7
ಬೆಂಗಳೂರು: ‘ಕಲ್ಟ್’ ಚಿತ್ರದ ಡೋನ್ ಆಪರೇಟರ್ ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ, ನಟ ಝದ್ ಖಾನ್ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ. ಡ್ರೋನ್ ಇಟ್ಟುಕೊಂಡಿದ್ದ ಸಂತೋಷ್ ಕಲ್ಟ್ ಚಿತ್ರದ ಚಿತ್ರೀಕರಣಕ್ಕೆ ಹೋಗಿದ್ದ ವೇಳೆ ವಿಂಡ್ ಫ್ಯಾನ್‌ಗೆ ಡ್ರೋನ್ ತಗುಲಿ ಹಾನಿಯಾಗಿತ್ತು. ನಿರ್ಮಾಪಕರೂ ಆಗಿರುವ ಝದ್ ನಷ್ಟ ಭರಿಸದೆ ಖಾಲಿ ಹಾಳೆಯಲ್ಲಿ ಆಧಾರ್ ನಂಬರ್ ಬರೆಸಿ ಸಹಿ ಹಾಕಿಸಿಕೊಂಡಿದ್ದು, ಇದರಿಂದ ಮನನೊಂದ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.ಅಲ್ಲದೇ ₹1.5 ಲಕ್ಷ ಮೌಲ್ಯದ ಫೂಟೇಜ್ ರೆಕಾರ್ಡಿಂಗ್ ಆಗಿದ್ದ ಮೆಮೊರಿ ಕಾರ್ಡ್ ಕಿತ್ತುಕೊಂಡಿರುವ ಆರೋಪ ಕೇಳಿ ಬಂದಿದೆ.