Home » News » ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದೇಶದ ಆರ್ಥಿಕ ಕ್ಷೇತ್ರದ ಬೆನ್ನೆಲುಬು: ಕೈಗಾರಿಕಾ ಕೇಂದ್ರದ  ಜಂಟಿ ನಿರ್ದೇಶಕ ಟಿ.ಎಸ್.ಮಲ್ಲಿಕಾರ್ಜುನ

ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದೇಶದ ಆರ್ಥಿಕ ಕ್ಷೇತ್ರದ ಬೆನ್ನೆಲುಬು: ಕೈಗಾರಿಕಾ ಕೇಂದ್ರದ  ಜಂಟಿ ನಿರ್ದೇಶಕ ಟಿ.ಎಸ್.ಮಲ್ಲಿಕಾರ್ಜುನ

by CityXPress
0 comments

ಗದಗ :ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದೇಶದ ಆರ್ಥಿಕ ಕ್ಷೇತ್ರದ ಬೆನ್ನೆಲುಬಾಗಿದ್ದು, ದೇಶದ ಜಿಡಿಪಿಯಲ್ಲಿ ಶೇಕಡ ೩೦ ರಷ್ಟು ಕೊಡುಗೆ ಎಂ.ಎಸ್.ಎಮ್.ಇ.ಯಿಂದಲೇ ಹರಿದು ಬರುತ್ತದೆ ಎಂದು ಗದಗ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ಎಸ್.ಮಲ್ಲಿಕಾರ್ಜುನ ಹೇಳಿದರು.

  ನಗರದ ಕೆ.ಎಚ್.ಪಾಟೀಲ್ ಸಭಾಭವನದಲ್ಲಿ ಮಂಗಳವಾರ ಸಂಜೆ ನಡೆದ ಗದಗ ಜಿಲ್ಲಾ ವಾಣೀಜ್ಯೋಧ್ಯಮ ಸಂಸ್ಥೆ ಗದಗ ೫೦ ನೇ ವರ್ಷದ ಸುವರ್ಣ ಮಹೋತ್ಸವ, ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟದ ಗದಗ ಉತ್ಸವದ ರಜತ ಮಹೋತ್ಸವದ  ಶ್ರೇಷ್ಠ ಮಳಿಗೆ ಪ್ರಶಸ್ತಿ ಪ್ರಧಾನ ಹಾಗೂ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೈಗಾರಿಕೆಗಳನ್ನು ಬೆಳೆಸುವ ಉದ್ದೇಶದಿಂದಾಗಿಯೇ ಸರಕಾರ ಪ್ರತಿ ೫ ವ಼ರ್ಷಕ್ಕೊಮ್ಮೆ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತರುತ್ತಿದೆ. ಇದೀಗ ನಾವು ಹೊಸ ಕೈಗಾರಿಕಾ ನೀತಿ ಅಂದರೇ ೨೦೨೫- ೩೦ ರಲ್ಲಿ ಕಾಲಿಟ್ಟಿದ್ದೇವೆ. ಸೂಕ್ಷ್ಮ ಸಣ್ಣ  ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ದೇಶದ ಆರ್ಥಿಕ ಸ್ಥಿತಿಗತಿಯನ್ನು ಅವಲಂಬಿಸಿದೆ. ಅದು ದೇಶದ ಆರ್ಥಿಕ ಬೆನ್ನೆಲುಬಾಗಿದ್ದು, ದೇಶದ ಜಿಡಿಪಿಯಲ್ಲಿ ಶೇಕಡ ೩೦ ರಷ್ಟು ಕೊಡುಗೆಯನ್ನು ಎಂಎಸ್,ಎಮ್.ಇ ನೀಡುತ್ತಿದೆ. ಕೈಗಾರಿಕೆ ವಲಯದಲ್ಲಿ ಆಸಕ್ತಿ ಇದ್ದವರು ಕೇಂದ್ರಕ್ಕೆ ಸಂಪರ್ಕಿಸಿದರೇ ಅಗತ್ಯ ಮಾರ್ಗದರ್ಶನ ಮಾಡಲಾಗುವದು. ಗದಗ ಜಿಲ್ಲೆ ಸಂಘಟಿಸುವ ಗದಗ ಉತ್ಸವ ಸಂಭ್ರಮದ್ದಾಗಿದೆ. ಎಲ್ಲೂ ನೋಡಲು ಸಿಗದ ವಿಶೇಷ ಉತ್ಸವ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗದಗ ಜಿಲ್ಲಾ ವಾಣಿಜ್ಯೋಧ್ಯಮ ಸಂಸ್ಥೆಯ ಅಧ್ಯಕ್ಷ ತಾತನಗೌಡ ಎಸ್. ಪಾಟೀಲ್ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಗದಗ ಜಿಲ್ಲಾ ವಾಣಿಜ್ಯೋಧ್ಯಮ ಸಂಸ್ಥೆ ಸುರ್ವರ್ಣ ಮಹೋತ್ಸವ ಹಾಗೂ ಗದಗ ಉತ್ಸವದ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುವ ಮೂಲಕ ಹೊಸ ಇತಿಹಾಸವನ್ನು ಸೃಷ್ಠಿಸಿದೆ. ಸುವರ್ಣ ಮತ್ತು ರಜತ ಮಹೋತ್ಸವ ಒಂದೇ ವರ್ಣರಂಜೀತ ವೇದಿಕೆಯಲ್ಲಿ ಸಂಭ್ರಮಿಸುತ್ತಿರುವದು ಜಿಲ್ಲೆಗೆ ಗರ್ವದ ಸಂಗತಿಯಾಗಿದೆ. ಗದಗ ಜಿಲ್ಲಾ ವಾಣಿಜ್ಯೋಧ್ಯಮ ಸಂಸ್ಥೆ ಕೇವಲ ವ್ಯವಹಾರ ಮತ್ತು ಉದ್ಯಮಿಗೆ ಬೆಳವಣಿಗೆಗೆ ಸೀಮಿತವಾಗದೇ ಸಮುದಾಯಮುಖಿಯಾಗಿರುವ ಕಲೆ, ಸಾಹಿತ್ಯ, ಶಿಕ್ಷಣ, ಸಾಂಸ್ಕೃತಿಕ ಸೇರಿದ ಸಾರ್ವಜನಿಕ ವಲಯದ ಎಲ್ಲ ರಂಗಗಳಲ್ಲೂ ವ್ಯಾಪಿಸಿದೆ, ಸುವರ್ಣ ಮತ್ತು ರಜತ ಉಭಯ ಮಹೋತ್ಸವ ಯಶಸ್ವಿಯಲ್ಲಿ ಗದಗ ಜಿಲ್ಲಾ ವಾಣೀಜ್ಯೋಧ್ಯಮ ಸಂಸ್ಥೆಯ ಪದಾಧಿಕಾರಿಗಳ ಸಹಕಾರ ಪ್ರೋತ್ಸಾಹ ಅಡಗಿದೆ, ಅವರಿಗೆಲ್ಲರಿಗೂ ಅಭಿನಂಧಿಸಲಾಗುವದು ಎಂದರು.   

