ರಾಜ್ಯದಲ್ಲಿ ೫೪ ಲಕ್ಷ ಹೆಕ್ಟೇರ್ ಮೆಕ್ಕೆಜೋಳ ಇದ್ದು ಕೇವಲ ೧೦ ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡುತ್ತಿರುವು ಸಮಂಜಸವಲ್ಲ : ಬೊಮ್ಮಾಯಿ
ಲಕ್ಷ್ಮೇಶ್ವರ (ಗದಗ): ರೈತರು ಸಂಘಟಿತರಾಗಿ ಒಗ್ಗಟ್ಟಿನಿಂದ ಹೋರಾಡಿದ ಫಲವಾಗಿ ಎಚ್ಚತ್ತ ರಾಜ್ಯ ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಲು ನಿರ್ಧಾರ ಕೈಗೊಂಡಿರುವುದು ರೈತರ ಹೋರಾಟದ ಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಸದಸ್ಯರಾದ ಬಸವರಾಜ ಬೊಮ್ಮಾಯಿ ಹೇಳಿದರು.
ವರದಿ : ಪರಮೇಶ ಎಸ್ ಲಮಾಣಿ
ಅವರು ಪಟ್ಟಣದಲ್ಲಿ ಕಳೆದ ಎಂಟು ದಿನಗಳಿಂದ ಸಮಗ್ರ ರೈತ ಹೋರಾಟ ವೇದಿಕೆ ಹಾಗೂ ವಿವಿಧ ಸಂಘಟನೆಗಳು ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ನಡೆಸಿರುವ ಧರಣಿ ಸತ್ಯಾಗ್ರಹ ಶಿಬಿರಕ್ಕೆ ಭೇಟಿ ನೀಡಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಆವರ್ತ ನಿಧಿಯಲ್ಲಿ ಕನಿಷ್ಠ ೨೦೦ ರಿಂದ ೩೦೦ ಕೋಟಿ ರೂ, ತೆಗೆದು ಕೇಂದ್ರ ಸರ್ಕಾರದ ಬೆಂಬಲ ಬೆಲೆಯೊಂದಿಗೆ ಕನಿಷ್ಠ ೫೦೦ ರೂ ಹೆಚ್ಚುವರಿಯಾಗಿ ನೀಡಿದರೆ ರೈತರ ಸಂಕಷ್ಟಕ್ಕೆ ನೇರವಾದಂತಾಗುತ್ತದೆ ಎಂದು ಹೇಳಿದರು.
ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ಧರಾಮಯ್ಯರವರು ಬೆಳಗಾವಿ ಅಧಿವೇಶನದಲ್ಲಿ ಮೇಜು ಗುದ್ದಿ ಮಾತನಾಡಿದ್ದರು. ಆಗ ನಾನು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡದೇ, ಎಲ್ಲಾ ರೈತರಿಗು ಪರಿಹಾರ ನೀಡಿದ್ದೆ. ಇಗ ನೀವೇನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರವರು ರಾಜ್ಯದಲ್ಲಿ ೫೪ ಲಕ್ಷ ಹೆಕ್ಟೇರ್ ಮೆಕ್ಕೆಜೋಳ ಇದ್ದು ಕೇವಲ ೧೦ ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡುತ್ತಿರುವುದು ಸಮಂಜಸವಲ್ಲ ಎಂದರು.
ರಾಜ್ಯದಲ್ಲಿ ಎರಡು ಮೂರು ವರ್ಷಗಳಲ್ಲಿ ಮೂವತ್ತಕ್ಕೂ ಹೆಚ್ಚು ಎಥೆನಾಯಿಲ್ ತಯಾರಿಸುವ ಕಾರ್ಖಾನೆಗಳಿದ್ದು ಅವುಗಳ ಮಾಲಿಕರು ನೇರವಾಗಿ ರೈತರಿಂದ ಖರೀದಿ ಮಾಡದೇ, ದಲ್ಲಾಲಿಗಳ ಮತ್ತು ವ್ಯಾಪಾರಸ್ಥರಿಂದ ಖರೀದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದಲ್ಲದೇ, ನಿಮ್ಮ ಸರ್ಕಾರ ಕಂಪನಿಗಳ ಮಾಲಿಕರ ಪರವಾಗಿದೆಯೋ ಎಂಬುದನ್ನು ಸ್ಪಷ್ಟ ಪಡಿಸಬೇಕು ಎಂದ ಆಗ್ರಹಿಸಿದಲ್ಲದೇ,
ರೈತರು ಯಾವುದೇ ಪಕ್ಷಕ್ಕೂ ಸೇರಿದವರಲ್ಲ ರಾಜಕೀಯ ಪಕ್ಷಗಳೆ ಅವರಿಗೆ ಸೇರಿದಾವೆ ಅಂದರು. ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವರೆಗೂ, ಹಿಂದೆ ಸರಿಯುವದಿಲ್ಲ ಎಂಬ ಹೋರಾಟಗಾರರ ನೀತಿಗೆ ಸಂಸದ ಬಸವರಾಜ ಬೊಮ್ಮಾಯಿ ಬೆಂಬಲ ಸೂಚಿಸಿ ಖರೀದಿ ಯಾರು ಮಾಡುತ್ತಾರೆ ಎನ್ನುವುದೇ ಇನ್ನು ನಿಗೂಢವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರವಿಕಾಂತ ಅಂಗಡಿ, ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಎಂ.ಎಸ್.ದೊಡ್ಡಗೌಡರ, ಶರಣು ಗೋಡಿ, ಪರಮೇಶ ನಾಯಕ, ನೀಲಪ್ಪ ಸರಸೂರಿ, ನಿಂಬಣ್ಣ ಮಡಿವಾಳರ, ಪ್ರಕಾಶ ಕೊಂಚಿಗೇರಿಮಠ, ಸುರೇಶ ಹಟ್ಟಿ, ಪೂರ್ಣಾಜಿ ಕರಾಟಿ, ಬಸಣ್ಣ ಬೆಂಡಿಗೇರಿ, ರಾಮಣ್ಣ ಗೌರಿ, ದಾದಾಪೀರ ಮಚ್ಚಾಲೆ, ಹೊನ್ನಪ್ಪ ವಡ್ಡರ್, ಮತ್ತಿತರಿದ್ದರು.
