Home » News » “ಹಸಿದವನಿಗೆ ಅನ್ನ ಕೊಡುವ ಬದಲಾಗಿ ಅನ್ನ ಗಳಿಸಿಕೊಳ್ಳುವ ಕಲೆಯನ್ನು ಕಲಿಸಿಕೊಡೋಣ”ಪ್ರೊ.  ಮುರಳಿಧರ ಹೆಗ್ಡೆ

“ಹಸಿದವನಿಗೆ ಅನ್ನ ಕೊಡುವ ಬದಲಾಗಿ ಅನ್ನ ಗಳಿಸಿಕೊಳ್ಳುವ ಕಲೆಯನ್ನು ಕಲಿಸಿಕೊಡೋಣ”ಪ್ರೊ.  ಮುರಳಿಧರ ಹೆಗ್ಡೆ

by CityXPress
0 comments

ಗದಗ:ಪರೀಕ್ಷೆಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ಮಕ್ಕಳಲ್ಲಿ ಅಗಾಧವಾದ ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ಹೊರ ತರಲು ಸೂಕ್ತವಾದ ವೇದಿಕೆಗಳು ಬೇಕು, ಅಂತಹ ಒಂದು ವೇದಿಕೆಯನ್ನು ಚಿಕ್ಕಟ್ಟಿ ಗುರುಗಳು ಕಲ್ಪಿಸಿಕೊಟ್ಟಿದ್ದಾರೆ ಎಂದು ಧಾರವಾಡದ ಪ್ರೊ.ಮುರಳಿಧರ ಹೆಗ್ಡೆಯವರು ಕರೆ ನಿಡಿದರು.

ಗದಗನ ಪ್ರತಿಷ್ಠಿತ ಚಿಕ್ಕಟ್ಟಿ ಸಂಸ್ಥೆಯ ಶಾಲಾ-ಕಾಲೇಜುಗಳಲ್ಲಿ ನಡೆದ ವಿದ್ಯಾರ್ಥಿ ವೇತನ ಪರೀಕ್ಷೆ ಮತ್ತು ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಕ್ಕಳು ವೃತ್ತಿಪರ ಶಿಕ್ಷಣವನ್ನು ಹುಡುಕಿಕೊಂಡು ದೂರದ ಮಂಗಳೂರು, ಧಾರವಾಡ ಊರುಗಳಿಗೆ ಹೋಗುತ್ತಾರೆ, ನಮ್ಮಲ್ಲಿಯೇ ಆ ಕೋರ್ಸ್‍ಗಳನ್ನು ಆರಂಭಿಸಬೇಕು ಎನ್ನುವ ಸದುದ್ಧೇಶದಿಂದ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.  ಸಾಮಾನ್ಯವಾಗಿ ಶಾಲಾ-ಕಾಲೇಜುಗಳಲ್ಲಿ ಫಿಜಿಕ್ಸ್ ಲ್ಯಾಬ್,  ಕೆಮೆಸ್ಟ್ರಿ ಲ್ಯಾಬ್‍ಗಳಿರುತ್ತವೆ. ಆದರೆ ಚಿಕ್ಕಟ್ಟಿ ಕಾಲೇಜಿನಲ್ಲಿ ವಿಶೇಷವಾಗಿ ಮೆಥಮೆಟಿಕ್ಸ ಗೂ ಒಂದು ಲ್ಯಾಬ್ ಇದೆ. ಅಷ್ಟೇ ಅಲ್ಲ ಬಯಲು ವಿಜ್ಞಾನ ಪ್ರಯೋಗಾಲಯವಿದೆ, ಸುಮಾರು ಮೂವತೈದು ಸಾವಿರ ಪುಸ್ತಕಗಳಿರುವ ವಿಶಾಲವಾದ ಗ್ರಂಥಾಲಯವಿದೆ.  ಈ ಎಲ್ಲ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಲೆಂದು ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. 

ಇಪ್ಪತ್ತೈದು ಲಕ್ಷ ರೂಪಾಯಿಗಳ ವಿದ್ಯಾರ್ಥಿ ವೇತನ ಪರೀಕ್ಷೆ ನಡೆಯುವ ಪೂರ್ವದಲ್ಲಿ 10ನೇ ತರಗತಿಯ ಮಕ್ಕಳಿಗೆ ಪರೀಕ್ಷೆ ಗರಿಷ್ಟ ಅಂಕಗಳನ್ನು ಪಡೆಯುವುದು ಹೇಗೆ ಎಂಬುದನ್ನು ನಮ್ಮ ಕಾರ್ಯಾಗಾರದ ಮೂಲಕ ನಮ್ಮ ಸಂಪನ್ಮೂಲ ವ್ಯಕ್ತಿಗಳು ತಮಗೆ ತಿಳಿಸಿಕೊಡುತ್ತಾರೆ.  ಈ ಪರೀಕ್ಷೆ ಒಂದು ಗಂಟೆ ನಡೆಯುತ್ತದೆ ಪರೀಕ್ಷೆಯನ್ನು ಸರಿಯಾಗಿ ಯೋಚನೆ ಮಾಡಿ ಸರಿಯಾದ ಉತ್ತರಗಳನ್ನು ಗುರುತಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. 

banner

ಮುಖ್ಯ ಅತಿಥಿಗಳಾಗಿ ಆಗಮಿಸಿದ ಧಾರವಾಡದ ಶ್ರೀ ಮಂಜುನಾಥ ಎ. ಅವರು ಮಾತನಾಡಿ, ಅಂದಿನ ನಮ್ಮ ಕಾಲದ ವಿದ್ಯಾಭ್ಯಾಸಕ್ಕೂ ಇಂದಿನ ಮಕ್ಕಳ ವಿದ್ಯಾಭ್ಯಾಸಕ್ಕೂ ತುಂಬಾ ವ್ಯತ್ಯಾಸವಿದೆ, ಅಂದಿನ ದಿನಮಾನಗಳಲ್ಲಿ ಪಠ್ಯಕ್ರಮ ಬಹಳ ಇತ್ತು ಹಾಗೂ ಅದರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಯಾವುದೇ ಬೇರೆ ರೀತಿಯ ಸುಲಭ ಸೌಕರ್ಯ ಮತ್ತು ಸವಲತ್ತುಗಳು ಇರಲಿಲ್ಲ, ಪ್ರತಿಯೊಂದು ವಿಷಯಕ್ಕೆ 100 ಅಂಕಗಳ ಪ್ರಶ್ನೆ ಪತ್ರಿಕೆಗಳಿರುತ್ತಿದ್ದವು.  ಆದರೆ ಇಂದಿನ ಮಕ್ಕಳಿಗೆ ಪುಸ್ತಕಗಳಲ್ಲಿ ಪಠ್ಯಕ್ರಮ ಕೂಡಾ ಕಡಿಮೆ ಇದೆ ಮತ್ತು ಪ್ರತಿ ವಿಷಯದ 100 ಅಂಕಗಳಲ್ಲಿ 80 ಅಂಕಗಳಿಗೆ ಲಿಖಿತ ಮತ್ತು 20 ಆಂತರಿಕ ಅಂಕಗಳು ಇರುತ್ತವೆ.  ಇದರಿಂದ ಮಕ್ಕಳಿಗೆ ಹೆಚ್ಚು ಅಂಕಗಳನ್ನು ಪಡೆಯಲು ಅನುಕೂಲವಾಗುತ್ತದೆ.

ಈಗಿನ ಮಕ್ಕಳು ತಮ್ಮ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ವಹಿಸದೆ ಟಿ.ವಿ. ಹಾಗೂ ಮೊಬೈಲನಲ್ಲಿ ಇರುವಂತಹ ಸೋಶಿಯಲ್ ಮೀಡಿಯಾಗಳಾದ ಫೇಸ್‍ಬುಕ್, ಇನಸ್ಟಾಗ್ರಾಂ, ಇತರೆ ವಿಷಯಗಳಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದಾರೆ. ಅದರಲ್ಲಿ ತೋರುವ ತಮ್ಮ ಆಸಕ್ತಿಯನ್ನು ಪುಸ್ತದಲ್ಲಿ ತೊಡಗಿಸಿಕೊಂಡರೆ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆಯಬಹುದು.  ಉದಾಹರಣೆಗೆ ಹೆಳಬೇಕೆಂದರೆ ಮಕ್ಕಳು ತಾವು ನೋಡಿದ ಯಾವುದೇ ಒಂದು ಚಲನಚಿತ್ರವಾಗಲಿ ಅಥವಾ ಮೊಬೈಲನಲ್ಲಿ ವಿಕ್ಷಿಸಿದ ವಿಷಯವನ್ನು ಕುರಿತು ಕೇಳಿದರೆ ಆ ವಿಷಯವನ್ನು ಒಂದು ವರ್ಷಗಳ ನಂತರವೂ ಸಹ ಅದನ್ನು ಸರಿಯಾಗಿ ವಿವರಿಸುತ್ತಾರೆ. ಅದೇ ಪುಸ್ತಕದಲ್ಲಿರುವ ಯಾವುದೇ ವಿಷಯದ ಬಗ್ಗೆ ಪ್ರಶ್ನೆ ಕೇಳಿದರೆ ಅದು ಅವರಿಗೆ ನೆನಪಿರುವದಿಲ್ಲ.  ಅದಕ್ಕೆ ಕಾರಣ ಮಕ್ಕಳಲ್ಲಿ ಓದುವ ಆಸಕ್ತಿ ಕಡಿಮೆಯಾಗಿದೆ ಮತ್ತು ಓದಿದ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ ಇದಕ್ಕೆ ಕಾರಣ ಅವರ ವಿದ್ಯಾಭ್ಯಾಸದ ಕಡೆಗಿರುವ ನಿರಾಸಕ್ತಿ. ಯಾವುದೊ ಒಂದು ಚಲನಚಿತ್ರವಾಗಲಿ ಅಥವಾ ಮೊಬೈಲ್‍ನಲ್ಲಿ ನೋಡಿದ ವಿಷಯವನ್ನು ಹೇಗೆ ನೆನಪಿಟ್ಟುಕೊಳ್ಳುತ್ತಾರೊ ಅದೇ ರೀತಿಯಾಗಿ ಪುಸ್ತಕದಲ್ಲಿ ಓದಿರುವ ವಿಷಯವನ್ನು ನೆನಪಿಟ್ಟುಕೊಂಡರೆ ಅವರು ಪರೀಕ್ಷೆಯಲ್ಲಿ ರ್ಯಾಂಕ ಪಡೆಯುವುದರಲ್ಲಿ  ಸಂದೇಹವಿಲ್ಲ ಎಂದು ವಿವರಿಸಿದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀ ರಾಮಚಂದ್ರ ಮೋನೆ ನಿವೃತ್ತ ವಿಜ್ಞಾನ ಶಿಕ್ಷಕರು ಮತ್ತು ‘ಲರ್ನಿಂಗ್ ಆಂಡ್ ಡೆವಲೆಪಮೆಂಟ್ ಸ್ಪೇಶಾಲಿಸ್ಟ್,’ಗದಗ ಅವರು ಮಾತನಾಡಿ, ವಿದ್ಯಾರ್ಥಿಗಳು ಮೊದಲು ಪಠ್ಯಕ್ರಮವನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಯಾವ ಪಾಠಕ್ಕೆ ಎಷ್ಟು ಅಂಕ, ಯಾವ ವಿಷಯ ಮುಖ್ಯ ಎಂಬುದು ಸ್ಪಷ್ಟವಾಗಿರಬೇಕು. ಯಾವ ದಿನ, ಯಾವ ವಿಷಯ, ಎಷ್ಟು ಸಮಯ ಎಂಬುದು ನಿಶ್ಚಿತವಾಗಿರಬೇಕು. ವೇಳಾ ಪಟ್ಟಿಯಂತೆ ದಿನವೂ 2-3 ಗಂಟೆ ಏಕಾಗ್ರತೆಯಿಂದ ಅಧ್ಯಯನ ಮಾಡಿದರೆ ಉತ್ತಮ ಫಲಿತಾಂಶ  ಖಚಿತ, ಕಂಠಪಾಠ ಮಾಡುವುದಕ್ಕಿಂತ ಅರ್ಥಮಾಡಿಕೊಂಡು ಓದುವುದು ಬಹಳ ಮುಖ್ಯ. ಅನೇಕ ವಿದ್ಯಾರ್ಥಿಗಳು ಓದುತ್ತಾರೆ, ಆದರೆ ಬರೆಯುವುದಿಲ್ಲ. ಪರೀಕ್ಷೆಯಲ್ಲಿ ಅಂಕಗಳು ಬರವಣಿಗೆಯಿಂದಲೇ ಬರುತ್ತವೆ. ನಿಯಮಿತವಾಗಿ ಉತ್ತರ ಬರೆಯುವ ಅಭ್ಯಾಸ ಇರಲಿ. ಯಾವುದೇ ವಿಷಯದಲ್ಲಾಗಲಿ ಸಣ್ಣ ಅನುಮಾನವಿದ್ದರೂ ಸಂಬಂಧಿಸಿದ ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳಿರಿ. ಅನುಮಾನ ತಿಳಿದುಕೊಳ್ಳುವುದೇ ಜ್ಞಾನ ಹೆಚ್ಚಿಸುವ ಮೊದಲ ಹೆಜ್ಜೆ. ಪರೀಕ್ಷೆ ಎಂಬ ಭಯ, ಒತ್ತಡ, ಬೇಡ. ನಾನು ಬರೆಯಬಲ್ಲೆ ಎಂಬ ಆತ್ಮವಿಶ್ವಾಸ ಮತ್ತು ನಂಬಿಕೆ ಇರಲಿ. ಈ ಕಾರ್ಯಾಗಾರದಲ್ಲಿ ಪಡೆದ ಮಾರ್ಗದರ್ಶನವನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡು ಉತ್ತಮ ಅಂಕಗಳೊಂದಿಗೆ ಯಶಸ್ವಿ ಭವಿಷ್ಯ ನಿರ್ಮಿಸಿಕೊಳ್ಳಿರಿ ಎಂದು ತಿಳಿಸಿದರು.

 ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀ ಎಂ, ಎಚ್, ಸವದತ್ತಿ ತಾಂತ್ರಿಕ ಸಹಾಯಕರು, ಸಮಗ್ರ ಶಿಕ್ಷಣ, ಕರ್ನಾಟಕ ಉಪನಿರ್ದೇಶಕರ ಕಛೇರಿ ಶಾಲಾ ಶಿಕ್ಷಣ ಇಲಾಖೆ ಗದಗ ಅವರು ಮಾತನಾಡಿ, ಎಲ್. ಇ. ಡಿ. ಸ್ಕ್ರೀನ್ ಮೂಲಕ ಪರೀಕ್ಷಾ ತಯಾರಿ ಆಧುನಿಕ ಮತ್ತು ಪರಿಣಾಮಕಾರಿ ಅಧ್ಯಯನದ ವಿಧಾನಗಳನ್ನು ತಿಳಿಸುತ್ತಾ ಸಾಮಾನ್ಯ ತರಗತಿಗಿಂತ ಎಲ್. ಇ. ಡಿ. ಸ್ಕ್ರೀನ್ ಮೂಲಕ ತಿಳಿಸುವುದು ವಿದ್ಯಾರ್ಥಿಗಳ ಗಮನ ಸೆಳೆಯುತ್ತದೆ. ಕೇಳುವುದಕ್ಕಿಂತ ನೋಡುವುದರಿಂದ ವಿಷಯ ಹೆಚ್ಚು ದಿನ ನೆನಪಿನಲ್ಲಿ ಉಳಿಯತ್ತದೆ. ಪರೀಕ್ಷೆ ಬರೆದು ಹೆಚ್ಚು ಅಂಕಗಳಿಸಲು ಬೇರೆ ಬೇರೆ ಸ್ಲೈಡ್‍ಶೋಗಳ ಮೂಲಕ ವಿಜ್ಞಾನ ವಿಷಯದಲ್ಲಿ ಬರುವಂತ ಹಂತಗಳನ್ನು ವಿಭಾಗಗಳಾಗಿ ವಿಂಗಡಣೆ ಮಾಡಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರವನ್ನು ಮಕ್ಕಳ ಮನಮುಟ್ಟುವಂತೆ ವಿವರಿಸಿದರು. ಪ್ರತಿ ವಿಷಯದ ಪ್ರಶ್ನೆ ಪತ್ರಿಕೆ ನೂರು ಅಂಕಗಳಿಗಿರುತ್ತದೆ, ಅದರಲ್ಲಿ ನೀವು ಉತ್ತರಿಸುವುದು 80 ಅಂಕಗಳಿಗೆ ಮಾತ್ರ. ಇನ್ನುಳಿದ 20 ಅಂಕಗಳು ಅಥವಾ ಪ್ರಶ್ನೆಗಳಿರುತ್ತವೆ. ಗಣಿತ ವಿಜ್ಞಾನದಂತ ವಿಷಯಗಳನ್ನು ಚಿತ್ರಗಳು, ಚಾರ್ಟುಗಳು ಮತ್ತು ಅನಿಮೇಶನ್ ಮೂಲಕ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದೆಂದು ತಿಳಿಸಿದರು.

    ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ ಪ್ರೊ. ಎಸ್. ವಾಯ್ ಚಿಕ್ಕಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳ ಜೀವನದಲ್ಲಿ 10 ನೇ ತರಗತಿ ಒಂದು ಮೈಲಿಗಲ್ಲು. ಈ ಹಂತದಲ್ಲಿ ಪಡೆದ ಅಂಕಗಳು ನಿಮ್ಮ ಮುಂದಿನ ಶಿಕ್ಷಣ ಮತ್ತು ವೃತ್ತಿಯ ದಾರಿಯನ್ನು ನಿರ್ಧರಿಸುತ್ತವೆ. ಹೆಚ್ಚು ಅಂಕಗಳಿಸುವುದು ಕಷ್ಟವಲ್ಲ ಸರಿಯಾದ ವಿಧಾನ ಬೇಕು. ಮೊದಲು ಮನೆಯಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು ಶಾಲೆಯಲ್ಲಿ ಶಿಕ್ಷಕರು ಕೊಟ್ಟ ಓದುಬರಹವನ್ನು ವಿದ್ಯಾರ್ಥಿಗಳು ಮನೆಯಲ್ಲಿ ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆಯಲು ಸಾಧ್ಯ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯುವುದರೊಂದಿಗೆ ಸಮಯಕ್ಕೆ ಸರಿಯಾಗಿ ನಡೆದುಕೊಂಡು ಗುರುಹಿರಿಯರನ್ನು, ತಂದೆ-ತಾಯಿಯನ್ನು ಗೌರವಿಸುತ್ತಾರೋ ಅಂತವರು ತಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಈ ವಿದ್ಯಾರ್ಥಿ ವೇತನ ಪರೀಕ್ಷೆ ಬರೆದು ಹೆಚ್ಚು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುವಂತಾಗಲಿ. ಕಾರ್ಯಾಗಾರದಲ್ಲಿ ತಿಳಿಸುವಂತಹ ಸಲಹೆ ಸೂಚನೆಗಳನ್ನು ಪರೀಕ್ಷೆಯಲ್ಲಿ ಅಳವಡಸಿಕೊಂಡು ಗರಿಷ್ಠ ಅಂಕ ಪಡೆಯಿರಿ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಶ್ರೀ ಸುರೇಶ ಅಂಗಡಿ  ಮಾರುತಿ ಬುಕಸ್ಟಾಲ್, ಗದಗ ಉಪಪ್ರಾಚಾರ್ಯರಾದ ಶ್ರೀಮತಿ ಶೋಭಾ ಸ್ಥಾವರಮಠ ಮುಖ್ಯೋಪಾದ್ಯಾಯನಿಯರಾದ ಶ್ರೀಮತಿ ರಿಯಾನ ಮುಲ್ಲಾ, ಶ್ರೀಮತಿ ಶೋಭಾ ಭಟ್, ಶ್ರೀಮತಿ ಪುಷ್ಪಲತಾ ಬೆಲೇರಿ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.

ವಿದ್ಯಾರ್ಥಿ ವೇತನ ಪರೀಕ್ಷೆಯನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರತ್ಯೇಕವಾಗಿ ನಡೆಸಲಾಗುವುದು ಕನ್ನಡ ಭಾಷೆಯಲ್ಲಿ ಸುಮಾರು 350 ವಿದ್ಯಾರ್ಥಿನಿಗಳು ಆಂಗ್ಲ ಭಾಷೆಯಲ್ಲಿ ಸುಮಾರು 250 ವಿದ್ಯಾರ್ಥಿಗಳು  ಪರೀಕ್ಷೆ ಬರೆಯಲು ಹಾಜರಾಗಿದ್ದಾರೆ.

ಕಾರ್ಯಾಗಾರದ ನಿರೂಪಣೆ ಮತ್ತು ಸ್ವಾಗತವನ್ನು ಕನ್ನಡ ಉಪನ್ಯಾಸಕರಾದ ಶ್ರೀ ಶ್ರೀಶೈಲ ಬಡಿಗೇರ ನಿರ್ವಹಿಸಿದರೆ ಹಿಂದಿ ಭಾಷಾ ಶಿಕ್ಷಕರಾದ ಶ್ರೀ ಗಣೇಶ ಬಡ್ನಿ ವಂದನಾರ್ಪಣೆಗೈದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb