ಲಕ್ಷ್ಮೇಶ್ವರ: ತಾಲೂಕಿನ ಸಂಕದಾಳ ಗ್ರಾಮದ ನಾಗಪ್ಪ ಹರಿಜನ ಅವರ ಜಮೀನಿಗೆ ಹೊಂದಿಕೊಂಡು ಇರುವ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಮಾಡಲು ಶಾಸಕ ಚಂದ್ರು ಲಮಾಣಿ ಚಾಲನೆ ನೀಡಿದರು.
ಸಣ್ಣ ನೀರಾವರಿ ಇಲಾಖೆಯಿಂದ 42 ಲಕ್ಷ ರೂ ಗಳ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸುತ್ತಿದ್ದು, ಮಳೆಗಾಲದಲ್ಲಿ ಹಳ್ಳಕ್ಕೆ ಪ್ರವಾಹ ಬಂದು ನೀರು ನುಗ್ಗಿ ರೈತರ ಜಮೀನುಗಳು ಕೊಚ್ಚಿ ಹೋಗುತ್ತಿದ್ದವು, ರೈತರ ಮನವಿ ಮೇರೆಗೆ ತಡೆಗೋಡೆ ನಿರ್ಮಾಣದಿಂದ ಪ್ರವಾಹದ ನೀರನ್ನು ರಭಸ ಕಡಿಮೆಯಾಗಿ ಜಮೀನುಗಳು ಹಾಳಾಗದಂತೆ ತಡೆಗೋಡೆ ನಿರ್ಮಿಸುವ ಉದ್ದೇಶವಾಗಿದೆ ಎಂದರು.
ಸಂದರ್ಭದಲ್ಲಿ ಹಾಲಪ್ಪ ಸೂರಣಗಿ, ನಾಗನಗೌಡ ಪಾಟೀಲ್, ದುರ್ಗಪ್ಪ ಹರಿಜನ,ಸೋಮಣ್ಣ ನೀಲಗುಂದ ಕೆಂಚಪ್ಪ ಸೂ ರಣಗಿ, ವಿರುಪಾಕ್ಷಪ್ಪ ಬಾಳೆ ಹೊಸೂರ, ನಿಂಗಪ್ಪ ಗೌರಿ, ಬಸನಗೌಡ ಪಾಟೀಲ್, ಗಣೇಶ ಲಮಾಣಿ, ಕಿರಣ ಲಮಾಣಿ,ಮುತ್ತು ಬಳ್ಳೋಳ್ಳಿ, ಗಂಗಾಧರ. ಮೆಣಸಿನಕಾಯಿ, ಗ್ರಾಪಂ ಕಾರ್ಯದರ್ಶಿ ಟಾಕಪ್ಪ ಪವಾರ, ಅನೇಕರು ಇದ್ದರು.