ಲಕ್ಷ್ಮೇಶ್ವರ: ಸಾಹಿತ್ಯ ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಸಾಹಿತ್ಯವು ಒಂದು ಭಾಷೆಯ ಬೌದ್ಧಿಕ, ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಅಂತಹ ಶ್ರೇಷ್ಠ ಕಾರ್ಯವನ್ನು ಲಕ್ಷ್ಮೇಶ್ವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಯಶಸ್ವಿಯಾಗಿ ಜರುಗಿಸುತ್ತಿದೆ ” ಎಂದು ಹಿರಿಯ ಚಿಂತಕ ದೇವಣ್ಣ ಬಳಿಗಾರ ಅಭಿಪ್ರಾಯಪಟ್ಟರು.
ಲಕ್ಷ್ಮೇಶ್ವರ ಸುದ್ದಿ: ಪರಮೇಶ ಎಸ್ ಲಮಾಣಿ.
ಅವರು ಲಕ್ಷ್ಮೇಶ್ವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ಸಹಸ್ರಾರ್ಜುನ ಬಿಇಡಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ದತ್ತಿ ಉಪನ್ಯಾಸಗಳನ್ನು ಉದ್ಘಾಟಿಸಿ ಮಾತನಾಡಿದರು.
ಇನ್ನೋರ್ವ ಉದ್ಘಾಟಕರಾಗಿ ಭಾಗವಹಿಸಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ಲಲಿತಕ್ಕ ಕೆರಿಮನಿ ಮಾತನಾಡಿ “ಕನ್ನಡ ಸಾಹಿತ್ಯ ಅದು ಶ್ರೇಷ್ಠ ಪರಂಪರೆಯ ಪ್ರತೀಕವಾಗಿದೆ. ಅದಕ್ಕೆ ಪುಲಿಗೆರೆಯ ತಿರುಳುಗನ್ನಡದ ಕೊಡುಗೆ ಅಪಾರವಾದದು” ಎಂದರು.
ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ದತ್ತಿಯಾದ ‘ಜನಪದ ಸಾಹಿತ್ಯ ಮತ್ತು ಹಾಸ್ಯದ’ ಕುರಿತು ಮಾತನಾಡಿದ ಕಲಾವಿದ ಕಸಾಪ ಹೋಬಳಿ ಘಟಕದ ಶಿಗ್ಲಿಯ ಅಧ್ಯಕ್ಷ ರಾಜಣ್ಣ ರಜಪೂತ ಮಾತನಾಡಿ, “ಜನಪದ ಸಾಹಿತ್ಯ ಅದು ರೈತರ ಸಾಹಿತ್ಯ. ಮಹಿಳೆಯರ ಸಾಹಿತ್ಯ. ಗ್ರಾಮೀಣರ ಸಾಹಿತ್ಯ. ಅದು ಎಲ್ಲ ಸಾಹಿತ್ಯದ ತಾಯಿ” ಎಂದು ಅಭಿಪ್ರಾಯಪಟ್ಟರು.
ಶ್ರೀಮತಿ ಲಲಿತಾ ಮತ್ತು ಪ್ರೊ. ಸಿ ವಿ ಕೆರಿಮನಿ ದತ್ತಿ ವಿಷಯವಾದ ‘ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ’ ವಿಷಯದ ಕುರಿತು ಮಾತನಾಡಿದ ಶಿಕ್ಷಕಿ ಶ್ರೀಮತಿ ವೀಣಾ ಜಾದವ “ಇಡೀ ಮನುಕುಲ ಸಾವಿತ್ರಿಬಾಯಿ ಪುಲೆ ಅವರಿಗೆ ಋಣಿಯಾಗಿರಬೇಕು. ಇಂದು ಮಹಿಳೆಯರ ಬಗ್ಗೆ ಮಾತನಾಡುವ ನಾವೆಲ್ಲ ಅಂದಿನ ಪರಿಸ್ಥಿತಿಯನ್ನ ನೆನೆಯಬೇಕು. ಅಂತಹ ಕನಿಷ್ಠ ಪರಿಸ್ಥಿತಿಯನ್ನು ಮೀರಿ ಮಹಿಳೆಯರಿಗೆ ನ್ಯಾಯ ಒದಗಿಸಿಕೊಟ್ಟ ಕೀರ್ತಿ ಸಾವಿತ್ರಿಬಾಯಿ ಅವರದು” ಎಂದರು.
ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ “ಸುವರ್ಣ ಸಿರಿ” ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಸಾಹಿತಿ ಸಿ.ಆರ್. ಗೋಕಾವಿ “ಮಾತು ಮುತ್ತಿನಂತಿರಬೇಕು. ಮಾತಲ್ಲಿ ಮತಿ ಇರಬೇಕು. ಮತೀಯವಾಗಿರಬಾರದು” ಎಂದರು.
ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಈಶ್ವರ ಮೆಡ್ಲೇರಿ ಮಾತನಾಡಿ “ಎಲ್ಲರ ಸಹಕಾರದಿಂದ ತಾಲೂಕ ಘಟಕ ಈಗಾಗಲೇ 151 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿ ಮುಂದೆ ಸಾಗುತ್ತಿದೆ” ಎಂದು ಎಲ್ಲರ ಸಹಕಾರ ಸ್ಮರಿಸಿದರು.
ಸಹಸ್ರಾರ್ಜುನ ಬಿ.ಇಡಿ ಮಹಾವಿದ್ಯಾಲಯದ ಪ್ರಾಚಾರ್ಯ ಆರ್ ಎಂ ಅಂಗಡಿ, ಯುವ ಸಾಂಸ್ಕೃತಿಕ ಚಿಂತಕ ಮಹೇಶ ಲಿಂಬಯ್ಯಸ್ವಾಮಿಮಠ ಮುಖ್ಯ ಅತಿಥಿಗಳ ಸ್ಥಾನವಹಿಸಿ ಮಾತನಾಡಿದರು. ಚೆನ್ನಮ್ಮ ಶೈಕ್ಷಣಿಕ ಹಾಗೂ ವಿವಿಧೋದ್ದೇಶಗಳ ಸಮಿತಿಯ ಕಾರ್ಯದರ್ಶಿ ಕೃಷ್ಣಾಸಾ ಖೋಡೆ ಹಾಗೂ ಅಧ್ಯಕ್ಷ ವಸಂತಸ ಖೋಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕರಿಯಪ್ಪ ಶಿರಹಟ್ಟಿ ಇವರ ಉಚಿತ ಅನ್ನ ಜೋಳಿಗೆ ಬಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರನ್ನು, ಆಹ್ವಾನಿತರನ್ನು ಸನ್ಮಾನಿಸಲಾಯಿತು.
ಬಿ. ಇ ಡಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪೂರ್ಣಿಮಾ ಕಮತದ ಪ್ರಾರ್ಥಿಸಿದರು. ಕಸಾಪ ಗೌರವ ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ವಂದಿಸಿದರು. ರತ್ನಾ ಕರ್ಕಿ ಕಾರ್ಯಕ್ರಮ ನಿರೂಪಿಸಿದರು.
ಪದಾಧಿಕಾರಿಗಳಾದ ಎಚ್. ಎಮ್. ಗುತ್ತಲ, ಎಸ್.ಬಿ. ಅಣ್ಣಿಗೇರಿ, ನಿರ್ಮಲ ಅರಳಿ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸಿ.ಜಿ ಹಿರೇಮಠ, ಡಿ.ಎಫ್ ಪಾಟೀಲ, ಮುರಳೀಧರ ಹುಬ್ಬಳ್ಳಿ, ಕೋಟಿ ಮಠ, ಸುಶೀಲಾ ಹಿರೇಮಠ, ಸುಲೋಚನಾ ಜವಾಯಿ, ವಿ ಎಮ್ ಹೂಗಾರ,ಕಾಲೇಜಿನ ಉಪನ್ಯಾಸಕ ವರ್ಗ ಉಪಸ್ಥಿತರಿದ್ದರು. ಹಾಗೂ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.