ಗದಗ 18: ಪೂಜ್ಯ ಶ್ರೀ ಕಲ್ಲಯ್ಯಜ್ಜ ಯುವಕ ಮಂಡಳ ಜನತಾ ಬಜಾರ ಗದಗ ವತಿಯಿಂದ ಸಂಗೀತ ಕಾಶಿ, ಪರಮಪೂಜ್ಯ ಗಾನಯೋಗಿ ಶಿವಯೋಗಿ ಪಂಡಿತ ಶ್ರೀ ಪಂಚಾಕ್ಷರಿ ಗವಾಯಿಗಳರವರ ೮೧ನೇ ಹಾಗೂ ಪಂಡಿತ ಶ್ರೀ ಪುಟ್ಟರಾಜ ಗವಾಯಿಗಳರವರ ೧೫ನೇ ಪುಣ್ಯಸ್ಮರಣೋತ್ಸವದ ನಿಮಿತ್ಯ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಗರದ ಜನತಾ ಬಜಾರದಲ್ಲಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಜನತಾ ಬಜಾರದ ಎಲ್ಲ ವ್ಯಾಪಾರಿಗಳು ಪಂಡಿತ ಪಂಚಾಕ್ಷರಿ ಗವಾಯಿಗಳರವರ ಪುಣ್ಯಸ್ಮರಣೆಯ ಅಂಗವಾಗಿ ಶಿವಯೋಗಿ ಪಂಡಿತ ಶ್ರೀ ಪಂಚಾಕ್ಷರಿ ಗವಾಯಿಗಳ ಹಾಗೂ ಡಾ. ಪಂಡಿತ ಪುಟ್ಟರಾಜ ಗವಾಯಿಗಳವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ ಬಬರ್ಚಿ ಪಂಡಿತ ಪಂಚಾಕ್ಷರಿ ಗವಾಯಿಗಳರವರ ಬಗ್ಗೆ ಮಾತನಾಡಿದರು.
ಜಿ. ಜಿ. ಮೇರವಾಡೆ, ಶಹರ ಪೊಲೀಸ ಠಾಣೆ ಸಿಪಿಐ ಡಿ. ಬಿ. ಪಾಟೀಲ, ರಾಷ್ಟ್ರಪ್ರಶಸ್ತಿ ವಿಜೇತರಾದ ಎಸ್. ಎನ್. ಬಳ್ಳಾರಿ, ಮಾರುತಿ ಸೋಳಂಕಿ, ಮಹಮ್ಮದಅಲಿ ಅತ್ತಾರ, ಚಂದ್ರು ಮೇಲಿನಮನಿ, ಉಮರ ಫಾರೂಕ ಹುಬ್ಬಳ್ಳಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸದರಿ ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಾಸಾಬ ಮಲ್ಲಸಮುದ್ರ ಮಾತನಾಡಿ ವಿರೇಶ್ವರ ಪುಣ್ಯಾಶ್ರಮ ಶಿಕ್ಷಣ ದಾಸೋಹ, ಸಂಗೀತ ದಾಸೋಹ, ಅನ್ನದಾಸೋಹ, ನಡೆಸುವುದರ ಮೂಲಕ ರಾಷ್ಟ್ರಮಟ್ಟದಲ್ಲಿ ಪಂಡಿತ ಪಂಚಾಕ್ಷರಿ ಗವಾಯಿಗಳು ಅಪಾರ ಭಕ್ತ ಸಮೂಹವನ್ನು ಹೊಂದಿದ್ದಾರೆ ಎಂದು ಹೇಳಿದರು.
ಇದೇ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಪೊಲೀಸ ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿಗಳ ಪದಕ ಪಡೆದ ಅನಂದಸಿಂಗ ದೊಡ್ಡಮನಿ, ಪ್ರವೀಣ ಕಲ್ಲೂರ, ಬಸವರಾಜ ಗುಡ್ಲಾನವರ ಹಾಗೂ ಕಪ್ಪತ್ತನವರ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಮಯದಲ್ಲಿ ನಗರದ ಪೊಲೀಸ ಠಾಣೆ ಸಿಪಿಐ ಡಿ. ಬಿ. ಪಾಟೀಲ ಇವರು ಮಾತನಾಡಿ ತಮ್ಮ ಪ್ರೀತಿಯ ಅಭಿಮಾನ ಪೊಲೀಸ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿಯನ್ನು ನೀಡಿದ್ದೀರಿ ಅಲ್ಲದೇ ಆತ್ಮಸ್ಥೈರ್ಯವನ್ನು ಹಾಗೂ ಮನೋಛಲವನ್ನು ಸನ್ಮಾನಿತರಿಗೆ ನೀಡಿದ್ದೀರಿ. ಸದಾಕಾಲ ಪಂಡಿತ ಪಂಚಾಕ್ಷರ ಗವಾಯಿಗಳರವರ ಕೃಪೆ ಹಾಗೂ ಪುಟ್ಟರಾಜ ಗವಾಯಿಗಳರವರ ಆಶೀರ್ವಾದ ಸದಾ ಕಾಲ ನೆಮ್ಮಲ್ಲರ ಮೇಲೆ ಇರಲಿ ಎಂದು ಹೇಳಿದರು.
ಸಮಿತಿಯ ಅಧ್ಯಕ್ಷರಾದ ರಾಜು ಡಿ. ರೋಣ, ಉಪಾಧ್ಯಕ್ಷರಾದ ರಾಮಣ್ಣ ಎನ್. ಗುರುಜಾಲಕರ, ಕಾರ್ಯದರ್ಶಿ ರಾಘವೇಂದ್ರ ವಿ. ಖೋಡೆ, ಸಹ-ಕಾರ್ಯದರ್ಶಿ ಚನ್ನಪ್ಪ ಗ. ಸಂಗಮ, ಖಜಾಂಚಿ ಗಣೇಶ ಕೆ. ಪಾಟೀಲ, ಸಮಿತಿಯ ಸದಸ್ಯರಾದ ಈರಣ್ಣ ತಿಪ್ಪಶೆಟ್ಟಿ, ಕಾಶೀನಾಥ ಎನ್. ಕಬಾಡಿ, ನಿಂಗಪ್ಪ ಮಾಗಡಿ, ಬುಡೆಲಿ ಅತ್ತಾರ, ರೇವಣಪ್ಪ ರಾಜೂರ, ರಾಜೇಸಾಬ ಸಯ್ಯದ, ಮಂಜುನಾಥ ಕಾಟವಾ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ರಾಜೀವ ರೋಣದ, ರಾಮಣ್ಣ, ಗಣೇಶ, ರಾಘವೇಂದ್ರ, ಈರಣ್ಣ, ಬುಡೆಲಿ ಅತ್ತಾರ, ಕಾಶೀನಾಥ ಕಬಾಡಿ, ಚನ್ನಪ್ಪ ಸೇರಿದಂತೆ ಸಮಿತಿಯ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಭಾಷಾಸಾಬ ಮಲ್ಲಸಮುದ್ರ ನಿರೂಪಿಸಿದರು. ರಾಮಣ್ಣ ಗುರುಜಾಲಕರ ವಂದನಾರ್ಪಣೆಗೈದರು.