ಲಕ್ಷ್ಮೇಶ್ವರ: ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಗಡ್ಡಯ್ಯ ನಗರ ಮತ್ತು ಉಪನಾಳ ಪಾರ್ಕದಲ್ಲಿನ ಮನೆಗಳಲ್ಲಿ ಚಿನ್ನಾಭರಣ ದರೋಡೆ ಮಾಡಿದ್ದ ಕಳ್ಳನನ್ನು ಲಕ್ಷ್ಮೇಶ್ವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಪ್ರೇಮ್ ಶ್ರೀಕಾಂತ ಗದ್ದಿ (27) ಅನ್ನುವಾತನನ್ನ ಪೊಲೀಸರು ಬಂಧಿಸಿದ್ದು, 60 ಸಾವಿರ ರೂ. ಮೌಲ್ಯದ ಚಿನ್ನಾಭರಣ ಮತ್ತು 100 ಗ್ರಾಮ ಬೆಳ್ಳಿ ಆಭರಣಗಳು,1500.ರೂ ನಗದು,ಹಾಗೂ ಒಂದು ಕ್ರಿಮಿನಾಶಕ ಪಂಪಿನ ಚಾರ್ಜರ್ ವಶಕ್ಕೆ ಪಡೆದುಕೊಂಡಿದ್ದಾರೆ.
ಸಿಪಿಐ ನಾಗರಾಜ ಮಾಡಳ್ಳಿ, ಮಾರ್ಗದರ್ಶನದಲ್ಲಿ ಪಿ.ಎಸ್.ಐ ನಾಗರಾಜ ಗಡದ, ಕ್ರೈಮ್ ವಿಭಾಗದ ಪಿಎಸ್ಐ ಟಿ.ಕೆ ರಾಠೋಡ ಹಾಗೂ ಎ.ಎಸ್.ಐ ಎನ್.ಎ ಮೌಲ್ವಿ, ಎ.ಆರ್.ಎಸ್.ಐ ಗುರು ಬೂದಿಹಾಳ (ಟೆಕ್ನಿಕಲ್ ಸೆಲ್) ಎಚ್.ಸಿ ಗಳಾದ ಆರ್.ಎಸ್ ಯರಗಟ್ಟಿ, ಎಮ್.ಎ ಶೇಖ,ಎ.ಆರ್. ಕಮ್ಮಾರ, ಎಮ್.ಎಸ್ ಬಳ್ಳಾರಿ. ಸಿ.ಎಸ್ ಮಠಪತಿ, ಮತ್ತು ಪಿ.ಸಿ ಗಳಾದ ಡಿ.ಎಸ್. ನದಾಫ, ಎಚ್.ಐ ಕಲ್ಲಣ್ಣವರ. ಪಾಂಡುರಂಗರಾವ್, ಸಂಜೀವ ಕೊರಡೂರ (ಟೆಕ್ನಿಕಲ್ ಸೆಲ್) ಮಧುಚಂದ್ರ ಧಾರವಾಡ, ಸೋಮು ವಾಲ್ಮೀಕಿ. ನಂದಯ್ಯ ಮಠಪತಿ ಇವರನ್ನೊಳಗೊಂಡ ತಂಡವನ್ನು ರಚನೆ ಮಾಡಿ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.