ಧಾರವಾಡ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ದಲಿತರು ಮತ್ತು ಸವರ್ಣೀಯರ ನಡುವೆ ನಡೆದ ಗಲಭೆ ಪ್ರಕರಣ ಸಂಬಂಧ ಶಿಕ್ಷೆಗೆ ಗುರಿಯಾಗಿದ್ದ 99 ಮಂದಿಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಜಾಮೀನು ಮಂಜೂರು ಮಾಡಿದೆ. ಜತೆಗೆ ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ನೀಡಿದ ಜೈಲು ಶಿಕ್ಷೆಯ ಆದೇಶಕ್ಕೆ ಬುಧವಾರ ತಡೆಯಾಜ್ಞೆ ನೀಡಿದೆ.
ಮರಕುಂಬಿ ಗಲಭೆ ಪ್ರಕರಣ ಕುರಿತಂತೆ ಕಳೆದ ಅಕ್ಟೋಬರ್‌ನಲ್ಲಿ ಕೊಪ್ಪಳ ಜಿಲ್ಲಾ ನ್ಯಾಯಾಲಯ 97 ಜನರಿಗೆ ಜೀವಾವಧಿ ಶಿಕ್ಷೆ ನೀಡಿ ಹಾಗೂ 3 ಜನರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ ಹೈಕೋಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ 99 ಜನ (101 ತೀರ್ಪಿಗೆ ಆರೋಪಿತರಲ್ಲಿ ಒಬ್ಬರು ನಿಧನರಾಗಿದ್ದಾರೆ. 1ನೇ ಆರೋಪಿಯಾಗಿದ್ದ ಮಂಜುನಾಥ ಮೇಲ್ಮನವಿ ಸಲ್ಲಿಸಿರಲಿಲ್ಲ) ಹೈಕೋರ್ಟ್‌ನ ಧಾರವಾಡ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಪ್ರಕರಣದ ನ್ಯಾಯಮೂರ್ತಿಗಳಾದ ಶ್ರೀನಿವಾಸ ಹರೀಶ್ ಎಂದು ಕುಮಾರ್ ಮತ್ತು ಟಿ ಜಿ ಶಿವಶಂಕರೇಗೌಡ ಅವರಿದ್ದ ಪೀಠ, 99 ಜನರಿಗೆ ತಲಾ ಒಂದು ಲಕ್ಷ ರೂ. ಮೌಲ್ಯದ ಬಾಂಡ್ ಹಾಗೂ ಶೂರಿಟಿ ನೀಡುವಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳ ಗುರುತು ಪತ್ತೆ ಸರಿಯಾಗಿ ನಡೆದಿಲ್ಲ ಎಂಬಂತಹ ಹಲವು ಲೋಪಗಳನ್ನು ಹೈಕೋರ್ಟ್ ಪರಿಗಣಿಸಿ ಜಿಲ್ಲಾ ಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿದೆ. 1ನೇ ಆರೋಪಿ ಕೂಡ ಜಾಮೀನು ಕೋರಿ ಸದ್ಯದಲ್ಲಿಯೇ ಅರ್ಜಿ ಸಲ್ಲಿಸಲಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಆನಂದ ಕೊಳ್ಳಿ ಹೇಳಿದ್ದಾರೆ.
ಇನ್ನು ಇದು ಜಾಮೀನಿಗೆ ಸೀಮಿತವಾದ ಆದೇಶ. ಪ್ರಕರಣದ ವಿಚಾರಣೆ ಮುಂದುವರಿಯಲಿದೆ ಎಂದು ಅರ್ಜಿದಾರರ ಪರ ಇನ್ನೊಬ್ಬ ವಕೀಲ ಸಂತೋಷ್ ಬಿ. ಮಲಗೌಡರ್ ತಿಳಿಸಿದ್ದಾರೆ.
ಬೇಲ್ ನೀಡಲು ಕಾರಣ
- ಪ್ರಕರಣದ ವಿಚಾರಣೆ ದಶಕದವರೆಗೂ ನಡೆದರೂ ಆರೋಪಿಗಳು ಜಾಮೀನು ಷರತ್ತು ಉಲ್ಲಂಘಿಸಿಲ್ಲ ಎಂಬ ಅಂಶ.
- ಘಟನೆ ನಡೆದ ತಕ್ಷಣ ಪೊಲೀಸರು ಏಕೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಿಲ್ಲ, ಗಲಾಟೆ ಸಂಜೆ 4.30ಕ್ಕೆ ನಡೆದಿದ್ದರೆ ಎಫ್‌ಐಆರ್ ದಾಖಲಿಸಿದ್ದು ಮಧ್ಯರಾತ್ರಿ 12:15ಕ್ಕೆ ಏಕೆ ಎಂಬ ಪ್ರಶ್ನೆ.
- ಎಸ್‌ಸಿ-ಎಸ್‌ಟಿ ಸಮುದಾಯದವರನ್ನು ಜಾತಿ ಹೆಸರಿನಲ್ಲಿ ನಿರ್ಬಂಧಿಸಿದ 96 ಆರೋಪಿಗಳು, ಅವರ ಮನೆಗಳಿಗೆ ಬೆಂಕಿ ಹಚ್ಚಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ. ಆದರೆ 5 ಕಲ್ಲು, 3 ಇಟ್ಟಿಗೆ, 4 ಬಡಿಗೆ ಮಾತ್ರ ಜಪ್ತಿ ಮಾಡಲಾಗಿದೆ. ಇಷ್ಟು ಜನ ಸೇರಿ ಕೇವಲ 4 ಮನೆ ಸುಟ್ಟು ಹಾಕಿದ್ದಾರೆಂಬುದರ ಬಗ್ಗೆ ಅನುಮಾನ.
- ಶಿಕ್ಷೆಗೆ ಒಳಗಾದವರಲ್ಲಿ ಪರಿಶಿಷ್ಟ ಪಂಗಡದವರು ಇದ್ದರೂ ಅವರನ್ನು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆಯಡಿ ಪರಿಗಣಿಸಿದ್ದು,
- ಘಟನೆ ನಂತರ ಆರೋಪಿಗಳು ಮತ್ತು ಸಂತ್ರಸ್ತರು ಗ್ರಾಮದಲ್ಲಿ ಶಾಂತಿ ಹಾಗೂ ಸೌಹಾರ್ದದಿಂದ ಇದ್ದಾರೆ. ನಂತರ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.