ಲಕ್ಷ್ಮೇಶ್ವರ : ಐತಿಹಾಸಿಕ ಪ್ರಸಿದ್ಧ ಶ್ರೀ ಧರ್ಮ ಕ್ಷೇತ್ರ ಮುಕ್ತಿ ಮಂದಿರಕ್ಕೆ ಹೋಗುವ ರಸ್ತೆಯನ್ನು ಸಿಸಿ ರಸ್ತೆ ನಿರ್ಮಾಣಕ್ಕಾಗಿ ಶಾಸಕ ಡಾ. ಚಂದ್ರು ಲಮಾಣಿ ಭೂಮಿ ಪೂಜೆ ನೆರವೇರಿಸಿದರು.
ವರದಿ : ಪರಮೇಶ ಎಸ್ ಲಮಾಣಿ.
ಉದ್ದೇಶಿಸಿ ಮಾತನಾಡಿದ ಅವರು ಧರ್ಮ ಗೋಷ್ಠಿಯಾದ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ವೇದವಾಕ್ಯ ಹೇಳುತ್ತಾ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿರುವ ಶ್ರೀ ಧರ್ಮಕ್ಷೇತ್ರ ಮುಕ್ತಿಮಂದಿರು ಇದು ತ್ರಿಕೋಟಿ ಶಿವಲಿಂಗ ಸ್ಥಾಪನೆಯ ಸಂಕಲ್ಪಕ್ಕೆ ಹೆಸರುವಾಸಿಯಾಗಿದೆ.
ಮಠದಲ್ಲಿ ಶಾಂತಿ, ಸಹನೆ, ನೆಮ್ಮದಿ, ಏಕತಾ ಮನೋಭಾವ, ಸೌಹಾರ್ದತೆ, ಸಹಬಾಳ್ವೆ, ಸುಸಂಸ್ಕೃತಿ ಇಲ್ಲಿನ ಆದರ್ಶಗಳ ಮೌಲ್ಯಗಳಾಗಿವೆ. ಇಲ್ಲಿ ಪ್ರವಾಸಿಗರರು ಸಾವಿರಾರು ಭಕ್ತರು ಶಾಂತಿ ನೆಮ್ಮದಿಗಾಗಿ ಆಗಮಿಸುತ್ತಾರೆ. ಶ್ರೀ ಷ. ಬ್ರ. ವಿಮಲ ರೇಣುಕ ವೀರ ಮುಕ್ತಿಮುನಿಶಿವಾಚಾರ್ಯ ಮಹಾಸ್ವಾಮಿಗಳು ಈಗಿನ ಪೀಠಾಧಿಪತಿಗಳಾಗಿದ್ದು, ಅಲ್ಲದೇ ಜಗದ್ಗುರು ಶ್ರೀ ಪ್ರಶನ್ನರೇಣುಕ ವೀರಗಂಗಾಧರ ಶಿವಾಚಾರ್ಯರ ಗದ್ದುಗೆಯನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಳೆಹೊನ್ನೂರು ವಿಮಲ ರೇಣುಕಾ ಶ್ರೀ ವೀರ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ವಿಮಲ ರೇಣುಕಾ ಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಜಿ ಮುಕ್ತಿಮಂದಿರ,ವಿವಿಧ ಮಠಾಧೀಶರು, ಸುನೀಲ ಮಹಾಂತಶೆಟ್ಟರ, ಎಂ.ಆರ್.ಪಾಟೀಲ, ವೀರಣ್ಣ ಪವಾಡದ, ಗುರುಪಾದಯ್ಯ ಸಾಲಿಮಠ, ಜಾನು ಲಮಾಣಿ, ಶಕ್ತಿ ಕತ್ತಿ, ವಿಶಾಲ ಬಟಗುರ್ಕಿ,ಸೊಮಣ್ಣ ಡಾಣಗಲ್,ಸಂತೋಷ ಜಾವುರ, ಪ್ರವೀಣ ಬೊಂಬಲೆ, ಹಾಗೂ ಜಾತ್ರೆಗೆ ಬಂದ ಭಕ್ತಾದಿಗಳು ಉಪಸ್ಥಿತರಿದ್ದರು.
