ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಯಾರಿಗೆ ಗೊತ್ತಿಲ್ಲ ಹೇಳಿ. ನೊರೊಂದು ಬಾವಿಗಳನ್ನ ಒಳಗೊಂಡಿರೋ ಲಕ್ಕುಂಡಿ ಇದೀಗ ಭಾರತದ ರಾಜಧಾನಿಯಲ್ಲಿ ಮಿಂಚಲಿದೆ. ಹೌದು,ಜನವರಿ 26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸ್ತಬ್ದಚಿತ್ರಗಳ ಪ್ರದರ್ಶನಕ್ಕೆ ಕರ್ನಾಟಕವೂ ಸೇರಿ 15 ರಾಜ್ಯಗಳು ಆಯ್ಕೆಯಾಗಿವೆ.
ಕರ್ನಾಟಕ ರಾಜ್ಯದಿಂದ ಲಕ್ಕುಂಡಿಯ ಪ್ರಾಚೀನ ದೇವಾಲಯ ಸ್ತಬ್ಧಚಿತ್ರ ಪ್ರದರ್ಶಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ಪ್ರಯತ್ನ ನಡೆಯುತ್ತಿರುವ ಹಿನ್ನೆಲೆ ಲಕ್ಕುಂಡಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚು ಎಂದು ವರದಿ ಹೇಳಿದೆ. ಚಾಲುಕ್ಯರು, ಕಲಚೂರಿಗಳ ಕಾಲದ ಹಲವು ಶೈವ, ಜೈನ ದೇವಾಲಯಗಳು ಲಕ್ಕುಂಡಿಯಲ್ಲಿವೆ.