Headlines

ಕೃಷಿಕರಿಂದ ಗ್ರಾಹಕರಿಗೆ: ಮಾವು ಸಾಗಣೆಗೆ ಅಂಚೆ ಇಲಾಖೆಯ ಹೊಸ ಪಥ! ನಿಮ್ಮ ಮನೆ ಬಾಗಿಲಿಗೆ ಬರಲಿದೆ ಕೆಂಪು‌ ಸುಂದರಿ…

ಬೆಂಗಳೂರು: ಈಗ ಮಾವಿನ ಹಣ್ಣಿಗಾಗಿ ಮಾರುಕಟ್ಟೆಗೆ ಹೋಗುವ ಅವಶ್ಯಕತೆ ಇಲ್ಲ. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಸಹಯೋಗದಿಂದ ಭಾರತೀಯ ಅಂಚೆ ಇಲಾಖೆ ಮಾವಿನ ಹಣ್ಣುಗಳನ್ನು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಹೊಸ ಸೇವೆ ಆರಂಭಿಸಿದೆ.

ವಿವಿಧ ತಳಿಯ ಮಾವಿನ ಹಣ್ಣುಗಳನ್ನು ರೈತರಿಂದ ನೇರವಾಗಿ ಖರೀದಿಸಬಹುದಾದ ಈ ಯೋಜನೆಯ ಮೂಲಕ ಗ್ರಾಹಕರು www.karsirimangoes.karnataka.gov.in ವೆಬ್‌ಸೈಟ್‌ನಲ್ಲಿ ಬುಕ್ ಮಾಡಿದರೆ, ಭಾರತೀಯ ಅಂಚೆ ಇಲಾಖೆ ಅದರ ಸಾಗಣೆಯನ್ನು ಹೊತ್ತುಕೊಂಡು ನಿಗದಿತ ವಿಳಾಸಕ್ಕೆ ತಲುಪಿಸುತ್ತದೆ.

ಈ ಸೇವೆಯ ಮೂಲಕ ತಾಜಾ ಹಾಗೂ ನೇರವಾಗಿ ರೈತರಿಂದ ದೊರೆಯುವ ಮಾವಿನ ಹಣ್ಣುಗಳು ಮಾರುಕಟ್ಟೆದ ಬೆಲೆಯಲ್ಲಿಯೇ ಲಭ್ಯವಾಗಲಿದ್ದು, ಕೃಷಿಕರ ಆದಾಯ ಹೆಚ್ಚಳಕ್ಕೂ ಮಾರ್ಗವಾಗಲಿದೆ. ಈ ಯೋಜನೆ ರಾಜ್ಯದ ವಿವಿಧ ಭಾಗಗಳ ರೈತರಿಗೆ ಮಾರುಕಟ್ಟೆ ತಲುಪುವತ್ತ ನೂತನ ದಾರಿ ತೆರೆಯುತ್ತಿದೆ.

Leave a Reply

Your email address will not be published. Required fields are marked *