ನವದೆಹಲಿ: ಫೆಬ್ರವರಿ ತಿಂಗಳಲ್ಲಿ ದೆಹಲಿ ವಿಧಾನಸಭೆ ಚುನಾವಣೆ ನೆಡೆಯಲಿದ್ದು, ಈಬಾರಿಯ ಗೆಲುವು ಸಾಧಿಸಿ ದೆಹಲಿಯ ಮುಖ್ಯಮಂತ್ರಿಯಾಗುವುದರ ಸಲುವಾಗಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಪಕ್ಷದ ಪರವಾಗಿ ಪ್ರಚಾರ ಮಾಡಲು ಪಾದಯಾತ್ರೆ ಹಮ್ಮಿಕೊಂಡಿದ್ದರು. ಈ ವೇಳ ಅವರ ಮೇಲೆ ಹಲಲ್ಲೆ ಯತ್ನ ನಡೆದಿದ್ದು, ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ಪಾದಯಾತ್ರೆಯೂ ಇಂದು ಸಂಜೆ ದೆಹಲಿಯ ಗ್ರೇಟರ್ ಕೈಲಾಶ್ ತಲುಪಿದಾಗ ವ್ಯಕ್ತಿಯೊಬ್ಬರು ಕೇಜ್ರಿವಾಲ್ ಮೇಲೆ ಹಲ್ಲೆಗೆ ಮುಂದಾಗಿದ್ದು, ಅವರ ಮೇಲೆ ಸ್ಪಿರಿಟ್ ಎಸೆದು ಬೆಂಕಿ ಹಚ್ಚಲು ಮುಂದಾಗಿರುವ ವಿಚಾರ ಬೆಳಕಿಗೆ ಬಂದಿದೆ. ಸದ್ಯ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯ ಕುರಿತು ಮಾತನಾಡಿರುವ ಸಚಿವ ಸೌರಭ್ ಭಾರಧ್ವಾಜ್, ಹಲ್ಲೆ ನಡೆಸಿದ ವ್ಯಕ್ತಿಯು ಬಿಜೆಪಿ ಕಾರ್ಯಕರ್ತನಾಗಿದ್ದು, ಆತ ಸ್ಪಿರಿಟ್ ಎಸೆದು ಕೇಜ್ರಿವಾಲ್ರನ್ನು ಜೀವಂತವಾಗಿ ಸುಟ್ಟ ಹಾಕಲು ಯತ್ನಿಸಿದ. ಅರವಿಂದ್ ಕೇಜ್ರಿವಾಲ್ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿವೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಈ ಘಟನೆಯು ಸಾಕ್ಷಿಯಾಗಿದೆ ಎಂದು ಸೌರಭ್ ಭಾರಧ್ವಾಜ್ ಆರೋಪಿಸಿದ್ದಾರೆ.