ರಾಯಚೂರ: ಸಿಂಧನೂರಿನ ಪಿಡಬ್ಲ್ಯುಡಿ ಕ್ಯಾಂಪ್ ನಲ್ಲಿ ಸೋಮರಾತ್ರಿ ರಾತ್ರಿ ಅಪಘಾತದ ಹಿನ್ನೆಲೆ, ನೀರಾವರಿ ಇಲಾಖೆಯ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಸಿಂಧನೂರಿನ ನೀರಾವರಿ ಇಲಾಖೆಯ ಕಿರಿಯ ಇಂಜಿನಿಯರ್ ಗಳಾದ ಲಿಂಗಸುಗೂರು ತಾಲೂಕಿನ ಮಲ್ಲಿಕಾರ್ಜುನ(೨೮), ಶಿವರಾಜಕುಮಾರ(೨೮) ಹಾಗೂ ಕಂಪ್ಯೂಟರ್ ಆಪರೇಟರ್ ಸಿಂಧನೂರಿನ ಮಹಿಬೂಬ(೩೬) ಅನ್ನುವವರು ಮೃತರಾಗಿದ್ದಾರೆ. ಲಾರಿ ಚಾಲಕ ಮತ್ತು ಕ್ಲಿನರ್ ಗೆ ಗಾಯವಾಗಿದ್ದು ಬಳ್ಳಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯರಾತ್ರಿ ೧೨ ಗಂಟೆಗೆ ಊಟ ಮಾಡಿ ತಮ್ಮ ರೂಮ್ ಗೆ ಎರಡು ಬೈಕ್ ನಲ್ಲಿ ಸಿಬ್ಬಂದಿಗಳು ತೆರಳುತ್ತಿದ್ದರು. ಪಿಡಬ್ಲ್ಯುಡಿ ಕ್ಯಾಂಪ್ ಬಳಿ ರಾಯಚೂರು ಮಾರ್ಗವಾಗಿ ಸಾಗುತ್ತಿದ್ದ ಹೊಟ್ಟು ತುಂಬಿದ ಲಾರಿ ಪಲ್ಟಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.