
ಕಾರವಾರ: ಚಲಿಸುತ್ತಿರುವಾಗಲೇ ಜಾವಾ ಸ್ಪೋರ್ಟ್ಸ್ ಬೈಕ್ ಹೊತ್ತಿ ಉರಿದು, ಸವಾರ ಪ್ರಾಣಾಪಾಯದಿಂದ ಪಾರಾದ ಘಟನೆ ಕಾರವಾರ ತಾಲೂಕಿನ ಅಮದಳ್ಳಿ ಬಳಿ ನಡೆದಿದೆ.
ನಾಲ್ವರು ಸವಾರರು ನಾಲ್ಕು ಜಾವಾ ಸ್ಪೋರ್ಟ್ಸ್ ಬೈಕ್ ನಲ್ಲಿ ಪ್ರವಾಸಿ ತಾಣಗಳ ವೀಕ್ಷಣೆಗೆ ಬಂದಿದ್ದರು. ಮುರ್ಡೇಶ್ವರದಿಂದ ಗೋವಾಕ್ಕೆ ಹೊರಟಿದ್ದರು. ಈ ವೇಳೆ ಅಮದಳ್ಳಿ ಬಳಿ ಓರ್ವ ಪ್ರವಾಸಿಗನ ಬೈಕ್ ನಲ್ಲಿ ಹೊಗೆ ಕಾಣಿಸಿಕೊಂಡಿದೆ.
ಬೈಕ್ ಸವಾರ ಉತ್ತರ ಪ್ರದೇಶ ಮೂಲದವನಾಗಿದ್ದು, ಹೊಗೆ ಕಾಣಿಸಿದ ತಕ್ಷಣ ಎಚ್ಚೆತ್ತುಕೊಂಡು, ಬೈಕ್ ಗೆ ಇದ್ದ ಲಗೇಜು ಹೊತ್ತೋಯ್ದು ಪ್ರಾಣ ಉಳಿಸಿಕೊಂಡಿದ್ದಾನೆ. ಅರೆ ಕ್ಷಣದಲ್ಲಿ ಬೈಕ್ ಸಂಪೂರ್ಣ ಹೊತ್ತಿ ಉರಿದು ಸುಟ್ಟು ಕರಕಲಾಗಿದೆ.
ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.