banner

ಶ್ರೇಷ್ಠ ಮಳಿಗೆ ಪ್ರಶಸ್ತಿಗೆ ಭಾಜನರಾಗಿರುವ ಕೃಷಿ ಪರಿವಾರ ಸಾವಯವ ಮತ್ತು ಕಪ್ಪತಗುಡ್ಡ ಗೋಶಾಲೆ, ಬಿ.ಡಿ.ತಟ್ಟಿ ಮೆಮೋರಿಯಲ್ ಚಾರಿಟ್ರೇಬಲ್ ಟ್ರಸ್ಟ, ಗದಗಿನ ರಾಜದತ್ತ ಜುವೆಲರ್ಸ, ಸ್ಪರ್ಶ ಪ್ರುಟ್ಸ್ ಬೆಂಗಳೂರು ತಂಡಕ್ಕೆ ಗದಗ ಜಿಲ್ಲಾ ವಾಣಿಜ್ಯೋಧ್ಯಮ ಸಂಸ್ಥೆ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿ, ಗೌರವಿಸಿ, ಅಭಿನಂಧಿಸಿತು. 

ಈ ಸಂದರ್ಭದಲ್ಲಿ ಗ್ರಾ.ಕೈ ಉಪನಿರ್ದೇಶಕ ಎಚ್.ಬಿ.ತಾರಕೇಶ್ವರ, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಅಜಿತ ನಾಯಕ, ಚೇರಮನ್ ಆನಂದ ಪೋತ್ನಿಸ್, ಕೋ ಚೇರಮನ್ ಸದಾಶಿವಯ್ಯ ಮದರಿಮಠ, ಸಂಸ್ಥೆಯ ಪದಾಧಿಕಾರಿಗಳಾದ ವಿಜಯ ಕುಮಾರ ಮಾಟಲದಿನ್ನಿ, ಸಂಗಯ್ಯ ಗಣಾಚಾರಿ, ಎಸ್.ಆರ್.ನಾಲತ್ವಾಡಮಠ, ಅಶೋಖಗೌಡ ಪಾಟೀಲ್, ರಾಘವೇಂದ್ರ ಎಸ್.ಕಾಲವಾಡ, ಶರಣಬಸಪ್ಪ ಗುಡಿಮನಿ, ಸಂಜಯ ಬಾಗಮಾರ,  ಸೋಮನಾಥ ಜಾಲಿ, ಅಶೋಕ ನಿಲೂಗಲ್, ಮಹಿಳಾ ವಿಭಾಗದ ಪದಾಧಿಕಾರಿಗಳಾಗಿರುವ ಶ್ರೀಮತಿ ನಂದಾ ಸಿ. ಬಾಳಿಹಳ್ಳಿಮಠ, ಶ್ರೀಮತಿ ದೀಪಾ ಎಸ್.ಗದಗ, ಶ್ರೀಮತಿ ಸುಷ್ಮಾ ಎಸ್.ಜಾಲಿ, ಶ್ರೀಮತಿ ಸುಜಾತಾ ಎಸ್.ಗುಡಿಮನಿ, ಶೀಮತಿ ಜ್ಯೋತಿ ಆರ್. ದಾನಪ್ಪಗೌಡ್ರ, ಶ್ರೀಮತಿ ಲಲಿಥಾ ಜಿ.ತಡಸದ, ಶ್ರೀಮತಿ ಸುಧಾ ಸಿ. ಹುಣಸಿಕಟ್ಟಿ, ಶ್ರೀಮತಿ ಪೂರ್ಣಿಮಾ ಕೆ.ಆಟದ ಸೇರಿದಂತೆ ಹಲವರಿದ್ದರು. ಬಾಹುಬಲಿ ಜೈನರ್ ನಿರೂಪಿಸಿದರು.  

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb