ಬೆಳಗಾವಿ: ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರ ಕಾರು ಜನವರಿ 14ರಂದು ಅಪಘಾತಕ್ಕೀಡಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಪಘಾತಕ್ಕೀಡಾದ ಲಾರಿಯ ಚಾಲಕನನ್ನು ಕೊನೆಗೂ ಕಿತ್ತೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರು ಅಪಘಾತದ ನಂತರ ನಾಪತ್ತೆಯಾಗಿದ್ದ ಚಾಲಕನ ಪತ್ತೆಹಚ್ಚಿ ಬಂಧಿಸುವ ಮೂಲಕ, ಈ ಪ್ರಕರಣದಲ್ಲಿ ಮಹತ್ವದ ತಿರುವು ಕಂಡಿದೆ.
ಅಪಘಾತವು ನಡೆದಿದ್ದು, ಬೆಳಗಾವಿ ಜಿಲ್ಲೆಯ ಕಿತ್ತೂರಿನ ಅಂಬಡಗಟ್ಟಿ ಕ್ರಾಸ್ ಬಳಿ ಸಚಿವೆಯವರ ಕಾರಿಗೆ ಹತ್ತಿರದಿಂದ ಬಂದ ಲಾರಿಯೊಂದು ಹಿಂದಿನಿಂದ ಗುದ್ದಿ ಅಪಘಾತಕ್ಕೀಡಾಗಿತ್ತು.

ಈ ಘಟನೆಯ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದನು. ಘಟನೆ ತಕ್ಷಣವಾಗಿ ಸುದ್ದಿಯಾಗಿದ್ದು, ಪೊಲೀಸ್ ಇಲಾಖೆಯು ತನಿಖೆ ಆರಂಭಿಸಿತ್ತು.
ತಕ್ಷಣ ಕಾರ್ಯಾಚರಣೆ ಆರಂಭಿಸಿದ ಕಿತ್ತೂರು ಠಾಣೆಯ ಪೊಲೀಸರು, ಲಾರಿ ಹಾಗೂ ಅದರ ಚಾಲಕನ ಪತ್ತೆಹಚ್ಚುವ ಉದ್ದೇಶದಿಂದ ಹಲವು ಕಡೆಗಳಲ್ಲಿ ದಾಳಿ ನಡೆಸಿದರು. ಈ ತನಿಖೆಯ ಭಾಗವಾಗಿ, ಇದೀಗ ಮಹಾರಾಷ್ಟ್ರದ ಪುಣೆಯ ಇಂದಾಪುರ ತಾಲೂಕಿನ ತಕ್ರಾರವಾಡಿ ಗ್ರಾಮದಿಂದ ಚಾಲಕ ಮಧುಕರ ಕೊಂಡಿರಾಮ ಸೋಮವಂಶಿಯನ್ನು ಬಂಧಿಸಲಾಗಿದೆ. ಬಂಧಿತ ಚಾಲಕನನ್ನು ಪೊಲೀಸ್ ತಂಡ ವಿಶೇಷ ಕಾರ್ಯಾಚರಣೆ ಮೂಲಕ ಪತ್ತೆಹಚ್ಚಿದ್ದು, ತನಿಖೆಯನ್ನು ಮತ್ತಷ್ಟು ಗಂಭೀರವಾಗಿ ಮುಂದುವರಿಸಿದ್ದಾರೆ.

ಮೇಲಿನ ಪೋಸ್ಟ್ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಪೊಲೀಸರು ಅಪಘಾತಕ್ಕೆ ಕಾರಣವಾದ ಲಾರಿಯನ್ನು ಕೂಡಾ ಜಪ್ತಿ ಮಾಡಿದ್ದು, ವಾಹನ ತಾಂತ್ರಿಕ ಪರಿಶೀಲನೆಯ ಮೂಲಕ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಲಾರಿಯ ದೌರ್ಬಲ್ಯ ಅಥವಾ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಾಯಿತೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಆರೋಪಿಗಳು ಇದ್ದರೆ, ಅವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಲಾಗಿದೆ. ಸಚಿವೆಯವರು ಅಪಘಾತದ ವೇಳೆ ಗಂಭೀರ ಗಾಯವಿಲ್ಲದೇ ಪಾರಾಗಿದ್ದು, ಅದೃಷ್ಟವೆಂಬಷ್ಟರಲ್ಲೇ ಬಚಾವ್ ಆಗಿತ್ತು ಎಂಬ ಮಾತುಗಳು ಬಹಿರಂಗವಾಗಿದ್ದವು.