ಗದಗ : ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಲೆದರಬಾಲ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಲಕ್ಷ್ಮೇಶ್ವರ ಸರ್ಕಾರಿ ನೌಕರರ ಕ್ರಿಕೆಟ್ ತಂಡ ಸೆಮಿ ಫೈನಲ್ ಪಂದ್ಯದಲ್ಲಿ ಮುಂಡರಗಿ ಕ್ರಿಕೆಟ್ ತಂಡವನ್ನು ಮಣಿಸಿ ಲಕ್ಷ್ಮೇಶ್ವರ ನೌಕರರ ತಂಡ ಈಗಾಗಲೇ
ಫೈನಲ್ ಪ್ರವೇಶಿಸಿದ್ದು ತಾಲೂಕಿನ ನೌಕರರ ಗೌರವ ಆಗಿದೆ. ಸೆಮಿ ಫೈನಲ್ ಪಂದ್ಯದಲ್ಲಿ ಉತ್ತಮವಾಗಿ ಆಡಿ ಪೈನಲ್ ಪ್ರವೇಶಿಸಿದೆ.
ನಾಳೆ ಶನಿವಾರ ಮದ್ಯಾಹ್ನ 2 ಗಂಟೆಗೆ ಗದಗ ASS ಕಾಲೇಜು ಮೈದಾನದಲ್ಲಿ ಜರುಗಲಿರುವ ಫೈನಲ್ ಪಂದ್ಯಕ್ಕೆ ನೌಕರರು ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸಲು ಕ ರಾ ಸ ನೌಕರರ ಸಂಘ ಲಕ್ಷ್ಮೇಶ್ವರ ತಾಲೂಕ ಅಧ್ಯಕ್ಷ ಗುರುರಾಜ ಹವಳದ, ಕಾರ್ಯದರ್ಶಿ ಎಂ ಎ ನದಾಫ್, ಎಂ ಡಿ ವಾರದ, ಬಿ ಎಂ ಯರಗುಪ್ಪಿ, ಜಿಲ್ಲಾ ಶಾಖೆಯ ಶ ಎಲ್ ಎನ್ ನಂದೇಣ್ಣವರ್, ಎಂ ಎಸ್ ಹಿರೇಮಠ, ಕ ರಾ ಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಹರಲಾಪುರ, ಕಾರ್ಯದರ್ಶಿ ಚಂದ್ರು ನೇಕಾರ, ಖಜಾಂಚಿ ಬಸು ಯತ್ನಳ್ಳಿ ಹಾಗೂ ನೌಕರರ ಸಂಘದ, ಶಿಕ್ಷಕರ ಸಂಘದ ಸದಸ್ಯರು ಮಾದ್ಯಮದ ಜತೆ ಮಾಡಿದರು ತಿಳಿಸಿದರು.