ಲಕ್ಷ್ಮೇಶ್ವರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸೇರಿದಂತೆ 8 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು.
ಇಲ್ಲಿನ ಪತ್ರಿಕಾ ಕಾರ್ಯಲಯದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಅಶೋಕ ಸೊರಟೂರ, ಉಪಾಧ್ಯಕ್ಷ–ಸೋಮಣ್ಣ ಯತ್ತಿನಹಳ್ಳಿ, ಪ್ರಧಾನ ಕಾರ್ಯದರ್ಶಿ– ಪರಮೇಶ ಲಮಾಣಿ, ಕಾರ್ಯದರ್ಶಿ– ಶಿವಲಿಂಗಯ್ಯ ಹೋತಗಿಮಠ, ಖಜಾಂಚಿ– ನಾಗರಾಜ ಹಣಗಿ, ಕಾರ್ಯಕಾರಿಣಿ ಸದಸ್ಯರಾಗಿ ದಿಗಂಬರ ಪೂಜಾರ, ಸುರೇಶ ಲಮಾಣಿ, ಮಂಜು ರಾಠೋಡ ಆಯ್ಕೆಯಾದರು.
ನೂತನ ಅಧ್ಯಕ್ಷ ಅಶೋಕ ಸೊರಟೂರ ಮತ್ತು ಪ್ರಧಾನ ಕಾರ್ಯದರ್ಶಿ ಪರಮೇಶ ಲಮಾಣಿ ಮಾತನಾಡಿ, ‘ಮುಂಬರುವ ದಿನಗಳಲ್ಲಿ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಪತ್ರಕರ್ತರ ಅಹವಾಲುಗಳಿಗೆ ಸ್ಪಂದಿಸಲು ಬದ್ದ’ ಎಂದು ಭರವಸೆ ನೀಡಿದರು.