Home ರಾಜ್ಯ ಗದಗ ಜಿಲ್ಲಾ ಪಂಚಾಯತಿ SDA ಮನೆ ಮೇಲೆ ಲೋಕಾಯುಕ್ತ ದಾಳಿ! ಅಕ್ರಮ ಆಸ್ತಿ ಗಳಿಕೆ ಆರೋಪ!

ಗದಗ ಜಿಲ್ಲಾ ಪಂಚಾಯತಿ SDA ಮನೆ ಮೇಲೆ ಲೋಕಾಯುಕ್ತ ದಾಳಿ! ಅಕ್ರಮ ಆಸ್ತಿ ಗಳಿಕೆ ಆರೋಪ!

0
ಗದಗ ಜಿಲ್ಲಾ ಪಂಚಾಯತಿ SDA ಮನೆ ಮೇಲೆ ಲೋಕಾಯುಕ್ತ ದಾಳಿ! ಅಕ್ರಮ ಆಸ್ತಿ ಗಳಿಕೆ ಆರೋಪ!

ಗದಗ: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಜಿಲ್ಲಾ ಪಂಚಾಯತಿಯ ಎಸ್ ಡಿಎ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಗದಗ ಜಿಲ್ಲಾ ಪಂಚಾಯತಿ ಎಸ್ ಡಿಎ ಲಕ್ಷ್ಮಣ ಕರ್ಣಿ ಅನ್ನೋರ ಮನೆ ಮೇಲೆ ದಾಳಿ ನಡೆದಿದ್ದು, ಗದಗ ನಗರದ ರಾಧಾಕೃಷ್ಣ ಬಡಾವಣೆಯ ಮನೆ ಸೇರಿದಂತೆ ಐದು ಕಡೆಗಳಲ್ಲಿ ದಾಳಿ ನಡೆದಿದೆ.

ಗದಗ, ಗಜೇಂದ್ರಗಡ, ಹಾವೇರಿಯಲ್ಲಿ ಕರ್ಣಿಗೆ ಸಂಬಂಧಿಸಿದ ಮನೆ, ಆಸ್ತಿಯನ್ನು ಪರಿಶೀಲನೆ ಮಾಡಿದ್ದು, ಆದಾಯ ಮೀರಿ ಆಸ್ತಿಗಳಿಕೆ ದೂರಿನ ಮೇಲೆ ಈ ದಾಳಿ ನಡೆದಿದೆ ಎನ್ನಲಾಗಿದೆ.

ಲೋಕಾಯುಕ್ತ ಎಸ್ ಪಿ ಹನುಮಂತ್ ರಾಯ, ಡಿಎಸ್ ಪಿ ವಿಜಯ್ ಬಿರಾದಾರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಪಿಎಸ್ ಐ ಎಸ್ ಎಸ್ ತೇಲಿ, ಪಿಜಿ ಕವಟಗಿ ತಂಡದಿಂದ ದಾಳಿ ನಡೆದಿದ್ದು ಕಡತಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

LEAVE A REPLY

Please enter your comment!
Please enter your name here