ಲಕ್ಷ್ಮೇಶ್ವರ: ಖಾಸಗಿ ಶಾಲೆಗಳಲ್ಲಿ ವಾಹನಗಳ ನಿರ್ವಹಣೆ ಮತ್ತು ಮಕ್ಕಳ ಬಗ್ಗೆ ಕಾಳಜಿಗೆ ಕ್ರಮ ವಹಿಸಲು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಘಟಕದ ವತಿಯಿಂದ ತಹಶಿಲ್ದಾರ ಧನಂಜಯ ಅವರಿಗೆ ಮನವಿ ಸಲ್ಲಿಸಲಾಯಿತು.
ವರದಿ : ಪರಮೇಶ ಎಸ್ ಲಮಾಣಿ.
ಮನವಿ ನೀಡಿ ಮಾತನಾಡಿದ ತಾಲೂಕ ಅಧ್ಯಕ್ಷ ಲೋಕೇಶ ಸುತಾರ ಡಿ.೧೭ ರಂದು ದೊಡ್ಡುರ ಗ್ರಾಮದ ಹೊರವಲಯದಲ್ಲಿ ವಾಹನದಿಂದ ಬಾಲಕ ಬಿದ್ದು ಸಾವನಪ್ಪಿರುವ ದುರ್ಘಟನೆ ಎಲ್ಲರ ಹೃದಯ ಒಡೆದಂತಾಗಿದೆ ಎಲ್ಲರ ಮನಸ್ಸಿಗೆ ದುಃಖವೆನಿಸಿತು. ಇದು ಖಾಸಗಿ ಶಾಲೆಗಳ ಕರ್ತವ್ಯ ನಿರ್ಲಕ್ಷತೆಯಿಂದ ಆದ ಈ ಒಂದು ಘಟನೆ ಎಂದು ಕಂಡು ಬಂದಿರುತ್ತದೆ ವಾಹನಗಳು ಮಕ್ಕಳನ್ನು ಬಸ್ಸಿನಲ್ಲಿ ಸೀಟು ಇರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ತಮ್ಮ ವಾಹನಗಳಲ್ಲಿ ತುಂಬಿಕೊಂಡು ಹೊಗುವುದನ್ನು ನಾವು ಹಲವಾರು ವಾಹನಗಳನ್ನು ನೋಡಿದ್ದೆವೆ.
ಎಲ್ಲಾ ಖಾಸಗಿ ಶಾಲೆಗಳ ಮುಖ್ಯಸ್ಥರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ತುಂಬಿಸುವುದು ತಡೆಗಟ್ಟಬೇಕು ಹಾಗೂ ಶಾಲೆಯ ಆಡಳಿತ ಮಂಡಳಿಯವರು ಶಿಸ್ತುಬದ್ಧ ಕ್ರಮಗಳನ್ನು ಪಾಲಿಸುವಂತೆ ತಾಲೂಕಾ ಆಡಳಿತ ಅಧಿಕಾರಿಗಳು ಆದೇಶಿಸಬೆಕೆಂದು ಎಂದು ಆಗ್ರಹಿಸಿದರಲ್ಲದೇ,
ಮೃತ ವಿದ್ಯಾರ್ಥಿ ಕುಟಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ಅವರು ಈ ತರದ ಘಟನೆಗಳು ಸರಕಾರಿ ಬಸ್ಸ್ ಗಳಲ್ಲಿ ಶಾಲಾ ಮತ್ತು ಕಾಲೇಜು ಸಮಯದಲ್ಲಿ ಕೂಡ ವಿದ್ಯಾರ್ಥಿಗಳಿಗೆ ಕೂಡಲು ಸ್ಥಳ ಇಲ್ಲದೆ ಪ್ರಯಾಣಿಸುತ್ತಿದ್ದಾರೆ. ಈ ರೀತಿ ದುರ್ಘಟನೆ ನಡೆದರೆ ನೇರವಾಗಿ ಅಧಿಕಾರಿಗಳ ಹೊಣೆಗಾರರಾಗುತ್ತಾರೆ. ಅಧಿಕಾರಿಗಳು ಶಾಲಾ ಮತ್ತು ಕಾಲೇಜು ಸಮಯದಲ್ಲಿ ಸರಳ ಸಮರ್ಪಕ ಸಂಚಾರಕ್ಕೆ ಅನೂಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಸಂದರ್ಭದಲ್ಲಿ ಪ್ರವೀಣ ಗಾಣಗೇರ , ಬಸವರಾಜ ಮಲ್ಲೂರ, ಗಂಗಾಧರ ಕೊಂಚಿಗೇರಿಮಠ, ಅರುಣ ಮೆಕ್ಕಿ, ಪ್ರಕಾಶ ಕೊಂಚಿಗೇರಿಮಠ, ಗಂಗಾಧರ ಕರ್ಜೇಕಣ್ಣವರ , ಗಣೇಶ ಮತ್ತಿತರಿದ್ದರು.
