Home » News » “ಕಾರವಾರ-ಇಳಕಲ್ ಹೆದ್ದಾರಿ ಅಭಿವೃದ್ಧಿಗೆ ಚಾಲನೆ: ‘ಗುಣಮಟ್ಟದ ವಿಷಯದಲ್ಲಿ ಬಿಟ್ಟುಕೊಡಲ್ಲ’ ಎಂದ ಶಾಸಕ ಡಾ. ಚಂದ್ರು ಲಮಾಣಿ!”

“ಕಾರವಾರ-ಇಳಕಲ್ ಹೆದ್ದಾರಿ ಅಭಿವೃದ್ಧಿಗೆ ಚಾಲನೆ: ‘ಗುಣಮಟ್ಟದ ವಿಷಯದಲ್ಲಿ ಬಿಟ್ಟುಕೊಡಲ್ಲ’ ಎಂದ ಶಾಸಕ ಡಾ. ಚಂದ್ರು ಲಮಾಣಿ!”

by CityXPress
0 comments

ಲಕ್ಷ್ಮೇಶ್ವರ: ಸಾರ್ವಜನಿಕರಿಗೆ ಉತ್ತಮ ರಸ್ತೆ ವ್ಯವಸ್ಥೆ ಸೇರಿದಂತೆ ಗ್ರಾಮೀಣ ಭಾಗದ ಎಲ್ಲ ಜನರಿಗೆ ಮೂಲ ಸೌಕರ‌್ಯ ಒದಗಿಸಿ ಕೊಡಲು ನಿರಂತರ ಶ್ರಮಿಸುವದಾಗಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಲಕ್ಷ್ಮೇಶ್ವರ ಸುದ್ದಿ.
ಪರಮೇಶ ಎಸ್ ಲಮಾಣಿ.

ಗದಗ – ಲಕ್ಷ್ಮೇಶ್ವರ ಪಾಲಾ – ಬಾದಾಮಿ ರಾಜ್ಯ ಹೆದ್ದಾರಿ ಸುದಾರಣೆ ಕಾಮಗಾರಿಯ ಭೂಮಿ ಪೂಜೆಯನ್ನು ತಾಲೂಕಿನ ಗೋಜನೂರ ಗ್ರಾ ಮದಲ್ಲಿ ನೇರವರಿಸಿ ಮಾತನಾಡಿದರು.

ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಗುಣಮಟ್ಟದ ವಿಚಾರದಲ್ಲಿ ರಾಜಿ ಇಲ್ಲ ಆದ್ದರಿಂದ ಕಾಮಗಾರಿಯಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲು ಗುತ್ತಿಗೆದಾರರಿಗೆ ಸೂಚಿಸಿದರು.

banner

ಲೋಕೋಪಯೋಗಿ ಇಲಾಖೆ ಯೋಜನೆಯಡಿ 400 ಲಕ್ಷ ರೂ ವೆಚ್ಚದಲ್ಲಿ 1.84 ಕಿ.ಮಿ  ಪಾಲಾ – ಬಾದಾಮಿ ರಸ್ತೆಯು ಸುಧಾರಣೆ ಮಾಡುತ್ತಿರುವುದು ಪ್ರಯಾಣಿಕರಿಗೆ ಅನುಕೂಲಕರ ಆಗುತ್ತದೆ ಎಂದೆರಲ್ಲದೇ,

ಶಿರಹಟ್ಟಿ ಮತ ಕ್ಷೇತ್ರದಲ್ಲಿ ಹಲವಾರು ಗ್ರಾಮೀಣ ಭಾಗದ ರಸ್ತೆಗಳು ಹದೆಗೆಟ್ಟಿದ್ದು ಸರ್ಕಾರ ಅನುದಾನ ನೀಡಬೇಕು, ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ರಸ್ತೆಗಳನ್ನು ಸುಧಾರಣೆ ಮಾಡಲಾಗುವುದು ಎಂದರು.

*ಕೋಟ್:*

ರಸ್ತೆಗಳು ನಿರ್ಮಾಣಗೊಂಡ ಮೇಲೆ, ಕ್ರಷರ್, ಮರಳು, ಕಡಿಗಳನ್ನು ಹೊತ್ತ ಲಾರಿಗಳು ಅಧಿಕ ಭಾರವಾಗಿ ರಸ್ತೆಗಳ ಮೇಲೆ ಓಡಾಡುವದರಿಂದ ರಸ್ತೆಗಳು ಹಾಳಾಗುತ್ತಿವೆ. ಅಧಿಕಾರಿಗಳು ಅವುಗಳನ್ನು ಕಡಿವಾಣ ಹಾಕಬೇಕು, ಅಧಿಕ ಭಾರ ಹೊತ್ತ ಲಾರಿಗಳು ಕಡಿಮೆ ಭಾರದ ಪರವಾನಿಗೆ ತಗೆದುಕೊಂಡು, ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡುತ್ತಿದ್ದಾರೆ. ಅಧಿಕಾರಿಗಳ ಜೊತೆ ಮಾತನಾಡಿ  ಮುಂದಿನ ದಿನದಲ್ಲಿ ಚಕ್ ಪೋಸ್ಟ್ ನಿರ್ಮಾಣ ಮಾಡಲಾಗುತ್ತದೆ.

– *ಡಾ. ಚಂದ್ರು ಲಮಾಣಿ, ಶಾಸಕರು ಶಿರಹಟ್ಟಿ ಮತಕ್ಷೇತ್ರ.*

ಸಂದರ್ಭದಲ್ಲಿ ಚಂದ್ರಣ್ಣ ಮಾಡಳ್ಳಿ, ರಮೇಶ ದನದಮನಿ, ಮಂಜುನಾಥ ಕಣವಿ, ಗ್ರಾಪಂ ಅಧ್ಯಕ್ಷ ಮಂಜುನಾಥ ಚಲವಾದಿ,ಉಪಾಧ್ಯಕ್ಷ ಮಹಾಂತಗೌಡ ಪಾಟೀಲ್, ಮುತ್ತಣ್ಣ ಶೆಟ್ರು ವಡಕಣ್ಣವರ,  ಶಿವನಗೌಡ ಕಂಠಿಗೌಡರ, ನೀಲಪ್ಪ ಗುಡ್ಡಣ್ಣವರ, ಚಂದ್ರೇಗೌಡ ಪಾಟೀಲ, ನಿಂಗನಗೌಡ ಪಾಟೀಲ, ಹನಮಂತಪ್ಪ ಮಾದರ, ಮಹೇಶ ಅಥಣಿ, ಭೀಮಪ್ಪ ನಾಯಕ್, ದ್ಯಾಮಣ್ಣ ಅಡರಕಟ್ಟಿ, ಪಿಡಿಓ ಶಿವಾನಂದ ಮಾಳವಾಡ, ಗಂಗಾಧರ ಮೆಣಸಿನಕಾಯಿ, ಜಾನು ಲಮಾಣಿ ಹನುಮಂತೇಗೌಡ ಪಾಟೀಲ ಇದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb