ಗದಗ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಳದ ಅಧಿವೇಶನದಲ್ಲಿ ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ವಿವಿಧ ವಿಷಯಗಳ ಕುರಿತು ಗಮನ ಸೆಳೆದರಲ್ಲದೆ, ತಮಗೆ ದೊರೆತ ಅಲ್ಪಾವಧಿಯಲ್ಲಯೇ ವಿವಿಧ ವಿಷಯಗಳ ಕುರಿತು ಮಾತನಾಡಿ ಸರಕಾರವನ್ನು ಒತ್ತಾಯಿಸಿದರು.
ವರದಿ : ಪರಮೇಶ ಎಸ್ ಲಮಾಣಿ
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರ ಗಮನ ಸೆಳೆದ ಅವರು ಕ್ಷೇತ್ರದ ೨೦ ಕೆರೆ ತುಂಬಿಸುವ ಯೋಜನೆಯ ಗುಣಮಟ್ಟ ಹಾಗೂ ಸ್ಥಿತಿಗತಿ ತಿಳಿಯಲು ಇಲಾಖಾ ಮುಖ್ಯಸ್ಥರ ಸಮಿತಿ ರಚಿಸುವ ಬಗ್ಗೆ ಕೇಳಿದ ಅವರ ಪ್ರಶ್ನೆಗೆ,
ಡಿಕೆಶಿ ಉತ್ತರ ನೀಡಿ ಈ ಕಾಮಗಾರಿಯು ೧೩೭ ಕೋಟಿ ರೂ.ಗಳ ವೆಚ್ಚದಲ್ಲಿ ೨೦೧೮ ರಲ್ಲಿ ಪ್ರಾರಂಭವಾಗಿದ್ದು, ಇದುವರೆಗೆ ೧೧೧ ಕೋಟಿ ರೂ.ಗಳಷ್ಟು ಕಾಮಗಾರಿಗೆ ವೆಚ್ಚವಾಗಿದೆ. ಕಾಮಗಾರಿಯು ಯಾವ ಸ್ಥಿತಿಯಲ್ಲಿ ಇದೆ ಮತ್ತು ಅದರ ಗುಣ ಮಟ್ಟವನ್ನು ತಿಳಿದುಕೊಳ್ಳುತ್ತೆನೆ ಎಂದ ಅವರಿಗೆ ತಿಳಿಸಿದರು.
ಮತ್ತೆ ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ ಹಿಂದಿನ ವರ್ಷವು ಇದೆ ಉತ್ತರ ಬಂದಿತ್ತು, ೨೦೧೭ ರಲ್ಲಿ ಪ್ರಾರಂಭವಾದ ಈ ಕಾಮಗಾರಿಯು ಇದರಲ್ಲಿ ಕುಡಿಯುವ ನೀರು ಮತ್ತು ಅಂತರ್ಜಲ ಗುಣಮಟ್ಟ ಹೆಚ್ಚಿಸಲು ಈ ಯೋಜನೆ ಮಾಡಲಾಗಿದೆ, ಆದರೆ ಕೆರೆಯ ಮೇಲೆ ಪೈಪ್ ಇಟ್ಟು ಹಾಗೂ ಪೈಪ್ ಲೈನ್ ಆಗಿದೆ ಎಂದು ಹೇಳಿ ಬಿಲ್ ಮಾಡಿಕೊಂಡಿರುವುದನ್ನು ನೋಡಬಹುದಾಗಿದೆ, ಮತ್ತು ಎಂಟು ವರ್ಷವಾದರು ಪೂರ್ಣಗೊಳ್ಳದ ಕಾಮಿಗಾರಿಗೆ ಸಚಿವರು, ಅಧಿಕಾರಿಗಳು ಗುತ್ತಿಗೆದಾರಿಗೆ ಸಮಯ ನೀಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸದರು.
ಕಾಮಗಾರಿಯ ಗುತ್ತಿಗೆದಾರನಿಗೆ ಎಷ್ಟೆ ಬಾರಿ ಕರೆ ಮಾಡಿದರು ಕರೆ ಸ್ವೀಕರಿಸಲ್ಲ, ಅಧಿವೇಶನ ಪ್ರಾರಂಭವಾಗಿದೆ ರಂದು ಈಗ ಕಾಮಗಾರಿ ಪ್ರಾರಂಭ ಮಾಡಿದ್ದಾರೆ. ಅಧಿವೇಶನ ಮುಗಿದ ಮೇಲೆ ಮತ್ತೆ ಕಾಮಗಾರಿಯನ್ನು ನಿಲ್ಲಿಸಿ ಹೋಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಆತ್ಮಹತ್ಯೆಯ ಬಗ್ಗೆ ಧ್ವನಿ ಎತ್ತಿದ ಶಾಸಕ ಡಾ.ಚಂದ್ರು ಲಮಾಣಿ….!
ಗದಗ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿ ನೀಡಿದ ಮಾಹಿತಿ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ ರೈತರು – ೩೮, ಆಕಸ್ಮಿಕ ಮರಣ – ೧೨ ಮತ್ತು ಬಣವೆ ನಷ್ಟ ೧೦೫ ಇದ್ದು ಇದರಲ್ಲಿ ೮೯ ಪ್ರಕರಣಗಳಿಗೆ ಪಾವತಿ ಆಗದೆ ಉಳಿದಿದೆ ಇದರ ಬಗ್ಗೆ ಕಂದಾಯ ಸಚಿವರಿಗೆ ಹಲವಾರು ಬಾರಿ ಭೇಟಿ ನೀಡಿದರು ಪರಿಹಾರ ಸಿಕ್ಕಿರುವದಿಲ್ಲ, ಇದಿಕ್ಕೆಲ್ಲ ಕಾರಣ ಅಧಿಕಾರಿಗಳ ನಿರ್ಲಕ್ಷ್ಯವಾಗಿದೆ ಎಂದು ಆರೋಪಿಸಿದರು.
ಒಂದು ಪ್ರಕರಣಕ್ಕೆ ಪರಿಹಾರ ಸಿಗಬೇಕೆಂದರೆ ಒಂದು ವರ್ಷಗಳ ಕಾಲ ಕಾಯಬೇಕು. ರೈತನ ಮರಣದ ಏಳು ತಿಂಗಳದ ನಂತರ ಸಚಿವರ ಸಭೆ ನಡೆಯುತ್ತದೆ. ಮತ್ತು ಆ ಸಭೆಯ ಆದೇಶದ ಪ್ರತಿ ಜಿಲ್ಲಾಧಿಕಾರಿಗಳಿಗೆ ತಲುಪಲು ಏಳು ತಿಂಗಳು ಬೇಕು ಇದು ಈ ಸರ್ಕಾರದ ವ್ಯವಸ್ಥೆಯಾಗಿದೆ. ಹೀಗಾದರೆ ರೈತರ ಪರಿಸ್ಥಿತಿ ಏನು ಎಂಬುವುದು ಶೋಚನೀಯವಾಗಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿದರಲ್ಲದೇ,
ಅಧಿವೇಶನದಲ್ಲಿ ಕ್ಷೇತ್ರದ ವಿವಿಧ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದರು.
