ಮುಂಡರಗಿ, ಮೇ 2: ಜಿಲ್ಲೆಯ ಧಾರ್ಮಿಕ ಕೇಂದ್ರವಾಗಿರುವ ಮುಂಡರಗಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಮಠಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಐಪಿಎಸ್ ಅಧಿಕಾರಿಯಾದ ಶ್ರೀ ರವಿ ಡಿ. ಚೆನ್ನಣ್ಣವರ ಅವರು ಇಂದು ಪೂಜ್ಯರ ದರ್ಶನಕ್ಕಾಗಿ ಶ್ರೀಮಠಕ್ಕೆ ಭೇಟಿ ನೀಡಿದರು.
ತಮ್ಮ ಈ ವಿಶೇಷ ಭೇಟಿಯ ಸಂದರ್ಭದಲ್ಲಿ ಮಠದ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಶ್ರೀ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳ ಆಶೀರ್ವಾದವನ್ನು ಪಡೆದರು.
ಪೂಜ್ಯರು ಆಧ್ಯಾತ್ಮ ಪಥದಲ್ಲಿನ ಮೌನ ಪ್ರವೃತ್ತಿಯಲ್ಲಿ ತೊಡಗಿದ್ದ ಕಾರಣ, ಮಠದ ಆಡಳಿತಾಧಿಕಾರಿಗಳು ಶ್ರೀ ರವಿ ಡಿ. ಚೆನ್ನಣ್ಣವರ ಅವರಿಗೆ ಸ್ವಾಗತವನ್ನು ಕೋರಿದರು ಹಾಗೂ ಸಮೀಕ್ಷಾತ್ಮಕ ಮಾಹಿತಿ ನೀಡಿದರು. ಅವರು, ಶ್ರೀಮಠದ ಅಡಿಯಲ್ಲಿ ನಡೆಯುತ್ತಿರುವ ಅನ್ನದಾನೀಶ್ವರ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸಮಾರಂಭದ ಆಹ್ವಾನವನ್ನು ಈ ಸಂದರ್ಭದಲ್ಲಿಯೇ ಅಧಿಕೃತವಾಗಿ ನೀಡಿದರು.

ಮೇಲಿನ ಪೋಸ್ಟ್ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಈ ಆಮಂತ್ರಣವನ್ನು ಗೌರವದಿಂದ ಸ್ವೀಕರಿಸಿದ ಐಪಿಎಸ್ ಅಧಿಕಾರಿ, “ಖಂಡಿತವಾಗಿ ಈ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ. ಶ್ರೀಮಠದ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳಲ್ಲಿ ನನ್ನಿಂದಾದ ಸಹಕಾರವನ್ನು ಸದಾ ನೀಡಲು ಸಿದ್ಧನಾಗಿದ್ದೇನೆ,” ಎಂದು ವಿಶ್ವಾಸದ ಮಾತುಗಳನ್ನು ಹೇಳಿದರು. “ಪೂಜ್ಯರ ದರ್ಶನ ಹಾಗೂ ಆಶೀರ್ವಾದ ನನ್ನ ಜೀವನದ ಒಂದು ಪುಣ್ಯಕ್ಷಣವಾಗಿದೆ,” ಎಂದು ಆತ್ಮೀಯ ಭಾವದೊಂದಿಗೆ ಅವರು ವ್ಯಕ್ತಪಡಿಸಿದರು.

ಇದೇ ವೇಳೆ ರವಿ ಚೆನ್ನಣ್ಣವರಿಗೆ ಪೂಜ್ಯರು ಶಾಲು ಹೊದಿಸಿ ಸನ್ಮಾನಿಸಿ ಆಶಿರ್ವದಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ, ಹಾಗೂ ಆರ್.ಎಲ್. ಪೋಲಿಸ್ ಪಾಟೀಲ, ಎಂ.ಜಿ. ಗಚ್ಚಣ್ಣನವರ, ಎಸ್.ಸಿ. ಚಕ್ಕಡಿಮಠ, ಎನ್.ಎನ್. ಕಲಕೇರಿ, ಮಂಜುನಾಥ ಮುಧೋಳ, ಬೀಮರೆಡ್ಡಿ ರಾಜೂರ ಹಾಗೂ ಹಾಲಯ್ಯ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು, ಶ್ರೀ ರವಿ ಡಿ. ಚೆನ್ನಣ್ಣವರರ ಆತ್ಮೀಯ ಮಾತುಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದರು.
