Headlines

ಬೇಲಿಯೇ ಎದ್ದು ಹೊಲ ಮೇಯಿಸಿದಂತಾಗಿದೆ: ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರದ ಬಯಲು: ಮಹೇಶ ಕಲಘಟಗಿ ಆರೋಪ..!

ಲಕ್ಷ್ಮೇಶ್ವರ : ಪಟ್ಟಣದ ಪುರಸಭೆಯಲ್ಲಿ ನಿವೇಶನ ಖರೀದಿ, ನಿವೇಶನ ಹಂಚಿಕೆ ವಿಚಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೇ ನಡೆದು ಹೋಗಿದೆ. ಆದರ ಮುಗ್ಧ ಜನತೆಗೆ ಇದ್ಯಾವುದೇ ಪರಿವೇ ಇಲ್ಲದಂತಾಗಿದೆ. ಪುರಸಭೆಯಲ್ಲಿ ಹೊಂದಾಣಿಕೆ ರಾಜಕೀಯ ಮಾಡಿ ಎಲ್ಲರೂ ಸೇರಿ ಪುರಸಭೆಯ ಖಜಾನೆಯನ್ನು ಕೊಳ್ಳೆ ಹೊಡೆದಿದ್ದಾರೆ. ಇದನ್ನು ಪ್ರಶ್ನಿಸಬೇಕಾದ ವಿರೋಧ ಪಕ್ಷವೇ ಇಲ್ಲದಿರುವಾಗ ಇನ್ನು ಇವರನ್ನು ಕೇಳುವವರಿಲ್ಲದಂತಾಗಿದೆ. ಬೇಲಿಯೇ ಎದ್ದು ಹೊಲ ಮೇಯಿದಂತಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಕುಮಾರ ಶೆಟ್ಟಿ ಬಣದ ಲಕ್ಷ್ಮೇಶ್ವರ ತಾಲೂಕ ಅಧ್ಯಕ್ಷ ಮಹೇಶ ಕಲಘಟಗಿ ಆರೋಪಿಸಿದರು.

ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, 2014ರಲ್ಲಿ ತಮ್ಮ-ತಿಮ್ಮಿ ಗುಡ್ಡದ ಬಳಿ ಸುಮಾರು 25 ಎಕರೆ ಜಮೀನು ಖರೀದಿಸಿ, 1,016 ನಿವೇಶನವನ್ನು ಅದರ ಪೈಕಿ ಸುಮಾರು 706 ಹಂಚಿಕೆ ಮಾಡಿ 310 ನಿವೇಶನಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ.

ತಮ್ಮ-ತಿಮ್ಮಿ ಗುಡ್ಡದಲ್ಲಿ ನೀಡಿರುವ ನಿವೇಶನಗಳಿಗೆ ಹೋಗಲು ಯೋಗ್ಯವಾದ ದಾರಿ ಇಲ್ಲ. ಯಾವುದೇ ಮೂಲಭೂತ ಸೌಕರ್ಯ ಒದಗಿಸಲು ತುಂಬಾ ಕಷ್ಟಕರವಾಗುತ್ತದೆ. ಇನ್ನು ಫಲಾನುಭವಿಗಳಿಗೆ ಯಾವುದೇ ರೀತಿ ಜಾಗದ ಬಗ್ಗೆ ಮಾಹಿತಿನೇ ಇಲ್ಲ. ಆದರೂ ಅವರಿಂದ ಕರ ವಸೂಲಿ ಮಾಡುತ್ತಿದ್ದಾರೆ.

ಶಿಗ್ಲಿ ರಸ್ತೆಯಲ್ಲಿರುವ 32 ಎಕರೆ 27 ಗುಂಟೆ ಜಮೀನಿನಲ್ಲಿ ಸುಮಾರು 1,116 ನಿವೇಶನವನ್ನು ಗುರುತಿಸಿದ್ದಾರೆ. ಈ ಜಾಗ ವಾಸಿಸಲು ಯೋಗ್ಯವೇ ಇಲ್ಲ. ಕೆಲವೊಂದು ಪ್ರಭಾವಿ ಪುರಸಭೆಯ ಸದಸ್ಯರ ಕೈವಾಡದಿಂದ ಇಂತಹ ಕಾನೂನು ಬಾಹಿರ ಪ್ರಕ್ರಿಯೆ ನಡೆದಿದೆ ಎಂದರಲ್ಲದೇ,

ರಿಸನಂ
165/3 ಕ್ಷೇತ್ರ – 2 ಎಕರೆ,
165/2 ಕ್ಷೇತ್ರ – 5 ಎಕರೆ 2 ಗುಂಟೆ,
165 – 5 ಎಕರೆ 2 ಗುಂಟೆ,
167/1 ಕ್ಷೇತ್ರ – 11 ಎಕರೆ 2 ಗುಂಟೆ,
165/1 ಕ್ಷೇತ್ರ – 2 ಎಕರೆ,
167/2 ಕ್ಷೇತ್ರ – 6 ಎಕರೆ 38 ಗುಂಟೆ,

ಈ ಎಲ್ಲಾ ಜಮೀನುಗಳ ಚಕಬಂದಿಗೆ ಪೂರ್ವಕ್ಕೆ ಸರ್ಕಾರಿ ಹಳ್ಳ ಇರುವುದು ಖಚಿತವಾಗಿದೆ. ಒಟ್ಟಾರೆಯಾಗಿ ಸರ್ಕಾರಿ ಹಳ್ಳ ನಿವೇಶನಕ್ಕಾಗಿ ಖರೀದಿಸಿದ ಎಲ್ಲಾ ಜಮೀನುಗಳಿಗೆ ಸರ್ಕಾರಿ ಹಳ್ಳ ಇರುವುದರಿಂದ ವಾಸಸ್ಥಾನಕ್ಕ ಯೋಗ್ಯವಲ್ಲದಂತಾಗಿದೆ. ಆದ ಕಾರಣ ಈ ನಿವೇಶನಗಳನ್ನು ಏನು ಅರಿಯದ ಬಡವರಿಗೆ ಹಂಚಿಕೆ ಮಾಡಿ ಅವರನ್ನು ಸಾವಿನದವಡೆಗೆ ತಳ್ಳಿದಂತಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಮೇಲಾಧಿಕಾರಿಗಳು ಈ ಜಮೀನಿನ ಬಗ್ಗೆ ಸೂಕ್ತ ತನಿಖೆ ನಡೆಸಿ ನಂತರ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕೆಂದು ಆಗ್ರಹಿಸಿದರು.

ಕೆಲ ಪುರಸಭೆಯ ಸದಸ್ಯರು ಒಂದು ಖಾಲಿ ನಿವೇಶನ ಫಲಾನುಭವಿಗಳಿಗೆ ನೀಡಲು ಸುಮಾರು ₹25,000 ರಿಂದ ₹30,000 ವರೆಗೆ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ. ಅದಕ್ಕೆ ಸಂಬಂಧಪಟ್ಟಂತೆ ಆಡಿಯೋ ಹಾಗೂ ವಿಡಿಯೋ ಸಂಭಾಷಣೆಗಳು ಲಭ್ಯವಾಗಿವೆ. ಸೂಕ್ತ ಸಮಯಕ್ಕೆ ಅದನ್ನು ಮಾಧ್ಯಮದ ಮುಂದೆ ಹಾಜರುಪಡಿಸುತ್ತೇನೆ. ಹಾಗೂ ಈ ವಿಷಯಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಮಟ್ಟದಲ್ಲಿ ಉಗ್ರವಾದ ಹೋರಾಟ ಮಾಡಲು ನಿರ್ಧರಿಸಿದ್ದೆವೆ ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *