ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು,ಅಂದಾಗ ಎಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ವಿವಾದದ ಹೇಳಿಕೆ ನೀಡಿದ ಬೆನ್ನಲ್ಲೇ, ಉಪಮುಖ್ಯಮತ್ರಿ ಡಿ.ಕೆ.ಶಿವಕುಮಾರ ಖಾವಿಧಾರಿಗಳಿಗೆ ಎಚ್ಚರಿಕೆ ಮಾತನ್ನ ಹೇಳಿದ್ದಾರೆ.
ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, ಈ ವಿಚಾರವಾಗಿ ಉತ್ತರಿಸಿದ ಡಿಕೆಶಿ, ಸ್ವಾಮಿಜಿಗಳು ರಾಜಕಾರಣದಿಂದ ದೂರ ಇದ್ರೆ ಒಳ್ಳೆಯದು. ಹುಟ್ಟಿದಮೇಲೆ ಎಲ್ಲರಿಗೂ ಸಂವಿಧಾನ ಬದ್ಧ ಹಕ್ಕನ್ನು ನೀಡಿದೆ. ಯಾವುದೇ ಸ್ವಾಮಿಜಿಗಳಿರಲಿ ನಾನು ಮನವಿ ಮಾಡಿಕೊಳ್ತೇನೆ. ಇಂಥಹ ವಿವಾದಾತ್ಮಕ ಹೇಳಿಕೆ ನೀಡಿ ದೇಶದಲ್ಲಿ ಅಶಾಂತಿ ಮೂಡಿಸಲಿಕ್ಕೆ ಯಾರೂ ಪ್ರಯತ್ನಿಸಬಾರದು ಎಂದು ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ವಕ್ಫ್ ಬೋರ್ಡ್ ನೋಟಿಸ್ ವಿರುದ್ಧ ನಡೆದ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ, ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು. ಪಾಕಿಸ್ತಾನದಲ್ಲಿ ಇತರೆ ಧರ್ಮೀಯರಿಗೆ ಅಲ್ಲಿ ಮತ ಹಾಕುವ ಅಧಿಕಾರವಿಲ್ಲ. ಅದೇ ರೀತಿ ಭಾರತದಲ್ಲೂ ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹೇಳಿಕೆ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆ,ಬಾಯಿತಪ್ಪಿನಿಂದ ಹೇಳಿದ್ದು ಎಂದು ಸ್ವಾಮಿಜಿ ಮತ್ತೆ ವಿಷಾದ ವ್ಯಕ್ತಪಡಿಸಿದ್ದರು.
ಇದೀಗ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಕೂಡ, “ರಾಜಕಾರಣದಿಂದ ಸ್ವಾಮಿಜಿಗಳು ದೂರ ಇದ್ರೆ ಒಳ್ಳೆಯದು” ಅಂತಾ ಸ್ವಾಮಿಜಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.