ಗದಗ(ಲಕ್ಷ್ಮೇಶ್ವರ): ಪಟ್ಟಣದ ಪುರಸಭೆ ವ್ಯಾಪ್ತಿಯ ಇಟ್ಟಿಗೇರಿ ಕೆರೆ ಅಭಿವೃದ್ಧಿಗೆ ಕೊನೆಗು ಮುಹೂರ್ತ ಕೂಡಿಬಂದಿದೆ.
ಪಟ್ಟಣದಲ್ಲಿ ಮಂಗಳವಾರ ಶಾಸಕ ಡಾ. ಚಂದ್ರು ಲಮಾಣಿ ಅವರು ಪುರಸಭೆಯ ಕೆರೆ ಅಭಿವೃದ್ಧಿ ಅನುದಾನ ಒಟ್ಟು 56 ಲಕ್ಷ ರೂ . ಗಳಲ್ಲಿ ಕ್ರೀಯಾ ಯೋಜನೆ ಸಿದ್ಧಪಡಿಸಿ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆದು ಕಾಮಗಾರಿಗೆ ಭೂಮಿ ಪೂಜೆ ನೇರೆವೇರಿಸಿದರು.
ವರದಿ : ಪರಮೇಶ ಎಸ್ ಲಮಾಣಿ
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಇಟ್ಟಿಗೇರೆ ಇದುವರೆಗೂ ಅಭಿವೃದ್ಧಿಯಂತ ಮುಖ ಮಾಡಿರಲಿಲ್ಲ ಇಗ ಪಟ್ಟಣದಲ್ಲಿ ಕಟ್ಟಡ ಪರವಾನಿಗೆ ಸಂದರ್ಭದಲ್ಲಿ ಸಂಗ್ರಹಿಸಲಾಗಿದ್ದ ಕೆರೆ ಅಭಿವೃದ್ಧಿ ಶುಲ್ಕವನ್ನು ಕೃಡಿಕರಿಸಿ ಒಟ್ಟು 56 ಲಕ್ಷ ರೂ. ಗಳಲ್ಲಿ ಕೆರೆಗೆ ಅಂದ ಹೆಚ್ಚಿಸುವದರೊಂದಿಗೆ ಕೆರೆಗೆ ಕೊಳಚೆ ನೀರು ಬರದಂತೆ ತಡೆಗಟ್ಟುವುದು ಸೇರಿದಂತೆ ಅನೇಕ ಕಾಮಗಾರಿವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರಲ್ಲದೇ,
ಸಮೀಕ್ಷಾ ಸಮಯದಲ್ಲಿ ಮೂರು ಮನೆಗಳು ಅತಿಕೃಮಣ ಎಂದು ಕಂಡು ಬಂದಿದ್ದು, ಆ ಮನೆಯ ಮಾಲಿಕರಿಗೆ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಡುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಈ ಹಿಂದೆ ಮುಖ್ಯಾಧಿಕಾರಿ ಆಗಿದ್ದ ಮಹೇಶ ಹಡಪದರವರು ತಮ್ಮ ಅವಧಿಯಲ್ಲಿ ಈ ಕೆರೆಯ ಅಭಿವೃದ್ಧಿಗೆ , ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಂಡು ಇಗ ಸಾಕಾರಗೊಳ್ಳುತ್ತಿರುವುದು ತಮಗೆ ಆತ್ಮ ಸಂತೋಷ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಮಹಾಂತೇಶ ಬಿಳಗಿ, ಎಪಿಎಂಸಿ ಮಾಜಿ ಅಧ್ಯಕ್ಷ ನೀಲಪ್ಪ ಹತ್ತಿ, ನಿಂಗಪ್ಪ ಬನ್ನಿ, ಅನೀಲ ಮುಳಗುಂದ, ಎಂ.ಆರ್.ಪಾಟೀಲ್, ಗಂಗಾಧರ ಮೆನಸಿಕಾಯಿ, ಬಸವನೇಪ್ಪ ನಂದೇಣ್ಣವರ್, ಅರ್ಚಕ ಸಿದ್ದಲಿಂಗಯ್ಯ ಹೀರೆಮಠ, ಸಂತೋಷ ಜಾವೂರ, ಕೀರಣ ಮಹಾಂತಶೇಟ್ಟರ, ಪುರಸಭೆ ಇಂಜಿನಿಯರ್ ವೀರೇಂದ್ರ ಸಿಂಗ್ ಕಾಟೇವಾಲೆ, ಸುರೇಶ ಹಟ್ಟಿ, ಹಿರಿಯ ಆರೋಗ್ಯ ನೀರಿಕ್ಷಕ ಮಂಜುನಾಥ ಮುದಗಲ್, ಮಂಜುನಾಥ ಹೊಗೆಸೊಪ್ಪಿನ, ಮಂಜುನಾಥ ಗಜಾಕೋಶ ಸೇರಿದಂತೆ ಅನೇಕರಿದ್ದರು.
