ಗದಗ: ಕರ್ನಾಟಕ ರಕ್ಷಣಾ ವೇದಿಕೆ (ಹೆಚ್.ಶಿವರಾಮೇಗೌಡ್ರ ಬಣ) ಬಣದಿಂದ ಫೆಬ್ರುವರಿ ೧ ರ ೨೦೨೫ ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕರವೇ ರಜತ ಮಹೋತ್ಸದ ಸ್ಮರಣಾರ್ಥ ಕನ್ಮಡಮ್ಮನ ಜನಪದ ಸಮಾವೇಶ ಹಿನ್ನಲೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಜಿಲ್ಲಾಧ್ಯಕ್ಷ ಮಂಜುನಾಥ ಪಿ. ಪರ್ವತಗೌಡ್ರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಈ ವೇಳೆ ಮಾತನಾಡಿದ ಅವರು, ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪನೆಗೊಂಡು 25 ವರ್ಷ ಪೂರೈಸಿದ ಹಿನ್ನಲೆಯಲ್ಲಿ “ನೈಜ ಸಂಘಟನೆಯ 25ನೇ ವರ್ಷದ ನೈಜ ಸಂಭ್ರಮ “
ಶೀರ್ಷಿಕೆಯಡಿಯಲ್ಲಿ ರಜತ ಮಹೋತ್ಸದ ಸ್ಮರಣಾರ್ಥ “ಕನ್ನಡಮ್ಮನ ಜನಪದ ಸಮಾವೇಶ” ಕಾರ್ಯಕ್ರಮ ನಡೆಯುತ್ತಿದ್ದು, ಎಲ್ಲ ಕನ್ನಡಾಭಿಮಾನಿಗಳು ಫೆಬ್ರುವರಿ 1ರಂದು ಬೆಂಗಳೂರಿನ ಪುಟ್ಟಣ್ಣಶೆಟ್ಟಿ (ಟೌನ್ ಹಾಲ್) ನಲ್ಲಿ ನಡೆಯುವ ಸಮಾವೇಶಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕು ಅಂತ ಕರೆ ನೀಡಿದರು.

ಇದೇ ವೇಳೆ ಸಮಾವೇಶದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು. ಕರವೇ ಉತ್ತರ ಕರ್ನಾಟಕ ಸಂಚಾಲಕರಾದ ಬಸವರಾಜ ದೇಸಾಯಿ ಮಾತನಾಡಿ, ಎಚ್.ಶಿವರಾಮೇಗೌಡ್ರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಈ 25 ರ ರಜತ ಮಹೋತ್ಸದ ಸಂಭ್ರಮ ರಾಜ್ಯದ ಜನತೆಯ ಪ್ರತಿ ಮನೆ-ಮನೆಗಳ ಮನ-ಮನಗಳ ವಿಜಯೋತ್ಸವದ ಸಂಭ್ರಮಾಚರಣೆಯಾಗಿದೆ.
ರಾಜ್ಯಾಧ್ಯಂತ ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸುತ್ತಿದ್ದು, ಗದಗ ಜಿಲ್ಲೆಯಿಂದಲೂ ನೂರಕ್ಕೂ ಹೆಚ್ಚು ಜನರು ತೆರಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಸವರಾಜ ಮುಳ್ಳಾಳ, ಉತ್ತರ ಕರ್ನಾಟಕ ರೈತ ಘಟಕದ ಅಧ್ಯಕ್ಷ ಬಸಯ್ಯ ಗುಡ್ಡಿಮಠ, ಎಸಿ-ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಪ್ರಕಾಶ ನಿಡಗುಂದಿ, ಜಿಲ್ಲಾ ಸಂಚಾಲಕ ಸುರೇಶ ಮುಳಗುಂದ, ಜಿಲ್ಲಾ ಸಂಘಟನಾ ಸಂಚಾಲಕ ವಾದಿರಾಜ ಕೌಜಲಗಿ, ಸಂತೋಷ ಕುಂಭಾರ, ಉದಯ ದಳವಾಯಿ, ಸಂಜೀವಗೌಡ ಬೆನಹಾಳ, ವಿರೇಶ, ಸಚಿನ, ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.