Home » News » ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಚಾಲನೆ…!

ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಚಾಲನೆ…!

by CityXPress
0 comments

ಲಕ್ಷ್ಮೇಶ್ವರ: ಪಟ್ಟಣದ ಟಿ ಎ ಪಿ ಪಿ ಎಂ ಎಸ್ ನಲ್ಲಿ ಗೋವಿನಜೋಳ ಖರೀದಿ ಕೇಂದ್ರಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಚಾಲನೆ ನೀಡಿ ಮಾತನಾಡಿದ ಸಂಘದ ಅಧ್ಯಕ್ಷ ಸೋಮಣ್ಣ ಉಪನಾಳ ರೈತರು ಮೆಕ್ಕೆಜೋಳ ಬೆಂಬಲ ಬೆಲೆ ಇಲ್ಲದಿರುವದರಿಂದ ಅನೇಕ ಸಂಕಷ್ಟ ಅನುಭವಿಸುತ್ತಿದ್ದರು.

ವರದಿ : ಪರಮೇಶ ಎಸ್ ಲಮಾಣಿ.

ರೈತರ ಸಮಸ್ಯೆಗಳನ್ನು ಅರಿತ ಕೇಂದ್ರ ಮತ್ತು ರಾಜ್ಯ ಸರ್ಕಾರ ಖರೀದಿ ಕೇಂದ್ರ ಆರಂಭಿಸಿದೆ. ರೈತರು ೫೦ ಕ್ವಿಂಟಲ್ ಮೆಕ್ಕೆಜೋಳ ಹಾಕಬಹುದು ಹಾಗೂ ಬೆಂಬಲ ಕೇಂದ್ರ ಸರ್ಕಾರದ ಬೆಲೆಯೊಂದಿಗೆ ರಾಜ್ಯ ಸರ್ಕಾರ ಖರೀದಿ ಕೇಂದ್ರ ಆರಂಭಿಸಿದ್ದು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರಲ್ಲದೇ,

banner

ಈ ಮೂಲಕ ಸಣ್ಣ ಮತ್ತು ಮಧ್ಯಮ ರೈತರಿಗೆ ದೊಡ್ಡ ಪ್ರಮಾಣದಲ್ಲಿ ತಮ್ಮ ಉತ್ಪನ್ನವನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಎಫ್‌ಆರ್‌ಯುಐಟಿಎಸ್ ತಂತ್ರಾಂಶದಲ್ಲಿ ನೋಂದಾಯಿತವಾಗಿರುವ ರೈತರ ಜಮೀನು ವಿಸ್ತೀರ್ಣದ ಆಧಾರದ ಮೇಲೆಯೇ ಈ ಗರಿಷ್ಠ ಮಿತಿ ನಿಗದಿಪಡಿಸಲಾಗಿದೆ.

ಟಿ ಎ ಪಿ ಪಿ ಎಂ ಎಸ್ ಮೂಲಕ ಖರೀದಿಗೆ ಆದ್ಯತೆ ನೀಡಿ ಆದೇಶ ಹೊರಡಿಸಿದೆ. ರೈತರು ಹಾಗೂ ರೈತ ಸಂಘಟನೆಗಳ ಮನವಿ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದರು.

ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸೋಮಣ್ಣ ಉಪನಾಳ, ಉಪಾಧ್ಯಕ್ಷ ಶೇಖಣ್ಣ ಕಾಳೆ ಸಮಿತಿ ಸದಸ್ಯರಾದ ವಿರುಪಾಕ್ಷಪ್ಪ ಪಡಿಗೇರಿ, ಸುನೀಲ ಮಹಾಂತಶೆಟ್ಟರ್‌, ವೀರಭದ್ರಪ್ಪ ಶಿಗ್ಲಿ, ಈರಣ್ಣ ಮುಳಗುಂದ, ಜಯಕ್ಕ ಕಳ್ಳಿ, ರತ್ನಾ ಗುಂಜಳ ಹಿರಿಯ ರೈತರುಗಳು ಮತ್ತು ಊರಿನ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb