ಲಕ್ಷ್ಮೇಶ್ವರ:ತಾಲೂಕಿನ ಹಿರೇಮಲ್ಲಾಪುರ ಗ್ರಾಮದ ಬಡ ನಿವಾಸಿಗಳಿಗೆ ನಿವೇಶನ ಹಕ್ಕುಪತ್ರ ನೀಡುವಂತೆ ಜಯ ಕರ್ನಾಟಕ ಸಂಘಟನೆಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಪುಟಗಾಂವ ಬಡ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರೇಮಲ್ಲಾಪುರ ಗ್ರಾಮದಲ್ಲಿ ನೂರಾರು ಕುಟುಂಬಗಳು ವಾಸ ಮಾಡಲು ಮನೆ ಇಲ್ಲದೆ ಗುಡಿಸಲಲ್ಲಿ ವಾಸ ಮಾಡುತ್ತಿರುವುದು ತುಂಬಾ ನೋವಿನ ಸಂಗತಿಯಾಗಿದೆ.ಈಗಾಗಲೇ ಹಿರೇಮಲ್ಲಾಪುರ ಗ್ರಾಮದ ಸರ್ವೆ ನಂ 34/1 ಮತ್ತು 34/2 ಡಿ.ಪಿ.ಪಿ.ಸಿ. ಜಾಗೆಯಲ್ಲಿ ಗುಡಿಸಲುಗಳನ್ನು ಹಾಕಿಕೊಂಡಿದ್ದು ವಾಸ ಮಾಡುತ್ತಿದ್ದಾರೆ.

ಆದರೆ ಇಲ್ಲಿಯವರೆಗೂ ಯಾವುದೇ ನಿವೇಶನ ಹಕ್ಕು ಪತ್ರ ನೀಡಿರುವುದಿಲ್ಲ , ಸಂಬಂಧಿಸಿದ ತಹಶೀಲ್ದಾರರು ಮತ್ತು ಪು ಬಡ್ನಿ ಗ್ರಾಮ ಪಂಚಾಯತಿಯ ಅಧಿಕಾರಿಗಳು ಕೂಡಲೇ ಬಡ ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ನೀಡಿ ವಸತಿ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿ ಕೊಡಲು ಮುಂದಾಗಬೇಕು ಇಲ್ಲದಿದ್ದರೆ ನಮ್ಮ ಜಯ ಕರ್ನಾಟಕ ಸಂಘಟನೆಯಿಂದ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಮಯದಲ್ಲಿ ಸಂಘಟನೆಯ ತಾಲೂಕುಗಳ ಪ್ರಧಾನ ಕಾರ್ಯದರ್ಶಿ ಹಾಲಪ್ಪ ಭಂಡಾರಿ,ನಿಂಗಯ್ಯ ಹಿರೇಮಠ, ಮೈನುದ್ದೀನ್, ನಜೀರ್ ಬಾಗಲಕೋಟೆ ಸೇರಿದಂತೆ ಗ್ರಾಮ ಘಟಕದ ಎಲ್ಲ ಪದಾಧಿಕಾರಿಗಳು ಮತ್ತು ಹಿರೇಮಲ್ಲಾಪುರ ಗ್ರಾಮದ ಬಡ ನಿವಾಸಿಗಳು ಇದ್ದರು.