ಕನ್ನಡದ ಚಿತ್ರನಟ ಉಪೇಂದ್ರ ಯಾವುದೇ ಸಿನಿಮಾ ನಿರ್ದೇಶನ ಮಾಡಿದರೂ ಅದರಲ್ಲೊಂದು ಸಮಾಜಕ್ಕೆ ವಿಶೇಷ ಸಂದೇಶ ಇದ್ದೇ ಇರುತ್ತದೆ. ಅದೇ ರೀತಿ ಈ ಬಾರಿ 10 ವರ್ಷಗಳ ನಂತರ ಉಪೇಂದ್ರ ನಿರ್ದೇಶಿಸಿರುವ ‘UI’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
ಮುಂದಿನ 2040 ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ. ಜಾಗತಿಕ ತಾಪಮಾನ ಏರಿಕೆ, ಕೋವಿಡ್ 19, ಹಣದುಬ್ಬರ, ಎಐ, ನಿರುದ್ಯೋಗ, ಯುದ್ಧಗಳ ಬಗ್ಗೆ ಉಲ್ಲೇಖ ಮಾಡಲಾಗಿದ್ದು, ನಂತರದಲ್ಲಿ 2040ರಲ್ಲಿನ ಹಸಿವು, ಜಾತಿಗಳ ನಡುವಿನ ಹೊಡೆದಾಟಗಳ ಬಗ್ಗೆ ತೋರಿಸಲಾಗಿದೆ. ಕೊನೆಯಲ್ಲಿ ಉಪೇಂದ್ರ “ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ,” ಎಂದು ಹೇಳುತ್ತಾರೆ. ಡಿಸೆಂಬರ್ 20 ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.