ಮುಂಡರಗಿ: ಗದಗ ಜಿಲ್ಲಾ ರೈತ ಹಸಿರು ಸೇನೆ ಸಂಘ, ಗದಗ ಜಿಲ್ಲಾ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಆಶ್ರಯದಲ್ಲಿ ಬೆಂಗಳೂರಿನ ಫ್ರೀಡಂ ಪಾಕ್೯ನಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ರೈತರು ಬೆಳೆದ ಬೆಳೆಗಳನ್ನು ಸಾಗಾಟ ಮಾಡಲು ಅಗ್ಗದ ದರದ ರೈಲ್ವೆ ಮಾರ್ಗ ಅವಶ್ಯವಾಗಿ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಅವಶ್ಯಕವಾಗಿ ರಾಜ್ಯಾದ್ಯಂತ ಮಂಜೂರಾದ ಈ ಯೋಜನೆಗಳನ್ನು ಮತ್ತು ರಾಷ್ಟ್ರೀಕೃತ ಬ್ಯಾಂಕಿನ ಸಾಲ ಮನ್ನಾ ಹೀಗೆ ಹಲವಾರು ವಿಚಾರಗಳನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿರುವ ಈ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದರು.

ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾಧ, ಬಸವರಾಜ ನವಲಗುಂದ,ಗದಗ ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಂಕರಗೌಡ ಜಯನಗೌಡ, ಶಿವಯ್ಯ ಶಶಿಮಠ, ನಿಂಗಪ್ಪ ಬಂಡಾರಿ, ಹೇಮನಗೌಡ ಪಾಟೀಲ, ಚಂದ್ರಪ್ಪ ಬಳ್ಳಾರಿ, ಡೋಣಿ ಬಾಗೇವಾಡಿ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.