ಲಕ್ಷ್ಮೇಶ್ವರ: ಮೊದಲು ಎಲ್ಲರ ತಲೆಯಲ್ಲಿ ಕರಾಟೆ ಅಪಾಯಕಾರಿ ಕ್ರೀಡೆಯೆಂಬ ಭಾವನೆ ಇತ್ತು. ಆದರೆ ಈಗ ಅದು ಆತ್ಮರಕ್ಷಣೆಯ ಕ್ರೀಡೆ ಎಂಬ ಭಾವನೆ ಸಮಾಜದಲ್ಲಿ ಮೂಡುತ್ತಿದೆ. ಈ ಕ್ರೀಡೆಯನ್ನು ಹೆಣ್ಣು ಗಂಡು ಎಂಬ ಭೇದವಿಲ್ಲದೆ ಎಲ್ಲರೂ ಕಲಿಯಬೇಕು ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಅವರು ಲಕ್ಷ್ಮೇಶ್ವರ ಪಟ್ಟಣದ ಬಿ. ಸಿ. ಎನ್. ಪಾಲಿಟೆಕ್ನಿಕ್ ಕಾಲೇಜ್ ಸಭಾಭವನದಲ್ಲಿ ಜರುಗಿದ ಆಲ್ ಇಂಡಿಯಾ ಶೈನ್ ಓಪನ್ ಕರಾಟೆ ಚಾಂಪಿಯನ ಶಿಪ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.
ಈ ವೇಳೆಗೆ ಶ್ರೀ ಎಂ ಆರ್ ಮುಳುಗುಂದ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ರಾಜ್ಯ ಸಂಸ್ಥಾಪಕ ಅಧ್ಯಕ್ಷರು ಲಕ್ಷ್ಮೆಶ್ವರ, ಶ್ರೀ ಲೋಹಿತ ಬಿ ನೆಲವಿಗಿ ಕಾರ್ಯದರ್ಶಿ ಬಿಸಿಎಂ ವಿದ್ಯಾಸಂಸ್ಥೆ ಲಕ್ಷ್ಮೇಶ್ವರ, ಶ್ರೀ ಅರುಣ ಮಾಚಯ್ಯ ಪ್ರೆಸಿಡೆಂಟ್ ಎಕೆಎಸ್ ಕೆ ಮೈಸೂರು ಶ್ರೀ ಭಾರ್ಗವ್ ರೆಡ್ಡಿ ಜೆ ಜನರಲ್ ಸೆಕ್ರೆಟರಿ, ಶ್ರೀ ರಾಜಶೇಖರ ಈಶಪ್ಪ ಕಾತರಕಿ, ಶ್ರೀ ಸೈಯದ್ ಉಮರ್ ಪೀರಜಾದೆ ಹಾಗೂ ಕ್ರೀಡಾ ಅಭಿಮಾನಿಗಳು ಸ್ಪರ್ದಾಳುಗಳು ಉಪಸ್ಥಿತರಿದ್ದರು.