ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.
ಮೊದಲು ನಾಯಿ ಅಡ್ಡ ಬಂದಿದ್ದರಿಂದ, ಅದನ್ನ ತಪ್ಪಿಸಲು ಹೋಗಿ, ಕಾರು ಅಪಘಾತಕ್ಕೊಳಗಾಗಿದೆ ಎನ್ನಲಾಗಿತ್ತು. ನಂತರ ಸರ್ಕಾರಿ ಕಾರು ಚಾಲಕನ ಮೇಲೆ ದೂರು ಕೂಡ ದಾಖಲಾಗಿತ್ತು. ಪೊಲೀಸರು ಅಪಘಾತ ನಡೆದ ಸ್ಥಳಕ್ಕೆ ಪಂಚನಾಮೆಗೆಂದು ಬರುವ ಮುನ್ನವೇ, ಅಪಘಾತಕ್ಕೊಳಗಾದ ಕಾರನ್ನ ಸ್ಥಳಾಂತರಿಸಲಾಗಿತ್ತು.

ಇದೀಗ ಮತ್ತೊಂದ ಹೊಸ ಟ್ವಿಸ್ಟ್ ಪಡೆದುಕೊಂಡಿದ್ದು, ಘಟನೆ ಸಂಬಂಧ ಕಾರು ಚಾಲಕನ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ ಇದೇ ಸರ್ಕಾರಿ ಚಾಲಕ ಓವರ್ ಟೇಕ್ ಮಾಡಿದ ಟ್ರಕ್ ವಾಹನ ಚಾಲಕನ ವಿರುದ್ಧ ದೂರು ನೀಡಿದ್ದಾನೆ.
ಟ್ರಕ್ ಚಾಲಕ ತಮ್ಮನ್ನು ಓವರ್‌ಟೇಕ್ ಮಾಡುವ ಪ್ರಯತ್ನದಲ್ಲಿ ಕಾರಿಗೆ ಗುದ್ದಿದ ಪರಿಣಾಮ ಈ ಅಪಘಾತವಾಗಿದೆ ಎಂದು ಕಾರಿನ ಚಾಲಕ ಜಿ. ಶಿವಪ್ರಸಾದ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.