ಮುಂಡರಗಿ: ಗದಗ ಜಿಲ್ಲೆ ಮುಂಡರಗಿ ಅನ್ನದಾನೀಶ್ವರ ಸಂಸ್ಥಾನಮಠದ 155 ನೇ ಜಾತ್ರಾ ಮಹೋತ್ಸವ ಇದೇ ಫೆಬ್ರುವರಿ ದಿ. 10-11 ರಂದು ನಡೆಯಲಿದ್ದು ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಇಂದಿನಿಂದ ಆರಂಭಗೊಳ್ಳಲಿವೆ.
ಇಂದಿನಿಂದ ಪ್ರತಿನಿತ್ಯ ಸಂಜೆ 7 ಗಂಟೆಯಿಂದ 8-30 ರವರೆಗೆ ಪ್ರವಚನ ಜರುಗಲಿದ್ದು, ಪ್ರವಚನ ಪ್ರಾರಂಭದ ದಿವ್ಯ ಸಾನಿಧ್ಯವನ್ನ ಶ್ರೀ ಮನಿಪ್ರ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ವಹಿಸಲಿದ್ದಾರೆ. ನೇತೃತ್ವವನ್ನ ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಮನಿಪ್ರ ಚನ್ನವೀರ ಮಹಸ್ವಾಮಿಗಳು ವಹಿಸಲಿದ್ದಾರೆ. ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶಶಿಧರ ಶಾಸ್ತ್ರೀಗಳು. ಡೋಣಿ ಇವರಿಂದ ಪ್ರವಚನ ನೆರವೇರಲಿದ್ದು, ಸೋಮನಾಥ ಗವಾಯಿಗಳಿಂದ ಸಂಗೀತ, ನಾಗಭೂಷಣ ಹಿರೇಮಠ ಅವರಿಂದ ತಬಲಾ ಸೇವೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ.

ದಿ.5 ರಂದು ಸಂಜೆ-5 ಗಂಟೆಗೆ ಸಾವಯವ ಕೃಷಿ ಗೋಷ್ಟಿ ಹಾಗೂ ರೈತರಿಂದ ಸಿರಿಧಾನ್ಯಗಳ ಪ್ರದರ್ಶನ ನರೆವೇರಲಿದೆ.
ದಿ.6 ರಂದು ಬೆಳಿಗ್ಗೆ 8-30 ಗಂಟೆಗೆ ಷಟಸ್ಥಳ ಧ್ವಜಾರೋಹಣ ಹಾಗೂ ಕಳಸಾರೋಹಣ, ಹಾಗೂ ರಕ್ತದಾನ, ಕಣ್ಣು ಮತ್ತು ಆರೋಗ್ಯ ತಪಾಸಣೆ ಶಿಬಿರ ಮತ್ತು ಯೋಗ ತರಬೇತಿ ಸೇರಿದಂತೆ ಯೋಗಾಸನ, ವಿವಿಧ ಆಟಗಳ ಸ್ಪರ್ಧೆ ನಡೆಯಲಿವೆ.
ನಂತರ ಮಧ್ಯಾಹ್ನ 12- ಗಂಟೆಗೆ ಅನ್ನಪೂರ್ಣೇಶ್ವರಿ ಪೂಜೆಯೊಂದಿಗೆ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮಗಳು ಜರುಗಲಿವೆ.
ಸಂಜೆ 7 ಗಂಟೆಗೆ ಅರಣ್ಯ ಹಾಗೂ ಪರಿಸರ ಜಾಗೃತಿ ಗೋಷ್ಟಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ದಿ.8 ರಂದು ಆರೋಗ್ಯ ಹಾಗೂ ಜೀವನಶೈಲಿಯ ಕುರಿತು ಉಪನ್ಯಾಸ ಸೇರಿದಂತೆ ವಿವಿಧ ಮಠಾಧೀಶರಿಂದ ಹಿತೋಪದೇಶ ಪ್ರವಚನ ಜರುಗಲಿವೆ.
ದಿ.9 ರಂದು ಸಂಜೆ 7 ಗಂಟೆಗೆ ಪ್ರವಚನ ಮಂಗಲ ಹಾಗೂ ಮಹಿಳಾ ಗೋಷ್ಟಿ ನಡೆಯಲಿದ್ದು, ಮಹಿಳಾ ಸವಾಲುಗಳ ಕುರಿತು ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮ ಜರುಗಲಿವೆ.
ದಿ.10 ರಂದು ಬೆಳಿಗ್ಗೆ 7 ಗಂಟೆಗೆ ಶ್ರೀಮಠದ ಎಂಟನೇ ಜಗದ್ಗುರುಗಳ ಪುಣ್ಯಸ್ಮರಣೋತ್ಸವ, ಶಿವದೀಕ್ಷೆ, ಅಯ್ಯಾಚಾರ ನಡೆಯಲಿವೆ.
ನಂತರ 8 ಗಂಟೆಗೆ ವೆಂಕಟಗಿರಿಯ ಶ್ರೀ ಹಾಲಸ್ವಾಮಿಗಳು ಹಾಗೂ ಭಕ್ತವೃಂದದವರಿಂದ ದೀರ್ಘದಂಡ ನಮಸ್ಕಾರ ನೆರವೇರಲಿದೆ.
ನಂತರ 11 ಗಂಟೆಗೆ ನಾಡಿನ ಹರಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ಸಾಮೂಹಿಕ ವಿವಾಹಗಳು ಜರುಗಲಿವೆ.
ಸಂಜೆ 5 ಗಂಟೆಗೆ ಶ್ರೀ ಜಗದ್ಗುರು ಅನ್ನದಾನೀಶ್ವರ ಮಹಾರಥೋತ್ಸವ ಹಾಗೂ ನಾಡಿನ ಮಠಾಧೀಶರ ಸಮ್ಮುಖದಲ್ಲಿ ಧರ್ಮಸಭೆ ಜರುಗಲಿದೆ.
ದಿ.11 ರಂದು ಮುಂಜಾನೆ 10 ಗಂಟೆಗೆ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥೆಯ ಸಿಬ್ಬಂದಿಗಳ ಸಮಾವೇಶ, ಶ್ರೀ ಜಗದ್ಗುರು ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರ ಸಮಾರಂಭ ಹಾಗೂ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾಸಮಿತಿಯ ಶತಮಾನ ಸಂಭ್ರಮದ ನೆನಹು ಕಾರ್ಯಕ್ರಮಗಳು ಜರುಗಲಿದೆ.
ಸಂಜೆ 5 ಗಂಟೆಗೆ ಜಂಗಮೋತ್ಸವ ಹಾಗೂ ಭಕ್ತಹಿತ ಚಿಂತನ ಗೋಷ್ಟಿ ಹಾಗೂ ಗ್ರಂಥ ಬಿಡುಗಡೆ ಕಾರ್ಯಕ್ರಮಗಳು ಜರುಗಲಿವೆ.
ದಿ.12 ರಂದು ಹುಣ್ಣಿಮೆಯ ಶಿವಾನುಭವ ಗೋಷ್ಟಿ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.
ಹೀಗೆ ಅನ್ನದಾನೀಶ್ವರ ಸಂಸ್ಥಾನಮಠದ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ವೈಭವಪೂರಿತವಾಗಿ ನಡೆಯಲಿದ್ದು, ನಾಡಿನ ಸರ್ವಧರ್ಮ ಸದ್ಭಕ್ತಾಧಿಗಳೆಲ್ಲರಿಗೂ ಜಾತ್ರಾ ಮಹೋತ್ಸವ ಸಮಿತಿ ತಮ್ಮ ಪ್ರಕಟನೆಯಲ್ಲಿ ಆಮಂತ್ರಿಸಿದೆ.