ದೆಹಲಿ ಚುನಾವಣೆ ಇನ್ನೇನು ಸಮೀಪಿಸುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ದೆಹಲಿ ಚುನಾವಣೆಗೆ ಸ್ಟಾರ್ ಪ್ರಚಾರಕರನ್ನ ನೇಮಿಸಿದೆ. ಆದರೆ ಸ್ಟಾರ್ ಪ್ರಚಾರಕರ ಹೆಸರಲ್ಲಿ ಸಿಎಂ ಸಿದ್ಧರಾಮಯ್ಯ ಹೆಸರಿಲ್ಲ. ಹೀಗಾಗಿ ಈ ಕುರಿತು ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಲಾಡ್, ಇಂಡಿಯಾದಲ್ಲಿ ಒಬ್ಬರೇ ಸ್ಟಾರ್ ಪ್ರಚಾರಕರಿದ್ದಾರೆ, ಅವರೇ ಮೋದಿ ಸಾಹೇಬರು ಎಂದು ಸಚಿವ ಸಂತೋಷ್ ಲಾಡ್ ವ್ಯಂಗ್ಯವಾಡಿದ್ದಾರೆ.
ದೆಹಲಿ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ CM ಸಿದ್ದರಾಮಯ್ಯ ಹೆಸರು ಇಲ್ಲದಿರುವ ವಿಚಾರಕ್ಕೆ ರಾಯಚೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವರು, CM ಸಿದ್ದರಾಮಯ್ಯ ಸಾಮಾನ್ಯವಾಗಿ ಬೇರೆ ರಾಜ್ಯಕ್ಕೆ ಹೋಗಲ್ಲ. ಇಂಡಿಯಾದಲ್ಲಿ ಒಬ್ಬರೇ ಸ್ಟಾರ್ ಪ್ರಚಾರಕರಿದ್ದಾರೆ, ಅವರೇ ಮೋದಿ. ಎಲ್ಲಾ ಪಾರ್ಟಿ ಪ್ರಚಾರನೂ ಅವರಿಗೆ ಕೊಟ್ಟು ಬಿಡುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ.