4
ಭಾರತ ತಂಡದ ಕ್ರಿಕೇಟ್ ಆಟಗಾರ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. 38 ರ ಹರೆಯದ ಈ ಸ್ಪಿನ್ನರ್ ಭಾರತದ ಪರ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಟೆಸ್ಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯರ ಪೈಕಿ ಅನಿಲ್ ಕುಂಬ್ಳೆ ನಂತರ ಅಶ್ವಿನ್ 2ನೇ ಸ್ಥಾನದಲ್ಲಿದ್ದಾರೆ. ಅಶ್ವಿನ್ ನಿವೃತ್ತಿ ಘೋಷಣೆ ಕ್ರಿಕೇಟ್ ಅಭಿಮಾನಿಗಳಿಗೆ ಬೇಸರ ತಂದಿದ್ದು, ಅಶ್ವಿನ್ ಭಾರತೀಯ ಸ್ಪಿನ್ ದಾಳಿಯ ಮುಂಚೂಣಿಯಲ್ಲಿದ್ದವರು. ಆದರೆ ಆಸ್ಟ್ರೇಲಿಯಾಕ್ಕೆ ಬಂದು ದಿಢೀರ್ ನಿವೃತ್ತಿ ನಿರ್ಧಾರಕ್ಕೆ ಬಂದಿರುವುದು ಆಘಾತಕಾರಿ ಎಂದು ಅವರ ಅಭಿಮಾನಿವರ್ಗ ಪ್ರಶ್ನಿಸಿದೆ.