಟ್ಟದಲ್ಲಿ ಶ್ರೀಮತಿ ಪ್ರಿಯಾಂಕಾ ಗಾಂಧಿ ಆಯ್ಕೆ ಆಗಿದ್ದಾರೆ.ಈ ಚುನಾವಣೆ ಪರಿಣಾಮಗಳು ಬಿಜೆಪಿಯನ್ನ ಅಷ್ಟೇ ಸೋಲಿಸಿಲ್ಲ.ಸುಳ್ಳು ಹೇಳುವ ಪ್ರವೃತ್ತಿಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಶಾ ಅವರನ್ನ ಸೋಲಿಸಿದೆ ಎಂದು ಹೇಳಿದ್ದಾರೆ.
ಇನ್ನು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹೀನಾಯ ಸೋಲು ವಿಚಾರಕ್ಕೆ ಉತ್ತರಿಸಿದ ಹೆಚ್.ಕೆ.ಪಾಟೀಲ, ಮಹಾರಾಷ್ಟ್ರದಲ್ಲಿ ಆಗಿರೋ ಪರಿಣಾಮ ಎಲ್ಲರಿಗೂ ಆಶ್ಚರ್ಯ ತಂದಿದೆ. ಈ ಪರಿಣಾಮಗಳ ಬಗ್ಗೆ ಅನುಮಾನ ಮೂಡಿದೆ.ಚುನಾವಣೆ ಪ್ರಕ್ರಿಯೆಯಲ್ಲಿ ಜೊತೆಗೆ ಎಣಿಕೆ ಕಾರ್ಯದಲ್ಲಿ ಅನುಮಾನ ಬಂದಿದೆ.ಈ ಬಗ್ಗೆ ರಾಜಕೀಯ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.ಈ ಬಗ್ಗೆ ಕಾದು ನೋಡಬೇಕು ಹಾಗೂ ಅವಲೋಕನ ಮಾಡ್ತೇವೆ, ನನಗೆ ಸಂಪೂರ್ಣ ಮಾಹಿತಿ ಇಲ್ಲದ ಕಾರಣ ಈ ಬಗ್ಗೆ ಅವಲೋಕನ ಮಾಡಿ ಹೇಳುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.