Home » News » ಕನಕದಾಸರನ್ನು ನೆನೆಯುವುದು ಪ್ರತಿಯೊಬ್ಬ ಕನ್ನಡಿಗನ ಆಧ್ಯ ಕರ್ತವ್ಯ : ಈಶ್ವರ ಮೇಡ್ಲೇರಿ…

ಕನಕದಾಸರನ್ನು ನೆನೆಯುವುದು ಪ್ರತಿಯೊಬ್ಬ ಕನ್ನಡಿಗನ ಆಧ್ಯ ಕರ್ತವ್ಯ : ಈಶ್ವರ ಮೇಡ್ಲೇರಿ…

by CityXPress
0 comments

ಗದಗ(ಲಕ್ಷ್ಮೇಶ್ವರ ): ಕನ್ನಡದ ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ದಾಸಶ್ರೇಷ್ಠರೆಂದರೆ ಕನಕದಾಸರು. ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಸಮ ಸಮಾಜ ನಿರ್ಮಾಣದ ಹರಿಕಾರರು, ಕರ್ನಾಟಕ ಸಂಗೀತಕ್ಕೆ ಬಹುದೊಡ್ಡ ಕಾಣಿಕೆಯನ್ನಿತ್ತವರು, ಕನಕದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆ ಎಂದು ಬಣ್ಣಿಸಲಾಗಿದೆ ಎಂದು ತಾಲೂಕಾ ಪದವಿಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಮಂಜುನಾಥ ಕೊಕ್ಕರಗುಂದಿ ಅಭಿಪ್ರಾಯಪಟ್ಟರು.

ಅವರು ಲಕ್ಷ್ಮೇಶ್ವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಮಾಸದ ಮಾತು ಕಾರ್ಯಕ್ರಮ ಸರಣಿಯಲ್ಲಿ ದಾಸ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು.

ವರದಿ: ಪರಮೇಶ ಎಸ್ ಲಮಾಣಿ

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿಕ್ಷಕ ಮುತ್ತು ಸಾವಿರಕುರಿ ಮಾತನಾಡಿ ಕನಕದಾಸರು ಕೇವಲ ದಾಸರಲ್ಲ, ಕವಿ,ಸಂತ, ಸಮರ್ಥಆಡಳಿತಗಾರ, ಸಾಹಿತಿ,ದಾರ್ಶನಿಕರಾಗಿದ್ದಾರೆ. ಶ್ರೇಷ್ಠತೆಯ ಸಂಕೇತವಾಗಿದ್ದಾರೆ. 500 ವರ್ಷಗಳ ಹಿಂದೆಯೇ ಅವರು ತೋರಿದ ದಾರಿಯಲ್ಲಿ ನಾವು ಸಾಗಬೇಕು” ಎಂದು ಕರೆ ನೀಡಿದರು.

banner

ಪ್ರಾಸ್ಥಾವಿಕವಾಗಿ ಮಾತನಾಡಿದ ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ ಕನ್ನಡ ಸಾಹಿತ್ಯಕ್ಕೆ ಕೀರ್ತನೆಗಳು, ದಾಸರ ಪದಗಳು, ಉಗಾಭೋಗಗಳು, ದಂಡಕಗಳು, ಮುಂಡಿಗೆಗಳನ್ನು ನೀಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕನಕದಾಸರನ್ನು ನೆನೆಯುವುದು ಪ್ರತಿಯೊಬ್ಬ ಕನ್ನಡಿಗನ ಆಧ್ಯ ಕರ್ತವ್ಯ” ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಿಕ್ಷಕ ಸಾಹಿತಿ ಬಸವರಾಜ ಯರಗುಪ್ಪಿ ಕನಕದಾಸರು ಯಾವುದೇ ಒಂದು ಜಾತಿ ಮತಕ್ಕೆ ಸೀಮಿತವಾಗದೆ ಎಲ್ಲರೂ ಅಪ್ಪಿ ಒಪ್ಪಿಕೊಳ್ಳುವ ದಾಸಶ್ರೇಷ್ಠರಾಗಿದ್ದಾರೆ ಎಂದರು.

ಕೆಂಚಮ್ಮ ಮತ್ತು ಸಾವಿರಕುರಿ ಕನಕದಾಸರ ಕೀರ್ತನೆಯನ್ನು ಹಾಡಿ ಅದನ್ನು ಅರ್ಥೈಸಿ ವಿವರಿಸಿದರು. ತಾಲೂಕ ಪಂಚಾಯತನ ಲೆಕ್ಕಸಹಾಯಕ ಸಾಹಿತಿ ಶ್ರೀಕಾಂತ ಬಾಲೆಹೊಸೂರು ಕನಕದಾಸರ ಕುರಿತಾದ ಸ್ವರಚಿತ ಕವನ ವಾಚನ ಮಾಡಿ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ವಿಶ್ರಾಂತ ಶಿಕ್ಷಕ ಎಂ.ವಿ.ಹೂಗಾರ, ಸಿ.ಆರ್.ಪಿ ಚಂದ್ರಶೇಖರ ವಡಕಣ್ಣವರ ಕನಕದಾಸರ ಕೀರ್ತನೆಗಳನ್ನು ಹಾಡಿ ರಂಜಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಕೆಇಬಿ ನಿವೃತ್ತ ನೌಕರ ಎನ್.ವಿ.ಹೇಮಗಿರಿಮಠ, ಶಿಕ್ಷಕ ಪಿ.ಎಚ್.ಕೊಂಡಾಬಿಂಗಿ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಲಕ್ಷ್ಮೇಶ್ವರ ತಾಲೂಕ ಘಟಕದ ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ಕಾರ್ಯಕ್ರಮ ನಿರೂಪಿಸಿದರು. ಸಿ.ಆರ್.ಪಿ ಉಮೇಶ ನೇಕಾರ ವಂದಿಸಿದರು. ಶಂಕರ ಶಿಳ್ಳಿನ, ಎಚ್.ಡಿ.ನಿಂಗರೆಡ್ಡಿ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಸ್.ಎಫ್.ಆದಿ, ಬರಹಗಾರರ ಬಳಗದ ಅಧ್ಯಕ್ಷ ಜೆ.ಎಸ್.ರಾಮಶೆಟ್ಟರ,ಶಿಕ್ಷಕರಾದ ಅಶೋಕ ಸರವಿ, ರವೀಂದ್ರ ಚೌಹಾಣ, ಕೃಷ್ಣ ಗಾರಗಿ,ಆರ್.ಎಸ್.ಪಾಟೀಲ,ಪ್ರಭು ಹಾಲಗುಂಡಿ, ಪುಷ್ಪ ಹೇಮಗಿರಿಮಠ,ಸುಮ ಗಾರಗಿ, ಶಿವಮ್ಮ ಗೋಣೆಪ್ಪನವರ, ಶಕುಂತಲಾ ಹೋರಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb