
ದೆಹಲಿ: ಇಂದು ಮಧ್ಯಾಹ್ನ ಜಾರ್ಖಂಡ್‌ನ ದಿಯೋಘರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಯಣಿಸುತ್ತಿದ್ದ ವಿಮಾನದಲ್ಲಿ ಟೆಕ್ ಆಫ್ ಆಗಬೇಕಿದ್ದ ಸಮಯದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಎರಡು ಗಂಟೆಗಳ ಬಳಿಕ ವಾಯುಪಡೆ ವಿಮಾನದಲ್ಲಿ ದೆಹಲಿಗೆ ಮರಳಿದ್ದಾರೆ ಎಂದು ವರದಿಯಾಗಿದೆ.
ವಿಮಾನದಲ್ಲಿ ಪ್ರಧಾನಿ ಮೋದಿ ಕುಳಿತುಕೊಂಡ ನಂತರ ತಾಂತ್ರಿಕ ದೋಷದ ಬಗ್ಗೆ ಮಾಹಿತಿ ತಿಳಿದ ಸಿಬ್ಬಂದಿ ತಕ್ಷಣವೇ ದಿಯೋಘರ್‌ನಲ್ಲಿ ವಿಮಾನವನ್ನು ನಿಲ್ಲಿಸಲು ನಿರ್ಧರಿಸಲಾಯಿತು. ವಾಯುಪಡೆ ವಿಮಾನ ಬರುವ ಮುನ್ನ ವಿಮಾನದಲ್ಲಿನ ದೋಷವನ್ನು ಸರಿಪಡಿಸುವ ಪ್ರಯತ್ನವೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಬುಡಕಟ್ಟು ಜನಾಂಗದ ಪ್ರತಿನಿಧಿ ಬಿರ್ಸಾ ಮುಂಡಾ ಅವರ ಜನ್ಮದಿನದ ಕಾರ್ಯಕ್ರಮ ಮತ್ತು ನ.20ರಂದು ಜಾರ್ಖಂಡ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆ ಪ್ರಚಾರ ಸಭೆ ನೆಡಸಲು ಇಲ್ಲಿಗೆ ಆಗಮಿಸಿದ್ದರು.
ಚುನಾವಣೆ ಅಂಗವಾಗಿ ಇಂದು ಪ್ರಚಾರ ಸಭೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಾರ್ಖಂಡ್‌ಗೆ ತೆರಳಿದ್ದರು. ಪ್ರಧಾನಿಯ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ, ಏರ್ ಟ್ರಾಫಿಕ್ ಕಂಟ್ರೋಲ್‌ನಿಂದ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಗೆ 45 ನಿಮಿಷಗಳ ಕಾಲ ಟೇಕ್ ಆಫ್ಗೆ ಅನುಮತಿ ನಿರಾಕರಿಸಿದ್ದರು. ಇದು ಕಾಂಗ್ರೇಸ್ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದು, ವಿರೋಧ ಪಕ್ಷದ ನಾಯಕರ ಪ್ರಚಾರಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ತಾಂತ್ರಿಕ ದೋಷದವನ್ನು ಸೃಷ್ಟಿಸಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ. (ಏಜೆನ್ಸೀಸ್).