ಗದಗ:ಇತ್ತೀಚಿಗೆ ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (SAI) ವತಿಯಿಂದ ನಡೆದ ಕರ್ನಾಟಕ ಸ್ಟೇಟ್ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಗದಗ್ ಸ್ಪೋರ್ಟ್ ಶೂಟಿಂಗ್ಸ್ ಶೂಟರಗಳು ಅತ್ಯುತ್ತಮ ಸಾಧನೆಗೈದಿದ್ದಾರೆ.
ಕರ್ನಾಟಕ ಸ್ಟೇಟ್ ರೆಪಲ್ ಅಸಿಸ್ಟ್ಯೇಷನ್ ಸಹಯೋಗದಲ್ಲಿ ನಡೆದ 10 ಮೀಟರ್ ಏರ್ ಪಿಸ್ಟಲ್‌ನ ಮಹಿಳೆಯರ ಯೂಥ ವಿಭಾಗದಲ್ಲಿ ಪಾಲ್ಗುಣಿ ವಾರಕರ್ ಕಂಚಿನ ಪದಕವನ್ನು ಹಾಗೂ ಗ್ರುಪ್ ವಿಭಾಗದಲ್ಲಿ ವರಲಕ್ಷ್ಮಿ ಹೊಂಬಾಳಿ, ಐಮನ್ ಕೊಪ್ಪಳ್, ಪಾಲ್ಗುಣಿ ವಾರಕರ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪದಕ ಗಳಿಸಿದ ಶೂಟರ್‌ಗಳಿಗೆ ಅಧ್ಯಕ್ಷರಾದ ಮುರುಘರಾಜೇಂದ್ರ ಬಡ್ನಿ ಹಾಗೂ ತರಬೇತಿದಾರರಾದ ಬಸವರಾಜ್ ಹೊಂಬಾಳಿ ಗದಗ್ ಸ್ಪೋರ್ಟ್ ಶೂಟಿಂಗ್ ಅಕಾಡೆಮಿಯ ಎಲ್ಲ ಪಾಲಕರು ಅಭಿನಂದಿಸಿದ್ದಾರೆ.