Headlines

ಅಂದು ಬೆಂಕಿಯಲ್ಲಿ ಧಗಧಗಿಸಿದ್ದ ಲಕ್ಷ್ಮೇಶ್ವರ ಪೊಲೀಸ್ ಠಾಣೆ! 112 ಜನ್ರ ಪೈಕಿ, 23 ಜನರ ಅಪರಾಧ ಸಾಭೀತು..!ಉಳಿದ 99 ಜನರ ಕಥೆ ಏನು? ತಪ್ಪು ಮಾಡಿದವರಿಗೆ ತಕ್ಕ ಶಾಸ್ತಿ..!

ಗದಗ: ಅದು 2017 ಫೆಬ್ರವರಿ 5. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಯಾರು ಊಹೆ ಮಾಡದಂತ ಘಟನೆ ನಡೆದು ಹೋಗಿತ್ತು..ಮರಳು ದಂಧೆಕೋರರು ಪೊಲೀಸ್ ಠಾಣೆಗೆ ಬೆಂಕಿ ಇಟ್ಟು ಅಟ್ಟಹಾಸ ಮೆರೆದಿದ್ರು. ಅಕ್ರಮ ಮರಳು ಸಾಗಿಸುವ ವಾಹನ ತಡೆದು ಚಾಲಕ ಶಿವಪ್ಪ ಡೋಣಿ ಎಂಬಾನಿಗೆ ಪೊಲೀಸರು ಹಿಗ್ಗಾ ಮುಗ್ಗಾ ಥಳಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಶಿವಪ್ಪ ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರು ಗ್ರಾಮದ ನಿವಾಸಿಯಾಗಿದ್ದ. ನಂತರ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ.

ಆಗಲೇ ನೋಡಿ.ಕುಟುಂಬಸ್ಥರ ಆಕ್ರೋಶದ ಕಟ್ಟೆ ಒಡೆದು ಹೋಗಿತ್ತು. ಮೃತದೇಹ ಸಮೇತವೇ ಸಾವಿರಾರು ಜನ ಪೊಲೀಸ್ ಠಾಣೆ ಮುಂದೆ ಜಮಾಯಿಸಿ,ಶಿವಪ್ಪನ ಶವ ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಿದ್ದರು. ಹೀಗೆ ಪ್ರತಿಭಟನೆಯ ಕಾವು ಜೋರಾಗಿ, ಇಡೀ ಪೊಲೀಸ್ ಠಾಣೆಗೇನೆ ಬೆಂಕಿ ಹಚ್ಚಲಾಗಿತ್ತು.ಈ ವೇಳೆ ಪೊಲೀಸ್ ಠಾಣೆ, ಕಚೇರಿಯಲ್ಲಿದ್ದ ಕಡತಗಳು, ದಾಖಲೆಗಳು, ಪೀಠೋಪಕರಣಗಳು, ಪೊಲೀಸ್ ಜೀಪ್ ಹಾಗೂ ಹತ್ತಾರು ಬೈಕ್ ಗಳು ಬೆಂಕಿಗೆ ಆಹುತಿಯಾಗಿದ್ದ ದೃಶ್ಯ ಇಂದಿಗೂ ಆ ಭಾಗದ ಜನರ ಕಣ್ಣಲ್ಲಿ ಮರೆ ಮಾಚಿಲ್ಲ. ಅಷ್ಟೇ ಅಲ್ಲದೇ ಈ ದುಷ್ಕರ್ಮಿಗಳು ಅನೇಕ ಪೊಲೀಸರ ಮೇಲೆ ಹಲ್ಲೆ ಕೂಡ ಮಾಡಿದ್ದರು. ಈ ಆತಂಕದ ಹೊತ್ತಿನಲ್ಲಿ ಪೊಲೀಸ್ ಠಾಣೆಯಲ್ಲಿ ಇದ್ದಿದ್ದು ಮಾತ್ರ ಮೂವರು ಸಿಬ್ಬಂದಿಗಳು.ಆದರೆ ದಂಧೆಕೋರರು ಅವರ ಮೇಲೆಯೂ ಕೂಡಾ ಹಲ್ಲೆ ಮಾಡಿದ್ರು. ‌

ಅದೃಷ್ಟವಶಾತ್ ಪೊಲೀಸ್ ಠಾಣೆಯ ಹಿಂಬಾಗಿನಿಲಿಂದ ಓಡಿ ಹೋಗಿ ತಮ್ಮ ಜೀವವನ್ನು ಉಳಿಸಿಕೊಂಡಿದ್ರು ಆ ಮೂವರು ಪೊಲೀಸರು. ಇಲ್ಲವಾಗಿದ್ರೆ, ಆ ಮೂವರು ಪೊಲೀಸರಿಗೆ ಏನಾಗುತ್ತಿತ್ತೋ? ದೇವರೆ ಬಲ್ಲ. ಹೀಗೆ ಈ ಎಲ್ಲ ಪ್ರಕರಣದ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬರೊಬ್ಬರಿ 8 ವರ್ಷಗಳ ನಂತರ ಪ್ರಕರಣದಲ್ಲಿ ಭಾಗಿಯಾಗಿದ್ದವರ 122 ಜನರ ಪೈಕಿ ಇದೀಗ 23 ಜನರ ಅಪರಾಧ ಸಾಬೀತು ಆಗಿದ್ದು, ಇದೇ ಮಾ.24 ರಂದು ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತನ್ನ ಶಿಕ್ಷೆ ಪ್ರಕಟಸಿಲಿದೆ.ಆ ಮೂಲಕ ದುಷ್ಕೃತ್ಯ ಮಾಡಿದ್ದ ದುರುಳರಿಗೆ ನ್ಯಾಯಾಲಯ ತಕ್ಕ ಪಾಠ ಕಲಿಸಲಿದೆ.

ಆದರೆ ಅಂದಿನ ಘಟನೆ ಎಷ್ಟು ತೀವ್ರವಾಗಿತ್ತೆಂದರೆ, ಶಿವಪ್ಪ ಡೋಣಿ ಸಾವಿಗೆ ಹೇಗಾದರೂ ಮಾಡಿ ಪ್ರತಿಕಾರ ತೀರಿಸಿಕೊಳ್ಳಬೇಕು ಎನ್ನುವ ಉದ್ದೇಶ ಅವರ ಕುಟುಂಬಸ್ಥರಾಗಿತ್ತು. ಪೆಟ್ರೋಲ್, ಡಿಸೇಲ್,ಬಳಸಿ ಪೊಲೀಸ್ ಠಾಣೆಗೆ ಬೆಂಕಿ ಇಟ್ಟಿದ್ದ ಪ್ರತಿಭಟನಾಕಾರರು, ಪೊಲೀಸ್ ಸಿಬ್ಬಂದಿಯ ಗನ್ ತೆಗೆದುಕೊಂಡು, ಸ್ಥಳದಲ್ಲಿದ್ದ ಪೊಲೀಸರಿಗೆ ಚುಚ್ಚುವ ಪ್ರಯತ್ನ ಕೂಡಾ ಮಾಡಿದ್ದರಂತೆ. ಇಡೀ ಪೊಲೀಸ್ ಠಾಣೆ ಹಾಗೂ ಪೊಲೀಸ್ ವಾಹನಗಳು ಸುಟ್ಟು ಭಸ್ಮ ಆಗಿದ್ದರೂ ಅವರ ದುಷ್ಕೃತ್ಯದ ಕಿಚ್ಚು ತಣ್ಣಗಾಗಿದ್ದಿಲ್ಲ. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ವಿಬೀಳಿಸಿತ್ತು. ಸದ್ಯ 122 ಜನರ ವಿಚಾರಣೆ ಮಾಡಲಾಗಿದ್ದು, ಈವಾಗ 23 ಜನರಿಗೆ ಶಿಕ್ಷೆ ಪ್ರಕಟವಾಗಲಿದೆ. ಉಳಿದ 99 ಜನರಿಗೂ ಶಿಕ್ಷೆ ಆಗಬೇಕು. ಆ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ಮನವಿ ಮಾಡುತ್ತೇವೆ. ಸಾರ್ವಜನಿಕರ ರಕ್ಷಣೆಗೆ ಇರೋ ಪೊಲೀಸ್ ಇಲಾಖೆಯನ್ನೇ ಈ ರೀತಿ ಮಾಡಿರುವ ದುಷ್ಕರ್ಮಿಗಳಿಗೆ ಕೋರ್ಟ್ ತಕ್ಕ ಶಿಕ್ಷೆ ನೀಡಲಿದೆ ಎನ್ನುವ ವಿಶ್ವಾಸವಿದೆ ಎನ್ನುತ್ತಾರೆ ಸರ್ಕಾರಿ ಅಭಿಯೋಜಕರಾಧ ಮಲ್ಲಿಕಾರ್ಜುನ ದೊಡ್ಡಗೌಡ್ರ.

ಇಲ್ಲಿ ಗಮನಿಸಬೇಕಾದದ್ದು, ಇಷ್ಟೆಲ್ಲ ಘಟನೆಗೆ ಕಾರಣ ಮರಳು ದಂದೆಕೋರ ಅಟ್ಟಹಾಸ.ಇವರ ಅಟ್ಟಹಾಸಕ್ಕೆ ಅಂದು ಖಾಕಿ ವಿಲವಿಲ ಎಂದಿತ್ತು.ಆದರೆ ಇದೀಗ 23 ಜನರ ಅಪರಾಧ ಸಾಬೀತು ಆಗಿದ್ದು, ಫೆಬ್ರವರಿ 24 ರಂದು ಯಾವ ಕೋರ್ಟ್ ಯಾವ ಶಿಕ್ಷೆ ನೀಡುತ್ತೇ ಎನ್ನುವದು ಕುತೂಹಲ ಕೆರಳಿಸಿದೆ. ಒಟ್ನಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ವಿ ಅಟ್ಟಹಾಸ ಮೆರೆದು ದಂದೆಕೋರರಿಗೆ ಕಠಿಣ ಶಿಕ್ಷೆ ಆಗಲೇಬೇಕು ಎನ್ನುವದು ಜಿಲ್ಲೆಯ ಜನರ ಆಗ್ರಹವಾಗಿದೆ.

Leave a Reply

Your email address will not be published. Required fields are marked *