Home ದೇಶ ನೈಜೀರಿಯಾಕ್ಕೆ ಮೋದಿ ಭೇಟಿ; 17 ವರ್ಷಗಳ ಬಳಿಕ ಭಾರತದ ಪ್ರಧಾನಿ ಪ್ರವಾಸ !

ನೈಜೀರಿಯಾಕ್ಕೆ ಮೋದಿ ಭೇಟಿ; 17 ವರ್ಷಗಳ ಬಳಿಕ ಭಾರತದ ಪ್ರಧಾನಿ ಪ್ರವಾಸ !

0
ನೈಜೀರಿಯಾಕ್ಕೆ ಮೋದಿ ಭೇಟಿ; 17 ವರ್ಷಗಳ ಬಳಿಕ ಭಾರತದ ಪ್ರಧಾನಿ ಪ್ರವಾಸ !

ದೆಹಲಿ: ನವೆಂಬರ್ 16 ಮತ್ತು 17 ರಂದು ಪ್ರಧಾನಿ ನರೇಂದ್ರ ಮೋದಿ ನೈಜೀರಿಯಾಕ್ಕೆ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಆರ್ಥಿಕ ಸಂಬಂಧಗಳ ಕಾರ್ಯದರ್ಶಿ ದಮ್ಮು ರವಿ, 17 ವರ್ಷಗಳ ಅಂತರದ ನಂತರ ಈ ಭೇಟಿ ನಡೆಯುತ್ತಿದೆ. ನವೆಂಬರ್ 16ರಿಂದ 17ರವರೆಗೆ ಪ್ರಧಾನಿ ನರೇಂದ್ರ ಮೋದಿ ನೈಜೀರಿಯಾಕ್ಕೆ ಭೇಟಿ ನೀಡಲಿದ್ದಾರೆ. ಇದು ನೈಜೀರಿಯಾದ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರ ಆಹ್ವಾನದ ಮೇರೆಗೆ ನಡೆಯಲಿದೆ. 17 ವರ್ಷಗಳ ನಂತರ ಈ ಭೇಟಿ ನಡೆಯುತ್ತಿದೆ. ಪಶ್ಚಿಮ ಆಫ್ರಿಕಾ ಪ್ರದೇಶಕ್ಕೆ ಪ್ರಧಾನಮಂತ್ರಿಯವರ ಮೊದಲ ಭೇಟಿ. ಕೊನೆಯ ಭೇಟಿಯನ್ನು ಅಕ್ಟೋಬರ್ 2007 ರಲ್ಲಿ ಮನಮೋಹನ್ ಸಿಂಗ್ ನಡೆಸಿದರು ಎಂದು ಹೇಳಿದ್ದಾರೆ.

 ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ನೈಜೀರಿಯಾಕ್ಕೆ ಭೇಟಿ ನೀಡುತ್ತಿದ್ದಾರೆ. ನೈಜೀರಿಯಾದಲ್ಲಿ ಪ್ರಧಾನಿ ಮೋದಿಗೆ ಔಪಚಾರಿಕ ಸ್ವಾಗತ ನೀಡಲಾಗುವುದು ಮತ್ತು ನೈಜೀರಿಯಾ ಅಧ್ಯಕ್ಷ ಮತ್ತು ಪ್ರಧಾನಿ ಮೋದಿ ಮುಖಾಮುಖಿ ಸಭೆ ನಡೆಸಲಿದ್ದಾರೆ. ನಂತರ ಐದು ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.

LEAVE A REPLY

Please enter your comment!
Please enter your name here