ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣವು ತಾಲೂಕಾಗಿ ಹತ್ತು ವರ್ಷಗಳೆ ಕಳೆದರು ಜನರಿಗೆ ತಾಲೂಕು ಎಂಬ ಭಾವನೆಯೇ ಬರದಂತಾಗಿದೆ.
ಲಕ್ಷ್ಮೇಶ್ವರ ಸುದ್ದಿ:ಪರಮೇಶ ಎಸ್ ಲಮಾಣಿ.
ತಾಲೂಕು ಎಂದರೆ ಸುಸಜ್ಜಿತ ವ್ಯವಸ್ಥೆಯಾದ ಚರಂಡಿ, ವಿದ್ಯುತ್ ಪೂರೈಕೆ, ಶೌಚಾಲಯ, ಸರಕಾರಿ ಕಚೇರಿಗಳು ಇರಬೇಕು ಆದರೆ ನಗರದಲ್ಲಿ ಈ ಎಲ್ಲವು ನೋಡಿದರೆ ಇದೇನು , ಹಳ್ಳಿವೋ, ಪಟ್ಟಣವೋ ಎಂದು ಜನರಿಗೆ ಅನಿಸುತ್ತದೆ.
*ಹದಿನೈದು ವರ್ಷವಾದರೂ ಹೊಸ ಕಂಬಗಳೆ ಇಲ್ಲ*
ಲಕ್ಷ್ಮೇಶ್ವರದ ಸೌಂದರ್ಯ ಹೆಚ್ಚಿಸುವುದು ವಿದ್ಯುತ್ ಕಂಬಗಳು ಮತ್ತು ಲೈಟ್ಸ್ ಗಳು ಆದರೆ ಇಲ್ಲಿನ ಮುಖ್ಯ ರಸ್ತೆಯಾದ ಬಸ್ ನಿಲ್ದಾಣ ರಸ್ತೆ, ಪಂಪ ಸರ್ಕಲ್, ಹುಬ್ಬಳ್ಳಿ ರಸ್ತೆ ಮತ್ತು ಬಾನು ಮಾರ್ಕೆಟ್ ರಸ್ತೆಗಳಲ್ಲಿ ವರ್ಷಗಳ ಹಿಂದೆ ವಿದ್ಯುತ್ ಕಂಬಗಳ ಮೇಲೆ, ತಳಭಾಗ ಶಿಥಿಲಗೊಂಡಿದೆ. ಮಳೆಗಾಲದಲ್ಲಿ ಮಳೆ ನೀರು ಸಂಗ್ರಹವಾದರೆ, ಶಾಕ್ ಬರುತ್ತಿದೆ. ಇದರಿಂದ ವಿದ್ಯುತ್ ಕಂಬಗಳನ್ನು ನೋಡಿ, ಜನರು ಓಡಾಡದಂತಾಗಿದೆ. ಪಟ್ಟಣದ ಕೆಲ ಓಣಿಗಳ ಮನೆಗಳ ಮೇಲೆ ವಿದ್ಯುತ್ ತಂತಿ ಹಾದು ಹೋಗಿದ್ದು, ಬದಲಿಸುವ ಕ್ರಮತೆಗೆದುಕೊಂಡಿಲ್ಲ.
ಪಟ್ಟಣ ಎಂಬುದಕ್ಕೆ ಯಾವುದೇ ಸ್ವಾಗತದ ನಾಮಫಲಕ ಇಲ್ಲ
ತಿರುಳ್ಗನ್ನಡ ನಾಡು ಪುಲಿಗೆರೆ( ಲಕ್ಷ್ಮೇಶ್ವರ) ಎಂದೆ ಕರೆಯಲ್ಪಡುವ ಈ ಪಟ್ಟಣವು ಐತಿಹಾಸಿಕ ಇತಿಹಾಸ ಹೊಂದಿದೆ. ಹೀಗಾಗಿ ತಾಲೂಕಿಗೆ ಸ್ವಾಗತದ ಕಮಾನು ಆಗುವುದು ಬಹುಮುಖ್ಯ ಇದೆ ಎನ್ನುತ್ತಾರೆ ಜನರು.
ಕೋಟ್:
ನಾನು ಶಾಸಕನಾದಾಗ ಶಿಗ್ಲಿ ನಾಕಾದಿಂದ ಅಂಚೆ ಕಚೇರಿವರೆಗೆ ಹೊಸ ವಿದ್ಯುತ್ ಕಂಬಗಳ, ಲೈಟ್ ಗಳು ಹಾಕಿಸಿದ್ದೆವು, ನಂತರ ಅನೇಕ ಅಭಿವೃದ್ಧಿ ಕಲಸಗಳು ಆಗಿವೆ. ಪಟ್ಟಣದ ಸ್ವಾಗತ ಕಮಾನ ಮಾಡುಲು ಪ್ರಯತ್ನಿಸಿದ್ದೆ. ಆದರೆ ಕಾರಣಾಂತರಗಳಿಂದ ಉಳಿದಿತ್ತು, ಕಾಂಗ್ರೆಸ್ ಸರ್ಕಾರ ಅನುದಾನ ನೀಡುತ್ತದೆ , ಆದಷ್ಟು ಬೇಗ ಅದು ಕಾಮಗಾರಿ ಆಗುವ ನಿರೀಕ್ಷೆಯಲ್ಲಿ ಇದ್ದೆವೆ, ವಿದ್ಯುತ್ ಕಂಬಗಳ ಬಗ್ಗೆ ಶಾಸಕರು, ಅಧಿಕಾರಿಗಳು ಮುತುವರ್ಜಿವಹಿಸಬೇಕಾಗಿದೆ.
ರಾಮಣ್ಣ ಲಮಾಣಿ, ಮಾಜಿ ಶಾಸಕ , ಶಿರಹಟ್ಟಿ
ಕೋಟ್:
ಗದಗ ಜಿಲ್ಲೆಯಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ತಾಲೂಕೆಂದರೆ ಲಕ್ಷ್ಮೇಶ್ವರ ಸುಮಾರು ವರ್ಷದಿಂದ ಪಟ್ಟಣದಲ್ಲಿ ಹಳೆ ಕಂಬಗಳಿವೆ. ಪಟ್ಟಣದ ಅನೇಕ ಕಂಬಗಳು ಬಿರುಕುಬಿಟ್ಟಿವೆ. ಸರ್ಕಾರದಿಂದ ಅನುದಾನ ತಂದು ಅಧಿಕಾರಿಗಳು ಜನ ಪ್ರತಿನಿಧಿಗಳು ಪಟ್ಟಣಕ್ಕೆ ಸ್ವಾಗತ ದ್ವಾರ ಕಮಾನ ಮತ್ತು ಹೊಸ ವಿದ್ಯುತ್ ಕಂಬಗಳು ಹಾಕಬೇಕು.
ಪದ್ಮರಾಜ ಪಾಟೀಲ್, ಸ್ಥಳೀಯರು.-ಬಸವನಗೌಡ ಕೆಂಚರೆಡ್ಡಿ, ಗೌಡಪ್ಪ ಬಲಕುಂದಿ, ಕರಮುಡಿ ನಿವಾಸಿಗಳು.